ಕಲಬುರ್ಗಿ ಜಿಲ್ಲೆಯ ಗಾಣಗಾಪುರ ಕ್ಷೇತ್ರದ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ಸನಾತನ ನಿರ್ಮಿತ ಗ್ರಂಥಗಳ ಪ್ರದರ್ಶನ

ಕಲಬುರ್ಗಿ – ಕಲಬುರ್ಗಿ ಜಿಲ್ಲೆಯ ಗಾಣಗಾಪುರ ಕ್ಷೇತ್ರದ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ಸನಾತನ ಸಂಸ್ಥೆ ವತಿಯಿಂದ ದಿನಾಂಕ ಆಗಸ್ಟ್ 13, 2023 ರ ಭಾನುವಾರ ದೀಪಪ್ರಜ್ವಲನೆಯೊಂದಿಗೆ ಗ್ರಂಥ ಪ್ರದರ್ಶನ ಪ್ರಾರಂಭಿಸಲಾಯಿತು. ಗಾಣಗಾಪುರದ ಹಿರಿಯ ಪುರುಹಿತರಾದ ಶ್ರೀ. ಚಂದ್ರವಿಲಾಸ ಪೂಜಾರಿರವರು ದೀಪಪ್ರಜ್ವಲನೆ ಮಾಡಿದರು. ಈ ಸಂದರ್ಭದಲ್ಲಿ ಸ್ಥಳೀಯ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶ್ರೀ. ಶಿವಚಾಲಪ ಗನೇರ, ವಿಶ್ವ ಹಿಂದೂ ಪರಿಷತ್ತಿನ ಶ್ರೀ. ರೋಹಿತ ಪೂಜಾರಿ ಮತ್ತು ಶ್ರೀ. ಸಂಗನಗೌಡ ಪಾಟೀಲ ಹಾಗೂ ಸ್ಥಳೀಯ ಧರ್ಮಾಭಿಮಾನಿಗಳು ಉಪಸ್ಥಿತರಿದ್ದರು. ಈ ಗ್ರಂಥ ಪ್ರದರ್ಶನವು ಪ್ರತಿ ಗುರುವಾರ ಮತ್ತು ಭಾನುವಾರ ಇರುತ್ತದೆ.

ಗಮನಾರ್ಹ ಅಂಶ

ಠಾಣೆ, ಸೋಲಾಪುರ, ಧಾರವಾಡ ಮತ್ತು ಅನೇಕ ಜಿಲ್ಲೆಗಳಿಂದ ಬಂದಂತ ಯಾತ್ರಿಕರು ಗ್ರಂಥ ಪ್ರದರ್ಶನಕ್ಕೆ ನಮಸ್ಕಾರ ಮಾಡಿ ಮುಂದೆ ಹೋಗುತ್ತಿದ್ದರು.