|
ನೂಹ (ಹರಿಯಾಣ) – ಹಿಂದುಗಳ ಜಲಾಭಿಷೇಕ ಯಾತ್ರೆಯ ಮೇಲೆ ದಾಳಿ ನಡೆಸುವ ಮತಾಂಧ ಮುಸಲ್ಮಾನರ ಕೃತ್ಯವನ್ನು ನಿಷೇಧಿಸುವುದಕ್ಕಾಗಿ ಹರಿಯಾಣದಲ್ಲಿನ ರೇವಾರಿ, ಝಜ್ಜರ ಮತ್ತು ಮಹೇಂದ್ರಗಡ ಈ ೩ ಜಿಲ್ಲೆಗಳಲ್ಲಿನ ೫೦ ಗ್ರಾಮ ಪಂಚಾಯತಿಯಿಂದ ಒಂದು ಆದೇಶ ಜಾರಿ ಮಾಡಲಾಗಿತ್ತು. ಅದರ ಅಂತರ್ಗತ ಅವರ ಗ್ರಾಮದಲ್ಲಿ ಮುಸಲ್ಮಾನರಿಗೆ ಪ್ರವೇಶ ನಿಷೇಧ ಘೋಷಿಸಿದರು. ಇದರಿಂದ ಹರಿಯಾಣ ಸರಕಾರವು ಸಂಬಂಧ ಪಟ್ಟ ಗ್ರಾಮ ಪಂಚಾಯತಿಗೆ ಕಾರಣ ನೀಡಿ ನೋಟಿಸ್ ನೀಡಿದ್ದು ಅದರ ಬಗ್ಗೆ ಉತ್ತರ ನೀಡಲು ಆದೇಶ ನೀಡಿದ್ದರು. ಈ ನೋಟಿಸ್ ‘ಹರಿಯಾಣ ಗ್ರಾಮ ಪಂಚಾಯತ ರಾಜ ಕಾನೂನಿನ ಕಲಂ ೫೧ ರ ಅಂತರ್ಗತ ನೀಡಿದ್ದರು, ಎಂದು ರೇವರಿ ಜಿಲ್ಲಾ ಪೋಲಿಸ ಉಪಯುಕ್ತ ಮಹಮ್ಮದ್ ಇಮ್ರಾನ್ ರಜಾ ಇವರು ಮಾಹಿತಿ ನೀಡಿದ್ದರು. ಈ ಕಲಂದಿಂದ ಸಂಬಂಧಿತ ಸರಪಂಚರಿಗೆ ವಜಾ ಮಾಡಬಹುದು.
Haryana: Show cause notices issued to gram panchayats over letters banning entry of Muslims into villages after Nuh violencehttps://t.co/hXxWzEfAtb
— OpIndia.com (@OpIndia_com) August 13, 2023
೧. ಹರಿಯಾಣಾದ ಭಾಜಪ ಸರಕಾರದ ರಾಜ್ಯ ವಿಕಾಸ ಮತ್ತು ಪಂಚಾಯತ ಸಚಿವ ದೇವೇಂದ್ರ ಸಿಂಹ ಬಬಲಿ ಇವರು ಗ್ರಾಮ ಪಂಚಾಯತಿಯಿಂದ ಜಾರಿಗೊಳಿಸಲಾದ ಆದೇಶವನ್ನು ಕಾನೂನು ಬಾಹಿರ ಎಂದು ಹೇಳಿ ಕಠಿಣ ಕ್ರಮ ಕೈಗೊಳ್ಳಲಾಗಬಹುದು ಎಂದು ಹೇಳಿದರು.
೨. ಸರಪಂಚರು ಅವರ ಮತ ಮಂಡಿಸುತ್ತಾ, ಪ್ರವೇಶ ನಿಷೇಧದ ಆದೇಶ ನೂಹದಲ್ಲಿನ ಹಿಂಸಾಚಾರದ ನಂತರ ಗ್ರಾಮದಲ್ಲಿ ಶಾಂತಿ ಕಾಪಾಡುವುದಕ್ಕಾಗಿ ಹಾಗೂ ಮುಸಲ್ಮಾನ ಜನರು ಗೋವುಗಳ ಕಳ್ಳಸಾಗಾಣಿಕೆ ನಡೆಸಿದರೆ ಇದರ ಬಗ್ಗೆ ಆಗುವ ವಿರೋಧ ತಡೆಯುವದಕ್ಕಾಗಿ ಈ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಯಾವುದಾದರೂ ಸಮಾಜಕ್ಕೆ ಪ್ರವೇಶ ನಿಷೇಧ ಹೇರುವುದು, ಕಾನೂನು ರೀತಿಯಲ್ಲಿ ಅಪರಾಧವಾಗಿದೆ ಎಂದು ಗಮನಕ್ಕೆ ಬಂದ ನಂತರ ಎಲ್ಲಾ ಗ್ರಾಮದ ಸರಪಂಚರು ಪ್ರವೇಶ ನಿಷೇಧದ ಆದೇಶ ಮೊದಲೇ ಹಿಂಪಡೆದ್ದಿದರು.
ಸಂಪಾದಕೀಯ ನಿಲುವುಈ ರೀತಿ ಪ್ರವೇಶ ನಿಷೇಧ ಹೇರುವುದು ಪ್ರಜಾಪ್ರಭುತ್ವದ ವಿರುದ್ಧವಾಗಿದೆ, ಇದು ಮಾನ್ಯ ಇದೆ; ಆದರೆ ಸಂಬಂಧಿತ ಗ್ರಾಮ ಪಂಚಾಯತಿಯ ಮೇಲೆ ಇಷ್ಟೊಂದು ಕಠಿಣ ಕ್ರಮ ಕೈಗೊಳ್ಳುವ ಪರಿಸ್ಥಿತಿ ಏಕೆ ಬಂದಿತು ? ಪೊಲೀಸರು, ಸರಕಾರ ಮತ್ತು ರಾಜಕಾರಣಿಗಳು ಹಿಂದೂಗಳನ್ನು ರಕ್ಷಿಸಲು ಸಾಧ್ಯವಿಲ್ಲ. ತಮ್ಮ ರಕ್ಷಣೆ ಮಾಡುವುದಕ್ಕಾಗಿ ಹಿಂದೂಗಳಿಗೆ ಈ ರೀತಿಯ ಕೆಲವು ನಿರ್ಧಾರಗಳು ತೆಗೆದುಕೊಳ್ಳಬೇಕಾಗಿತ್ತದೆ, ಅವರಿಗೆ ಕಾನೂನಿನ ಪಾಠ ಹೇಳಲಾಗುತ್ತದೆ. ಆದ್ದರಿಂದ ಹಿಂದುಗಳು ತಮ್ಮ ರಕ್ಷಣೆಗಾಗಿ ಯಾರನ್ನು ಕೇಳಬೇಕು ? ಹಿಂದೂಗಳ ರಕ್ಷಣೆ ಮಾಡಿ ಅವರಿಗೆ ವಿಶ್ವಾಸ ನೀಡಿದರೆ ಅವರ ಮೇಲೆ ಪ್ರವೇಶ ನಿಷೇಧದ ಆದೇಶ ನೀಡುವ ಪ್ರಸಂಗವೇ ಬರುವುದಿಲ್ಲ ! |