|
ಪಲವಲ (ಹರಿಯಾಣ) – ಕಳೆದ ತಿಂಗಳು ಜುಲೈ ೩೧ ರಂದು ರಾಜ್ಯದ ನೂಹದಲ್ಲಿ ಮತಾಂಧ ಮುಸಲ್ಮಾನರಿಂದ ಹಿಂದುಗಳ ಭ್ರಜ ಮಂಡಲ ಜಲಾಭಿಷೇಕ ಯಾತ್ರೆಯ ಮೇಲೆ ದಾಳಿ ಮಾಡಿರುವುದರಿಂದ ಯಾತ್ರೆ ಪೂರ್ಣವಾಗಲಿಲ್ಲ. ಈ ದೃಷ್ಟಿಯಿಂದ ಆಗಸ್ಟ್ ೧೩ ರಂದು ಪಲವಲ ಜಿಲ್ಲೆಯಲ್ಲಿನ ಪೊಂಡರಿ ಗ್ರಾಮದಲ್ಲಿ ಎಲ್ಲಾ ಜಾತಿಯ ಹಿಂದೂ ಪಂಚಾಯತಿಯ ಆಯೋಜನೆ ಆಗಿತ್ತು. ಆ ಸಮಯದಲ್ಲಿ ಉಪಸ್ಥಿತ ಹಿಂದುಗಳು ಆಗಸ್ಟ್ ೨೮ ರಂದು ಭ್ರಜಮಂಡಲ ಜಲಾಭಿಷೇಕ ಯಾತ್ರೆ ನಡೆಸುವ ನಿರ್ಧಾರ ವ್ಯಕ್ತಪಡಿಸಿದರು. ಹಾಗೂ ಬಹುಸಂಖ್ಯಾತ ಮುಸಲ್ಮಾನ ಇರುವ ನೂಹ ಜಿಲ್ಲೆಯ ವಿಭಜನೆ ಮಾಡಲು ಕೂಡ ಆಗ್ರಹಿಸಿದ್ದಾರೆ. ನೂಹ ಜಿಲ್ಲೆಯಲ್ಲಿನ ಒಟ್ಟು ಜನಸಂಖ್ಯೆ ಶೇಕಡ ೭೯.೨ ರಷ್ಟು ಜನರು ಮುಸಲ್ಮಾನರಿದ್ದಾರೆ.
नूंह में जहां हुआ था दंगा, वहीं फिर निकाली जाएगी जलाभिषेक यात्रा, हिंदू महापंचायत ने लिया फैसला#NuhViolence #HinduMahapanchayathttps://t.co/XJbQKMVCMW
— India TV (@indiatvnews) August 13, 2023
೧. ಮಹಾಪಂಚಾಯತಿಗೆ ಸಂಬೋಧಿಸಿರುವ ಹಿಂದೂ ನಾಯಕರು ಜುಲೈ ೩೧ ರಂದು ನಡೆದಿರುವ ಹಿಂಸಾಚಾರಕ್ಕೆ ಸರಕಾರದ ದುರ್ಲಕ್ಷವೇ ಕಾರಣ ಎಂದು ಹೇಳಿದೆ. ಹಿಂದೂ ನಾಯಕರು, ಗುಪ್ತಚರ ಇಲಾಖೆಯಿಂದ ಸೂಚನೆ ದೊರೆತ ನಂತರವೂ ಪೊಲೀಸರು ಮತ್ತು ಸರಕಾರ ನಿಷ್ಕಾಳಚಿತನ ತೋರಿಸಿರುವುದರಿಂದ ಹಿಂದುಗಳ ಮೇಲೆ ದಾಳಿ ನಡೆದಿದೆ ಎಂದು ಹೇಳಿದರು.
ಹಿಂಸಾಚಾರದ ತನಿಖೆಯ ಹೊಣೆ ರಾಷ್ಟ್ರೀಯ ತನಿಖಾ ದಳಕ್ಕೆ ನೀಡಬೇಕೆಂದು ಕೂಡ ಈ ಸಮಯದಲ್ಲಿ ಆಗ್ರಹಿಸಿದರು.
೨. ಎಲ್ಲಾ ವಕ್ತಾರರು ಸಂಯಮದ ಭಾಷೆಯ ಉಪಯೋಗ ಮಾಡಿರುವುದಾಗಿ ಸ್ಥಳೀಯ ಪ್ರಸಾರ ಮಾಧ್ಯಮದವರು ಹೇಳಿದರು.
೩. ಮಹಾಪಂಚಾಯತಿಯ ದೃಷ್ಟಿಯಿಂದ ಈ ಸಮಯದಲ್ಲಿ ಪೊಲೀಸ್ ಮತ್ತು ಅರೇಸೆನಾ ಪಡೆಯ ಅನೇಕ ಸೈನಿಕರನ್ನು ನೇಮಕ ಮಾಡಿದ್ದರು.
೪. ಈ ಮಹಾಪಂಚಾಯತಿಗೆ ರಾಜ್ಯದಲ್ಲಿನ ಸೋನಿಪತ, ಪಲವಲ, ಫರೀದಾಬಾದ್, ಗುರುಗ್ರಾಮ ಮತ್ತು ನೂಹ ಜಿಲ್ಲೆಯಲ್ಲಿನ ಜನರು ಹಾಗೂ ದೆಹಲಿ ಮತ್ತು ಉತ್ತರ ಪ್ರದೇಶದ ಹಿಂದುಗಳು ಕೂಡ ಸಹಭಾಗಿ ಆಗಿದ್ದರು.
೫. ಮಹಾಪಂಚಾಯತಿಯಲ್ಲಿನ ಭಜರಂಗದಳದ ಹರಿಯಾಣ ಪ್ರದೇಶ ಸಂಯೋಜಕ ಭಾರತ ಭೂಷಣ, ಸೋಹನಾದ ಭಾಜಪದ ಶಾಸಕ ಸಂಜಯ ಸಿಂಹ, ಪಲವಲದ ಭಾಜಪದ ಮಾಜಿ ಶಾಸಕ ಸುಭಾಷ್ ಚೌದರಿ ಸಹಿತ ವಿಶ್ವ ಹಿಂದೂ ಪರಿಷತ್ತಿನ ಅನೇಕ ಪದಾಧಿಕಾರಿಗಳು ಸಹಭಾಗಿಯಾಗಿದ್ದರು.
हरियाणा के नूंह में आज होगी हिंदू महापंचायत…अधूरी रही बृजमंडल जलाभिषेक यात्रा को फिर निकालने को लेकर होगी चर्चा…#NuhViolence #HaryanaNews pic.twitter.com/GJfZOu247j
— India TV Hindi (@IndiaTVHindi) August 13, 2023
ಸಂಪಾದಕೀಯ ನಿಲುವುಬಹುಸಂಖ್ಯಾತ ಹಿಂದೂಗಳ ದೇಶದಲ್ಲಿ ಅವರ ಧಾರ್ಮಿಕ ಯಾತ್ರೆಯ ಆಯೋಜನೆ ಮಾಡುವುದಕ್ಕಾಗಿ ಇಷ್ಟೊಂದು ಪ್ರಯತ್ನ ಏಕೆ ಮಾಡಬೇಕಾಗುತ್ತದೆ ? ಇದು ಹಿಂದುಗಳಿಗೆ ಲಜ್ಜಾಸ್ಪದ ! |