ಆಗಸ್ಟ್ ೧೭ ರಂದು ‘ಚಂದ್ರಯಾನ 3’ ರ ‘ಲ್ಯಾಡರ್’ ಬೇರ್ಪಡಲಿದೆ !

ಬೆಂಗಳೂರು – ಚಂದ್ರನ ಕಕ್ಷೆಯಲ್ಲಿ ಪ್ರದಕ್ಷಿಣೆ ಹಾಕುವ ‘ಚಂದ್ರಯಾನ 3’ ಈಗ ಚಂದ್ರನ ಹತ್ತಿರ ತಲುಪಿದೆ. ಈಗ ‘ಚಂದ್ರಯಾನ 3’ ಚಂದ್ರನಿಂದ ೧೫೩ ಕಿಲೋಮೀಟರ್ ನಿಂದ ಗರಿಷ್ಟ ೧೬೩ ಕಿಲೋಮೀಟರ್ ಅಂತರದಲ್ಲಿದೆ. ಆಗಸ್ಟ್ ೧೭ ರಂದು ‘ಚಂದ್ರಯಾನ 3’ರ ಲ್ಯಾಡರ್ ‘ಪ್ರೊಪಲ್ಶನ್ ಮೊಡ್ಯೂಲ್’ ನಿಂದ ಬೇರ್ಪಡಿಸಲಾಗುವುದು. ಇದೇ ಹಂತದಲ್ಲಿ ಈ ‘ಚಂದ್ರಯಾನ 3’ರ ಪ್ರವಾಸ ಮಹತ್ವದ್ದು ಆದರೆ ನಿರ್ಣಾಯಕ ಬದಲಾವಣೆ ಆಗುವುದು. ಈ ಕಕ್ಷೆಗೆ ತಲುಪಿದ ನಂತರ ‘ಚಂದ್ರಯಾನ’ ಲ್ಯಾಡರ್ ನಿಂದ ಬೇರ್ಪಡಿಸುವ ಪ್ರಕ್ರಿಯೆ ಆರಂಭವಾಗುವುದು. ಎಲ್ಲವೂ ಅಂದುಕೊಂಡಂತೆ ನಡೆದರೆ ಆಗಸ್ಟ್ ೨೩ ರಂದು ನಿಯೋಜಿತ ಸಮಯದಲ್ಲಿ ‘ಚಂದ್ರಯಾನ 3’ ಚಂದ್ರನ ಮೇಲೆ ಇಳಿಯುವುದು.