ಪ್ರೀತಿಸಿ ಮದುವೆಯಾಗುವುದಾದರೆ ಪೋಷಕರಿಂದ ಅನುಮತಿ ಪತ್ರವನ್ನು ತನ್ನಿ ! – ನಾಸಿಕ್ ಜಿಲ್ಲೆಯ ಸಾಯಖೇಡಾ ಗ್ರಾಮ ಪಂಚಾಯತಿ

ಲವ್ ಜಿಹಾದ್ ಹಿನ್ನಲೆಯಲ್ಲಿ ನಾಸಿಕ್ ಜಿಲ್ಲೆಯ ಸಾಯಖೇಡಾ ಗ್ರಾಮ ಪಂಚಾಯತಿಯ ವಿನೂತನ ನಿರ್ಧಾರ

ನಾಸಿಕ್ – ಕಳೆದ ಹಲವಾರು ವರ್ಷಗಳಿಂದ ಸಮಾಜದಲ್ಲಿ ‘ಲವ್ ಜಿಹಾದ್’ ಘಟನೆಗಳಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ಅನೇಕ ಬಾರಿ ಪ್ರೇಮ ವಿವಾಹದಿಂದ ಅಹಿತಕರ ಘಟನೆಗಳು ನಡೆದಿವೆ. ಇದರಿಂದ ಸಂಬಂಧಪಟ್ಟವರ ಕುಟುಂಬಗಳು ಅತಿ ಹೆಚ್ಚು ಮಾನಸಿಕ ತೊಂದರೆ ಅನುಭವಿಸುತ್ತಿವೆ. ಈ ಹಿನ್ನಲೆಯಲ್ಲಿ ಪ್ರೇಮವಿವಾಹ ಆಗುವುದಿದ್ದರೆ ಪೋಷಕರ ಅನುಮತಿ ಪಡೆಯುವುದು ಆವಶ್ಯಕವಾಗಿದೆ. ಅದಿಲ್ಲದೇ ವಿವಾಹ ನೋಂದಣಿ ಕಚೇರಿಯಲ್ಲೂ ಅವಕಾಶ ನೀಡಬಾರದು ಎಂದು ನಾಸಿಕ್ ಜಿಲ್ಲೆಯ ಸಾಯಖೇಡಾ ಗ್ರಾಮ ಪಂಚಾಯತಿ ನಿರ್ಣಯ ಕೈಗೊಂಡಿದೆ.

1. ಪ್ರೇಮವಿವಾಹಕ್ಕೆ ಷರತ್ತುಗಳನ್ನು ವಿಧಿಸಿದ ಮತ್ತು ಅದಕ್ಕೆ ಸಂಬಂಧಿಸಿದಂತೆ ನಿರ್ಣಯಗಳನ್ನು ಅಂಗೀಕರಿಸಿದ ರಾಜ್ಯದ ಮೊದಲ ಸಾಯಖೇಡ ಗ್ರಾಮ ಪಂಚಾಯತಿಯಾಗಿದೆ.

2. ಈ ಬಗ್ಗೆ ಮಾಜಿ ಸರಪಂಚ ಬಾವುಸಾಹೇಬ ಕಾಕಡೆ ಇವರು ಪಂಚಾಯತಿಗೆ ಪತ್ರ ನೀಡಿದ್ದರು. ಈ ಬಗ್ಗೆ ಗ್ರಾಮಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಈ ನಿರ್ಣಯದ ಪ್ರಕಾರ, ಪೋಷಕರಿಂದ ಅನುಮತಿ ಪತ್ರವಿದ್ದರೆ ಮಾತ್ರ ಗ್ರಾಮ ಪಂಚಾಯಿತಿಯ ರಿಜಿಸ್ಟರ್‌ನಲ್ಲಿ ವಿವಾಹವನ್ನು ನೋಂದಾಯಿಸಲಾಗುತ್ತದೆ. ಅವರಿಗೆ ಮಾತ್ರ ವಿವಾಹ ಪ್ರಮಾಣಪತ್ರ ಸಿಗಲಿದೆ.

3. ಈ ನಿರ್ಣಯದ ಪ್ರತಿಯನ್ನು ತಹಸೀಲ್ದಾರ್ ಮತ್ತು ಜಿಲ್ಲಾಧಿಕಾರಿಗೆ ನೀಡಲಾಗುವುದು. ಈ ನಿರ್ಣಯ ಮಹಾರಾಷ್ಟ್ರದಲ್ಲಿ ಜಾರಿಯಾಗಲು, ಕಾನೂನು ರಚಿಸಿ, ಆದರ್ಶ ಕುಟುಂಬಪದ್ಧತಿ ಜಾರಿಗೊಳಿಸಬೇಕು ಎಂದು ಸರಪಂಚ ಗಣೇಶ ಕಾತಕಾಡೆ ಹಾಗೂ ಸುಧೀರ ಶಿಂಧೆ ಸಹಿತ ಜನಪ್ರತಿನಿಧಿಗಳೂ ಪ್ರಯತ್ನ ನಡೆಸಲಿದ್ದಾರೆ.

4. ಸಾಯಿಖೇಡ ಗ್ರಾಮ ಪಂಚಾಯತಿಯ ಸರಪಂಚ ಗಣೇಶ ಕಾತಕಾಡೆ ಇವರು ಮಾತನಾಡಿ, ಪ್ರೇಮವಿವಾಹದಿಂದ ಅನೇಕ ಕುಟುಂಬಗಳು ಹಾಳಾಗುತ್ತಿರುವ ಘಟನೆಗಳು ನಡೆದಿವೆ. ಸಾಮಾಜಿಕ ಅವಮಾನದ ಕಾರಣ ಪೋಷಕರು ಕಠೋರ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ. ಆದ್ದರಿಂದ ಪ್ರೇಮ ವಿವಾಹಕ್ಕೆ ಪೋಷಕರ ಅನುಮತಿ ಅಗತ್ಯ ಎಂದು ಠರಾವು ಅಂಗೀಕರಿಸಲಾಗಿದ್ದು, ರಾಜ್ಯ ಮಟ್ಟದಲ್ಲಿ ಕಾನೂನು ರೂಪಿಸಲು ಶೀಘ್ರವೇ ಪಂಚಾಯತರಾಜ ಇಲಾಖೆ, ಮುಖ್ಯಮಂತ್ರಿ ಮತ್ತು ಸಂಬಂಧಿಸಿದ ಅಧಿಕಾರಿಗಳನ್ನು ಭೇಟಿ ಮಾಡಲಿದ್ದೇವೆ ಎಂದು ಹೇಳಿದ್ದಾರೆ.