ನಗರ (ಮಹಾರಾಷ್ಟ್ರ) – ಸ್ವಾತಂತ್ಯ್ರದಿನದಂದು ಎಂದರೆ ಆಗಸ್ಟ್ ೧೫ ರಂದು ನಗರದ ಸಮೀಪದಲ್ಲಿರುವ ಭುಯಿಕೋಟ ಐತಿಹಾಸಿಕ ಕೋಟೆಯಲ್ಲಿ ದೇಶವಿರೋಧಿ ಘೋಷಣೆಗಳನ್ನು ನೀಡಲಾಗಿದೆ. ಈ ಸಮಯದಲ್ಲಿ ಅಲ್ಲಿ ಬಂದೋಬಸ್ತಗಾಗಿ ನೇಮಕವಾಗಿದ್ದ ಭಾರತೀಯ ಸೈನಿಕರು ಮತ್ತು ಭಿಂಗಾರ ಕ್ಯಾಂಪ್‌ದಲ್ಲಿನ ಪೊಲೀಸರು 5 ಜನರನ್ನು ಬಂಧಿಸಿದ್ದಾರೆ. ಪರವೇಜ್ ಇಜಾಜ್ ಪಟೇಲ(ವಯಸ್ಸು 21) ಮತ್ತು ಅರಬಾಜ್ ಶೇಖ ಸಹಿತ ಮೂವರು ಅಪ್ರಾಪ್ತ ಮಕ್ಕಳ ಸಮಾವೇಶವಿದೆ.
1. ಭುಯಿಕೋಟ ಕೋಟೆಯಲ್ಲಿ ಪಂಡಿತ ನೆಹರು, ಮೌಲಾನಾ ಆಝಾದ್, ಸರದಾರ ವಲ್ಲಭಭಾಯಿ ಪಟೇಲ್ ಇವರನ್ನು ಆಂಗ್ಲರು ಸೆರೆಮನೆಯಲ್ಲಿಟ್ಟಿದ್ದರು. ಆಗ ಪಂಡಿತ ನೆಹರು ಅವರು ‘ಡಿಸ್ಕವರಿ ಆಫ್ ಇಂಡಿಯಾ’ ಎಂಬ ಗ್ರಂಥವನ್ನು ಇದೇ ಸ್ಥಳದಲ್ಲಿ ಇರುವಾಗ ಬರೆದಿದ್ದರು.
2. ಸ್ವಾತಂತ್ಯ್ರದಿನ ಮತ್ತು ಗಣರಾಜ್ಯೋತ್ಸವ ದಿನ ಹೀಗೆ ರಾಷ್ಟ್ರೀಯ ಹಬ್ಬಗಳ ಸಮಯಕ್ಕೆ ಭುಯಿಕೋಟ ಐತಿಹಾಸಿಕ ಕೋಟೆಯನ್ನು ಪ್ರೇಕ್ಷಕರಿಗೆ ನೋಡಲು ತೆರೆದಿರುತ್ತದೆ; ಆದರೆ ಸಧ್ಯಕ್ಕೆ ಈ ಕೋಟೆ ಸೇನೆಯ ವಶದಲ್ಲಿದೆ.
ಸಂಪಾದಕರ ನಿಲುವು* ಸ್ವಾತಂತ್ಯ್ರ ದಿನದಂದು ದೇಶವಿರೋಧಿ ಘೋಷಣೆಗಳನ್ನು ನೀಡುವವರನ್ನು ಭಾರತದಿಂದ ಶಾಶ್ವತವಾಗಿ ಗಡಿಪಾರು ಮಾಡಿ ! |