ಕ್ರೈಸ್ತ ಸ್ವಚ್ಛತಾ ಕಾರ್ಮಿಕನು ಕುರಾನಿನ ತಥಾಕಥಿತ ಅವಮಾನ ಮಾಡಿರುವುದರ ದುಷ್ಪರಿಣಾಮ !

ಪೈಸಲಾಬಾದ (ಪಾಕಿಸ್ತಾನ) – ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿನ ಪೈಸಲಾಬಾದ ಜಿಲ್ಲೆಯಲ್ಲಿನ ಕೆಲವು ಚರ್ಚಗಳನ್ನು ಧ್ವಂಸ ಮಾಡಿ ಬೆಂಕಿ ಹಚ್ಚಿರುವ ಘಟನೆಗಳು ಘಟಿಸಿದವೆ. ಒಬ್ಬ ಕ್ರೈಸ್ತ ಸ್ವಚ್ಛತಾ ಕಾರ್ಮಿಕನು ಕುರಾನಿನ ಅವಮಾನ ಮಾಡಿರುವ ಆರೋಪದಲ್ಲಿ ಈ ದಾಳಿಗಳು ನಡೆಸಲಾಗಿದೆ. ಮತಾಂಧ ಮುಸಲ್ಮಾನರು ಕೆಲವು ಕ್ರೈಸ್ತರ ಮನೆಗಳ ಮೇಲೆ ಕೂಡ ದಾಳಿ ನಡೆಸಿದ್ದಾರೆ. ಪೊಲೀಸರು ಈ ಪ್ರಕರಣದಲ್ಲಿ ಕ್ರೈಸ್ತ ಸ್ವಚ್ಛತಾ ಕಾರ್ಮಿಕನ ವಿರುದ್ಧ ದೂರು ದಾಖಲಿಸಿದ್ದಾರೆ. (ಕಾನೂನು ಕೈಗೆತ್ತಿಕೊಳ್ಳುವ ಮತಾಂಧ ಮುಸಲ್ಮಾನರ ಮೇಲೆ ಯಾವುದೇ ಕ್ರಮ ಕೈಗೊಳ್ಳಲಾಗುವುದಿಲ್ಲ, ಇದೇ ಪಾಕಿಸ್ತಾನದ ವೈಶಿಷ್ಟತೆ ಆಗಿದೆ ! – ಸಂಪಾದಕರು)
पाकिस्तान के पंजाब प्रांत में ईशनिंदा के आरोप में भीड़ ने कई चर्चों में तोड़फोड़ और आगजनी की #Pakistan https://t.co/5sJKLdVii5
— News18 India (@News18India) August 17, 2023
೧. ಪಾಕಿಸ್ತಾನದ ದೈನಿಕ ‘ಡಾನ್’ ನಿಡಿರುವ ವಾರ್ತೆಯನುಸಾರ ಪೈಸಲಾಬಾದ ಜಿಲ್ಲೆಯಲ್ಲಿನ ಜಾರನವಾಲಾ ತಾಲೂಕಿನಲ್ಲಿ ಇಮ್ರಾನ್ ಭಟ್ಟಿ ಈ ಪಾದ್ರಿಯು ನೀಡಿರುವ ಮಾಹಿತಿಯ ಪ್ರಕಾರ ಇಲ್ಲಿಯ ಈಸಾ ನಗರಿ ಪ್ರದೇಶದಲ್ಲಿನ ಸಲ್ವೇಶನ್ ಆರ್ಮಿ ಚರ್ಚ್, ಯುನೈಟೆಡ್ ಪ್ರೈಸ್ಬಿತೆರಿಯನ್ ಚರ್ಚ್, ಎಲಾಈಡ ಫೌಂಡೇಶನ್ ಚರ್ಚ್ ಮತ್ತು ಶಹರುನವಾಲಾ ಚರ್ಚ್ ಇವುಗಳ ಧ್ವಂಸ ಮಾಡಲಾಗಿದೆ. ಇದರ ಜೊತೆಗೆ ಸಂಬಂಧಪಟ್ಟ ಸ್ವಚ್ಛತಾ ಕಾರ್ಮಿಕನ ಮನೆಯ ಮೇಲೆ ಕೂಡ ದಾಳಿ ನಡೆಸಿ ನೆಲಸಮ ಮಾಡಿದ್ದಾರೆ.
೨. ‘ಪಾಕಿಸ್ತಾನ ಬಿಷಪ್ ಚರ್ಚ್’ನ ಅಧ್ಯಕ್ಷ ಆಝಾದ್ ಮಾರ್ಷಲ್ ಇವರು ಟ್ವೀಟ್ ಮಾಡಿ, ನಾವು ಬಿಷಪ್ (ಹಿರಿಯ ಪಾದ್ರಿ), ಪಾದ್ರಿ ಮತ್ತು ಸಾಮಾನ್ಯ ನಾಗರಿಕರು ಜಾರನವಾಲಾ ಇಲ್ಲಿಯ ಘಟನೆಯಿಂದ ದುಃಖಿತರಾಗಿದ್ದೇವೆ. ನಾನು ಈ ಸ್ವೀಟ್ ಮಾಡುತ್ತಿರುವಾಗಲೇ ಒಂದು ಚರ್ಚ್ ಗೆ ಬೆಂಕಿ ಹಚ್ಚಿ ಸುಡಲಾಯಿತು. ಅಲ್ಲಿ ಬೈಬಲ್ ನ ಅವಮಾನ ಮಾಡಲಾಗುತ್ತಿದೆ. ಕ್ರೈಸ್ತರು ಕುರಾನಿನ ಅವಮಾನ ಮಾಡಿರುವ ಸುಳ್ಳು ಆರೋಪ ಹೊರಿಸಿ ಅವರಿಗೆ ಕಿರುಕುಳ ನೀಡಲಾಗುತ್ತದೆ. ನಾವು ನ್ಯಾಯಕ್ಕಾಗಿ ಸರಕಾರದ ಬಳಿ ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳಲು ಹಾಗೂ ಕ್ರೈಸ್ತರಿಗೆ ರಕ್ಷಣೆ ನೀಡಲು ಆಗ್ರಹಿಸುತ್ತಿದ್ದೇವೆ.
೩. ಚರ್ಚ್ ಮೇಲಿನ ದಾಳಿಯ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುತ್ತಿವೆ. ಇದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ಕೂಡ ವ್ಯಕ್ತವಾಗುತ್ತಿದೆ. ಓರ್ವ ವ್ಯಕ್ತಿ, ಇದೇ ಕಟ್ಟರವಾದಿ ಮತ್ತು ಭಯೋತ್ಪಾದಕ ದೇಶವಾಗಿರುವ ಪಾಕಿಸ್ತಾನದ ನಿಜವಾದ ಮುಖ ಎಂದು ಬರೆದಿದ್ದಾರೆ.
ಸಂಪಾದಕೀಯ ನಿಲುವುಭಾರತದಲ್ಲಿ ಮತಾಂಧ ಮುಸಲ್ಮಾನರು ಹಿಂದೂಗಳ ದೇವಸ್ಥಾನದ ಮೇಲೆ ದಾಳಿಗಳನ್ನು ನಡೆಸಿ ಧ್ವಂಸ ಮಾಡುತ್ತಾರೆ; ಆದರೆ ಹಿಂದೂಗಳು ಎಂದೂ ಹಿಂದೂಧರ್ಮದ ಅವಮಾನ ಮಾಡಿದೆ ಎಂದು ಮಸೀದಿ, ಮದರಸಾಗಳ ಮೇಲೆ ದಾಳಿ ನಡೆಸಿ ಧ್ವಂಸ ಮಾಡಿಲ್ಲ, ಇದನ್ನು ಜಾತ್ಯತೀತರು ತಿಳಿದುಕೊಳ್ಳುವರೇ ? |
ಅಮೆರಿಕದಿಂದ ಭಾರತದ ಮೇಲೆ ಶೇ. ೧೦ ರಷ್ಟು ಹೆಚ್ಚುವರಿ ಆಮದು ಸುಂಕ : Import Duty on India
ನಾಗರಿಕ ಅಣು ಒಪ್ಪಂದಕ್ಕಾಗಿ ಸೌದಿ ಅರೇಬಿಯಾ ಇಸ್ರೇಲ್ ಅನ್ನು ಒಪ್ಪಿಗೆ ನೀಡಬೇಕು ! : Recognize Israel
ಇರಾನ್ ಸ್ಥಿತಿ ಅತ್ಯಂತ ಶೋಚನೀಯ ! – ಡೊನಾಲ್ಡ್ ಟ್ರಂಪ್
ಗಡಿಯಾಚೆಗಿನ ಭಯೋತ್ಪಾದನೆಯಿಂದಾಗಿ ಸಹಕಾರದ ಆಧಾರವೇ ಮುಗಿದಿದೆ!
ಗಲ್ಲಿಗೇರಿಸಬಹುದು, ಎಂಬುದು ತಿಳಿದಿದ್ದರೂ ನಾನು ಬಾಂಗ್ಲಾದೇಶಕ್ಕೆ ಹಿಂದಿರುಗುತ್ತೇನೆ! – ಮಾಜಿ ಪ್ರಧಾನಿ ಶೇಖ ಹಸೀನಾ, ಬಾಂಗ್ಲಾದೇಶ
15 ವರ್ಷಕ್ಕಿಂತ ಕಡಿಮೆ ಮಕ್ಕಳಿಗೆ ಸೋಷಿಯಲ್ ಮೀಡಿಯಾ ನಿಷೇಧ: ಫ್ರಾನ್ಸ್ : France Social Media Ban