ಕ್ರೈಸ್ತರಿಂದಾಗಿ ಛತ್ತೀಸ್ ಗಡದ ಬಾಲೋದ ಜಿಲ್ಲೆಯ ಅನೇಕ ಗ್ರಾಮಗಳಲ್ಲಿ ಹೆಚ್ಚಿದ ಹಿಂದೂಗಳ ಮತಾಂತರ !

ಧಾನೋರ, ಸಿವನಿ, ಗಂಜಪಾರ, ಬಾಲೋದಗಹನ್ ಮುಂತಾದ ಅನೇಕ ಗ್ರಾಮಗಳಲ್ಲಿ ಹಿಂದುಗಳ ಮತಾಂತರ !

ಬಾಲೋದ (ಛತ್ತಿಸ್ ಗಢ) – ಜಿಲ್ಲೆಯಲ್ಲಿನ ಧಾನೋರ ಗ್ರಾಮದಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ದೊಡ್ಡ ಪ್ರಮಾಣದಲ್ಲಿ ಹಿಂದುಗಳ ಮತಾಂತರದ ಘಟನೆಗಳು ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಈ ದಿನದಂದು ಪ್ರಾರ್ಥನಾ ಸಭೆಯ ಹೆಸರಿನಲ್ಲಿ ಹಿಂದುಗಳ ಮತಾಂತರಿಸಲಾಗುತ್ತದೆ. ಅದಕ್ಕಾಗಿ ಧಮತರಿ ಜಿಲ್ಲೆಯಿಂದ ಅನೇಕ ಜನರು ಬರುತ್ತಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಜನರಿಗೆ ರೋಗ ವಾಸಿ ಮಾಡುವುದು, ಅವರ ಜೀವನದಲ್ಲಿ ಎಲ್ಲವೂ ಒಳ್ಳೆಯದೇ ಆಗುತ್ತದೆ ಎಂದು ಈ ಸಭೆಯಲ್ಲಿ ದಾವೆ ಮಾಡುತ್ತಾರೆ. ಈ ಮೂಲಕ ಅನೇಕ ಹಿಂದುಗಳು ಮತಾಂತರಗೊಂಡಿದ್ದಾರೆ.

೧. ಪ್ರಾರ್ಥನಾ ಸಭೆಯ ಸ್ಥಳದಿಂದ ಎರಡನೆಯ ಮನೆ ಇದು ಕಾಂಗ್ರೆಸ್ ಬೆಂಬಲಿಸುವ ಪಂಚಾಯತ ಸದಸ್ಯ ಲಲಿತಾ ಪಿಮನ ಸಾಹು ಇವರದ್ದಾಗಿದೆ. ಸಭೆ ಆಯೋಜನೆ ಮಾಡುವವನ ಹೆಸರು ನರೇಂದ್ರ ಸಾಹು ಆಗಿದ್ದು ಅವನು ಮೂಲತಃ ಹಿಂದೂ ಆಗಿದ್ದಾನೆ. ಈ ಎಲ್ಲಾ ಘಟನೆಯಿಂದ ಗ್ರಾಮಸ್ಥರು ಅಸಮಾಧಾನಗೊಂಡಿದ್ದಾರೆ.

೨. ಇದೇ ರೀತಿ ಬಾಲೋದ ಜಿಲ್ಲೆಯಲ್ಲಿನ ಅಟಲ್ ಆವಾಸ್, ಗಂಜಪಾರ, ಶಿವ ಕಾಲೋನಿ ಹಾಗೂ ಜಿಲ್ಲೆಯಲ್ಲಿನ ಅನೇಕ ಗ್ರಾಮೀಣ ಪ್ರದೇಶದಲ್ಲಿ ಮತಾಂತರದ ಪ್ರಯತ್ನ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿದೆ.

೩. ಕೆಲವು ತಿಂಗಳ ಹಿಂದೆ ಬಾಲೋದಗಹನ್ ಹಾಗೂ ಸಿವನಿ ಗ್ರಾಮದಲ್ಲಿ ನಡೆದಿರುವ ‘ಚಂಗಾಯಿ ಸಭೆ’ಯಲ್ಲಿ ಕೂಡ ಅನೇಕ ಹಿಂದುಗಳ ಮತಾಂತರ ಮಾಡಲಾಗಿತ್ತು. ಸಿವನಿ ಗ್ರಾಮದ ಗ್ರಾಮಸ್ಥರು ಆ ಸಮಯದಲ್ಲಿ ಜಿಲ್ಲಾಧಿಕಾರಿ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿ ಮತಾಂತರದ ವಿರುದ್ಧ ಕ್ರಮ ಕೈಗೊಳ್ಳುವದಕ್ಕಾಗಿ ಮನವಿ ನೀಡಿದ್ದರು.

೪. ಈ ಸಂದರ್ಭದಲ್ಲಿ ಕಾಂಗ್ರೆಸ್ಸಿನ ನಾಯಕ ಕುವರ ಸಿಂಹ ನಿಶಾದ್ ಇವರು, ರಾಜ್ಯದಲ್ಲಿ ೧೫ ವರ್ಷ ಭಾಜಪ ಅಧಿಕಾರದಲ್ಲಿರುವಾಗ ಮತಾಂತರದ ಘಟನೆಗಳು ಬೆಳಕಿಗೆ ಬಂದಿದ್ದವು. ನಮ್ಮ ಸರಕಾರ ಮತಾಂತರದ ಘಟನೆಗಳು ಅತ್ಯಂತ ಗಂಭೀರವಾಗಿಯೇ ಪರಿಗಣಿಸಿದೆ. (ಹೀಗಿದ್ದರೆ, ಕಾಂಗ್ರೆಸ್ ರಾಜ್ಯದಲ್ಲಿ ಮತಾಂತರ ವಿರೋಧಿ ಕಾನೂನು ಏಕೆ ರೂಪಿಸುವುದಿಲ್ಲ? – ಸಂಪಾದಕರು)

೫. ಇನ್ನೊಂದು ಕಡೆ ಭಾಜಪದ ವಕ್ತಾರ ದೇವಲಾಲ ಠಾಕೂರ್ ಇವರು ಕಾಂಗ್ರೆಸ್ ನನ್ನು, ಸರಕಾರ ಸಂಸ್ಕೃತಿ ಮತ್ತು ಸಂಸ್ಕಾರದ ರಕ್ಷಣೆ ಮಾಡುವುದು ಕೇವಲ ನಾಟಕ ಮಾಡುತಿದೆ. ಇನ್ನೊಂದು ಕಡೆಗೆ ಹಿಂದುಗಳ ಮತಾಂತರ ನಡೆಸುವವರಿಗೆ ಆಶ್ರಯ ನೀಡುತ್ತದೆ. ಕಾಂಗ್ರೆಸ್ಸಿನ ಅಧಿಕಾರದಲ್ಲಿ ಮತಾಂತರದ ಘಟನೆಗಳು ಹೆಚ್ಚಿರುವುದರಿಂದ ವಿವಿಧ ರೀತಿಯ ಮಿಶಿನರಿಗಳು ರಾಜ್ಯದ ಮುಗ್ದ ಹಿಂದುಗಳ ಮತಾಂತರಕ್ಕಾಗಿ ತಿರುಗುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಸಂಪಾದಕೀಯ ನಿಲುವು

ಕಾಂಗ್ರೆಸ್ ಅಧಿಕಾರದಲ್ಲಿ ಇರುವ ಛತ್ತಿಸಗಡದಲ್ಲಿ ಮತಾಂತರಕ್ಕಾಗಿ ಕ್ರೈಸ್ತರಿಗೆ ಸುಲಭ ಅವಕಾಶಗಳು ದೊರೆತಿವೆ, ಎಂದು ಹೇಳಿದರೆ ತಪ್ಪಾಗಲಾರದು ! ಹಿಂದೂಗಳ ಮತಾಂತರ ತಡೆಯುವದಕ್ಕಾಗಿ ಈಗ ದೇಶಾದ್ಯಂತ ಮತಾಂತರ ವಿರೋಧಿ ಕಾನೂನು ರೂಪಿಸುವುದು ಅವಶ್ಯಕವಾಗಿದೆ !

ಹಿಂದುಗಳ ಮತಾಂತರ ತಡೆಯುವುದಕ್ಕೆ ಅವರಲ್ಲಿನ ಧರ್ಮಾಭಿಮಾನ ಹೆಚ್ಚುವುದು ಅವಶ್ಯಕವಾಗಿದೆ. ಅದಕ್ಕೆ ಧರ್ಮಶಿಕ್ಷಣ ನೀಡುವುದು ಏಕೈಕ ಪರ್ಯಾಯವಾಗಿದೆ, ಇದನ್ನು ತಿಳಿಯಿರಿ !