ಹೃದ್ರೋಗದ ಲಕ್ಷಣಗಳು ಮತ್ತು ತಪ್ಪು ಕಲ್ಪನೆಗಳು

ಮನೆ ಮನೆಯಲ್ಲಿ ಆಯುರ್ವೇದ

೩೦ ರಿಂದ ೩೫ ವಯಸ್ಸಿನ ವಿಶೇಷವಾಗಿ ಪುರುಷರಲ್ಲಿ ಎದೆಯಲ್ಲಿ ಒತ್ತಡ ಬಂದಂತಾಗುವುದು, ಹೃದಯದ ಬಡಿತ ಹೆಚ್ಚಾಗುವುದು, ವಿನಾಕಾರಣ ಹೆದರಿಕೆಯಾಗುವುದು ಇತ್ಯಾದಿ ಲಕ್ಷಣಗಳು ಕಂಡುಬರುವ ಪ್ರಮಾಣವು ಹೆಚ್ಚಾಗಿದೆ. ಕೆಲವರಿಗಂತೂ ತಮಗೆ ಹೃದ್ರೋಗವೇ ಆಗಿದೆ ಎಂಬ ಸಂದೇಹ ಬರಲು ಪ್ರಾರಂಭವಾಗುತ್ತದೆ. ಕೆಲವು ಅವಶ್ಯವಿರುವ ಪರೀಕ್ಷೆಗಳನ್ನು ಮಾಡಿಸಿದರೆ ಇದರ ಬಗ್ಗೆ ಸ್ಪಷ್ಟತೆ ಬರುತ್ತದೆ; ಆದರೆ ಹೆಚ್ಚಿನ ಸಲ ಎಲ್ಲ ಪರೀಕ್ಷೆಗಳ ವರದಿಗಳು ಸಾಮಾನ್ಯ (ನಾರ್ಮಲ್) ಆಗಿ ಬರುತ್ತವೆ. ಹಾಗಾದರೆ ಹೀಗಾಗಲು ಕಾರಣ ಏನಿರಬಹುದು ?

ವೈದ್ಯ ಪರೀಕ್ಷಿತ ಶೇವಡೆ

ತಿನ್ನುವ ಪದ್ಧತಿ ಅಯೋಗ್ಯವಾಗಿರುವುದು (ಹಸಿವೆ ಇಲ್ಲದಾಗ ಊಟ ಮಾಡುವುದು, ಅತಿಹೆಚ್ಚು ಮಸಾಲೆ ಪದಾರ್ಥಗಳನ್ನು ತಿನ್ನುವುದು, ರಾತ್ರಿ ತಡವಾಗಿ ಊಟ ಮಾಡುವುದು) ಅಜೀರ್ಣ ವಾಗಿ ಅದರಿಂದ ಉತ್ಪನ್ನವಾಗುವ ಆಮ್ಲಪಿತ್ಥ ಅಥವಾ ಗ್ರಹಣಿಯಂತಹ ಕಾಯಿಲೆಗೆ ಕಾರಣವಾಗಬಹುದು. (ಕೆಲವು ಬಾರಿ ಆಮ್ಲಪಿತ್ತದ ಲಕ್ಷಣವು ಮುಂದೆ ಆಗಬಹುದಾದ ಹೃದ್ರೋಗದ (ಹೃದಯವಿಕಾರ) ಪೂರ್ವರೂಪ(ಭಾವೀ) ಆಗಿರುವ ಸಾಧ್ಯತೆಯಿದೆ, ಉಪಚರಿಸುವ ವೈದ್ಯರು ಇದನ್ನು ಗಮನಿಸಬೇಕು) ‘ಪಾಂಡು’ ಎಂಬ ಹೆಸರಿನ ರೋಗದಲ್ಲಿಯೂ ಇಂತಹ ಲಕ್ಷಣಗಳು ಕಂಡುಬರುತ್ತವೆ. ಇದಕ್ಕೆ ಜೀರ್ಣವಾಗಲು ಕಠಿಣ ವಾದ, ತಂಪು, ತಂಗಳ ಆಹಾರವು ಹೆಚ್ಚಾಗಿ ಕಾರಣವಾಗಿರುತ್ತದೆ.

‘ಚಿಂತೆ’ ಇದಕ್ಕೆ ಆಧುನಿಕ ವೈದ್ಯರು ‘Midlife Crisis’ ಎನ್ನುತ್ತಾರೆ. ಹಿಂದಿನ ಕಾಲದಲ್ಲಿ ಸುಮಾರು ೪೦ ರಿಂದ ೬೦ ವರ್ಷ ವಯಸ್ಸಿನಲ್ಲಿ ಕಂಡುಬರುವ ಈ ಲಕ್ಷಣಗಳು ಈಗ ಇನ್ನೂ ಚಿಕ್ಕ ವಯಸ್ಸಿನವರಲ್ಲಿ ಕಂಡುಬರುತ್ತಿವೆ. ವಯಸ್ಸಿನ ಈ ಹಂತದಲ್ಲಿ ನಾವು ಕೆರಿಯರ, ಕುಟುಂಬ ಮತ್ತು ಆರೋಗ್ಯದ ಕಡೆ ಸರಿಯಾಗಿ ಗಮನಕೊಡುತ್ತಿದ್ದೇವೆಯೋ ಇಲ್ಲ ? ಎಂಬ ವಿಚಾರಗಳು ಅತಿಯಾಗಿ ‘ರಸವಹ ಸ್ರೋತಸ’ (ಆಹಾರದ ಜೀರ್ಣಕ್ರಿಯೆಯ ನಂತರ ದೇಹವನ್ನು ಹಿಡಿದಿಟ್ಟುಕೊಳ್ಳುವ ೭ ಲೋಹಗಳಲ್ಲಿ ಮೊದಲನೆಯದು, ಲೋಹ ಅಂದರೆ ರಸದ ಲೋಹದ ಪೌಷ್ಟಿಕಾಂಶದ ಮಾರ್ಗವಾಗಿದೆ ಎಂಬ ಹೆಸರಿನ ಶರೀರದ ನಲಿಕೆಯು ದೂಷಿತ ವಾಗುತ್ತದೆ. ಆದುದರಿಂದ ಅದರ ಮೂಲವಾಗಿರುವ ಹೃದಯದ ಲಕ್ಷಣಗಳು ಉತ್ಪನ್ನವಾಗತೊಡಗು ತ್ತವೆ. ಊಟದ ಸಮಯವನ್ನು ಪಾಲಿಸುವುದು, ಸಾಕಷ್ಟು ನಿದ್ದೆ, ವ್ಯಾಯಾಮ, ಪ್ರಾಣಾಯಾಮ, ಧ್ಯಾನ ಇವುಗಳ ಸಹಾಯದಿಂದ ಮತ್ತು ಸ್ವಲ್ಪ ಕಾಲ ಆಯುರ್ವೇದದ ಉಪಚಾರ ಪಡೆದು ಈ ಲಕ್ಷಣಗಳಿಂದ ಮುಕ್ತಿ ಪಡೆಯಬಹುದು. ನಿಮಗೆ ಏನೂ ಆಗುವುದಿಲ್ಲ ಎಂಬ ವಿಷಯವನ್ನು ಮೊದಲು ಗಮನದಲ್ಲಿಡಿ. ನಾವೇ ಆಲೋಚಿಸುವುದಕ್ಕಿಂತ ಅಥವಾ ‘ಗೂಗಲ’ನಲ್ಲಿ ಹುಡುಕುವುದಕ್ಕಿಂತ ಸಮಯಕ್ಕೆ ಸರಿಯಾಗಿ ವೈದ್ಯರ ಬಳಿಗೆ ಹೋಗಿ ಮತ್ತು ಚಿಕ್ಕ ಪುಟ್ಟ ಸಂಗತಿಗಳಿಂದ ಆನಂದವನ್ನು ಪಡೆ ಯುತ್ತಾ ಜೀವನದಲ್ಲಿ ಆನಂದವನ್ನು ಅನುಭವಿಸಿರಿ !

– ವೈದ್ಯ ಪರೀಕ್ಷಿತ ಶೇವಡೆ, ಆಯುರ್ವೇದ ವಾಚಸ್ಪತಿ, ಡೊಂಬಿವಲಿ, ಮಹಾರಾಷ್ಟ್ರ. (ಆಧಾರ : ಫೇಸಬುಕ್)