1980 ರಲ್ಲಿ ಮೊರಾದಾಬಾದ್ ಗಲಭೆಯ ವರದಿ 43 ವರ್ಷಗಳ ಬಳಿಕ ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಮಂಡನೆ !

  • ಗಲಭೆಗೆ ಮುಸ್ಲಿಂ ಲೀಗ್ ಮುಖಂಡರೇ ಹೊಣೆ ಎಂದು 1983 ರ ಎಮ್.ಪಿ. ಸಕ್ಸೇನಾದ ವರದಿ !

  • 40 ವರ್ಷಗಳ ಕಾಲ ಎಲ್ಲಾ ಪಕ್ಷದ ಸರಕಾರಗಳು ವರದಿಯನ್ನು ಹತ್ತಿಕ್ಕಿದವು !

  • ಹಿಂದುತ್ವವಾದಿಗಳಿಂದಲೇ ಗಲಭೆಗಳು ನಡೆದವು ಎಂದು ಇಲ್ಲಿಯವರೆಗೂ ಹಿಂದುದ್ವೇಷಿ ಕಾಂಗ್ರೆಸ್ ಡಂಗೂರ ಸಾರಿತು !

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ರಾಜ್ಯ ಸರಕಾರವು ವಿಧಾನಸಭೆಯ ಮುಂಗಾರು ಅಧಿವೇಶನದಲ್ಲಿ 1980 ರ ಮೊರಾದಾಬಾದ್ ಗಲಭೆಗೆ ಸಂಬಂಧಿಸಿದಂತೆ ವರದಿಯನ್ನು ಮಂಡಿಸಿತು. ಈ ಗಲಭೆಯಲ್ಲಿ 80 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು, 112 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಈ ವರದಿಯಲ್ಲಿ ಮುಸ್ಲಿಂ ಲೀಗ್ ನ 2 ನಾಯಕರನ್ನು ಗಲಭೆಗೆ ಹೊಣೆಗಾರರನ್ನಾಗಿ ಮಾಡಿದೆ. ಈ ವರದಿಯಲ್ಲಿ ಕಾಂಗ್ರೆಸ್ ಹಿಂದುತ್ವನಿಷ್ಠರ ವಿರುದ್ಧ ಸೃಷ್ಟಿಸಿರುವ ಕಥೆ ನಿರಾಧಾರವಾಗಿದೆಯೆಂದು ಹೇಳಲಾಗಿದೆ. ಅಲಹಾಬಾದ್ ಉಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶ ಎಂ.ಪಿ. ಸಕ್ಸೇನಾ ಅವರು ಈ ವರದಿಯನ್ನು ತಯಾರಿಸಿ 1983 ರಲ್ಲಿ ಸರಕಾರದ ಎದುರಿಗೆ ಮಂಡಿಸಿದರು. 496 ಪುಟಗಳ ಈ ವರದಿಯನ್ನು ಕಳೆದ 4 ದಶಕಗಳಿಂದ ವಿವಿಧ ರಾಜ್ಯ ಸರಕಾರಗಳು ಬದಿಗೊತ್ತಿದ್ದವು. ಈ ಗಲಭೆ ಆಗಸ್ಟ್ ನಿಂದ ನವೆಂಬರ್ 1983 ರವರೆಗೆ ನಡೆದವು.

1. ಹದಿನಾಲ್ಕು ಬಾರಿ ವಿವಿಧ ಕಾರಣಗಳನ್ನು ನೀಡಿ ಈ ವರದಿಯನ್ನು ವಿಧಾನಸಭೆಯಲ್ಲಿ ಮಂಡಿಸಲಿಲ್ಲ. ಈ ಸಂಬಂಧದಲ್ಲಿ ರಾಜ್ಯದ ಉಪಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಮಾಹಿತಿ ನೀಡಿದ್ದಾರೆ. ಮೌರ್ಯ ಮಾತನಾಡಿ, ಈ ವರದಿಯನ್ನು ಮುಚ್ಚಿಡಲಾಗಿತ್ತು. ಈ ವರದಿಯಿಂದ ಮೊರಾದಾಬಾದ್ ಗಲಭೆಯ ಸತ್ಯವನ್ನು ಜನರ ಎದುರಿಗೆ ಬರಲಿದೆ. ಈ ವರದಿಯಿಂದ ಸಾರ್ವಜನಿಕರಿಗೆ ‘ಗಲಭೆ ಮಾಡುವವರು ಯಾರು?’, ‘ಯಾರು ಬೆಂಬಲಿಸುತ್ತಾರೆ, ಯಾರು ಇದರ ವಿರುದ್ಧ ಹೋರಾಡುತ್ತಾರೆ’ ಎಂಬುದು ಜನತೆಗೆ ಅರ್ಥವಾಗುತ್ತದೆ. ಇದುವರೆಗೆ 15 ಮುಖ್ಯಮಂತ್ರಿಗಳು ಈ ವರದಿಯನ್ನು ಹತ್ತಿಕ್ಕಿದ್ದರು ಎಂದು ಹೇಳಿದರು.

2. ಕಾಂಗ್ರೆಸ್ ಮತ್ತು ಕಮ್ಯುನಿಸ್ಟರು ಕಳೆದ 43 ವರ್ಷಗಳಿಂದ ಗಲಭೆಗಳಿಗಾಗಿ ರಾಷ್ಟ್ರೀಯ ಸ್ವಯಂ ಸಂಘ, ಬಜರಂಗದಳ, ಆಗಿನ ಜನಸಂಘ ಮತ್ತು ಇತರ ಹಿಂದುತ್ವನಿಷ್ಠ ಸಂಘಟನೆಗಳಿಂದ ಈ ಗಲಭೆಗಳಿಗೆ ಜವಾಬ್ದಾರರೆಂದು ನಿರ್ಧರಿಸಲಾಗುತ್ತಿತ್ತು.

ಮೊರಾದಾಬಾದ್ ಗಲಭೆಯ ಸಂದರ್ಭದಲ್ಲಿ ಏನಾಯಿತು ?

ಆಗಸ್ಟ್ 13, 1980 ರಂದು ಮೊರಾದಾಬಾದ್‌ನ ಈದ್ಗಾದಲ್ಲಿ 70 ಸಾವಿರ ಮುಸಲ್ಮಾನರು ನಮಾಜ್ ಮಾಡುತ್ತಿದ್ದಾಗ, ಮುಸ್ಲಿಂ ಲೀಗ್ ನಾಯಕರು ಒಂದು ಹಂದಿಯನ್ನು ಒಳಗೆ ಬಿಟ್ಟರು. ಮುಸಲ್ಮಾನರು ಅಲ್ಲಿದ್ದ ಪೊಲೀಸರಿಗೆ ಕ್ರಮ ಕೈಗೊಳ್ಳುವಂತೆ ಕೇಳಿಕೊಂಡಾಗ ಪೊಲೀಸರು ಮೌನ ವಹಿಸಿದ್ದರು.

ಇದರಿಂದ ಆಕ್ರೋಶಗೊಂಡ ಮುಸ್ಲಿಮರು ಸಮೀಪದ ದಲಿತರ ಗುಡಿಸಲುಗಳ ಮೇಲೆ ದಾಳಿ ಮಾಡಿ ಲೂಟಿ ಮಾಡಿ ಬೆಂಕಿ ಹಚ್ಚಿದರು. ಈ ಹಿಂಸಾಚಾರದಲ್ಲಿ ಪೊಲೀಸ್ ಪೇದೆಯೊಬ್ಬರನ್ನು ಸಜೀವ ದಹಿಸಲಾಯಿತು. ಹೆಚ್ಚುವರಿ ಜಿಲ್ಲಾಧಿಕಾರಿ ಡಿ.ಪಿ. ಸಿಂಗ್ ರನ್ನು ಕೂಡ ಮತಾಂಧ ಮುಸಲ್ಮಾನರು ಸಾಯುವವರೆಗೆ ಥಳಿಸಿದರು. ಗಾಲಶಾಹಿದ್ ಪೊಲೀಸ್ ಠಾಣೆಯ ಮೇಲೆ ದಾಳಿ ಮಾಡಿ ಅಲ್ಲಿಯ ಇಬ್ಬರು ಪೊಲೀಸರನ್ನೂ ಮತಾಂಧರು ಹತ್ಯೆ ಮಾಡಿದರು. ಈ ಗಲಭೆಯ ಬಿಸಿ ರಾಜ್ಯದ ಸಂಭಲ್, ಅಲಿಗಢ, ಬರೇಲಿ, ಪ್ರಯಾಗರಾಜ್ ಮತ್ತು ಮೊರಾದಾಬಾದ್ ಜಿಲ್ಲೆಗಳ ಗ್ರಾಮೀಣ ಪ್ರದೇಶಗಳಿಗೆ ಹರಡಿತು. ಆ ಕಾಲದಲ್ಲಿ ಕಾಂಗ್ರೆಸ್ ನಲ್ಲಿದ್ದ ವಿಶ್ವನಾಥ ಪ್ರತಾಪ್ ಸಿಂಗ್ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿದ್ದರು ಮತ್ತು ಕೇಂದ್ರದಲ್ಲಿ ಇಂದಿರಾಗಾಂಧಿ ಪ್ರಧಾನಿಯಾಗಿದ್ದರು.

ಸಂಪಾದಕೀಯ ನಿಲುವು

ದೇಶದಲ್ಲಿರುವ ಬಹುಸಂಖ್ಯಾತ ಹಿಂದೂಗಳನ್ನು ‘ಹಿಂಸಕರು’ ಎಂದು ಹಣೆಪಟ್ಟಿ ಕಟ್ಟಲು ಪ್ರಯತ್ನಿಸುವ ಕಾಂಗ್ರೆಸ್‌ನ ಹಳೆಯ ತಂತ್ರ. ಆದ್ದರಿಂದಲೇ ಆ ಪಕ್ಷ ಇಂದು ಅಂತಿಮ ಕ್ಷಣವನ್ನು ಎಣಿಸುತ್ತಿದೆ ಎನ್ನುವುದನ್ನು ಅರಿಯಬೇಕು !

ಪ್ರಜಾಪ್ರಭುತ್ವವನ್ನು ಜೈಜೈಕಾರ ಮಾಡುವ ಕಾಂಗ್ರೆಸ್, ಸಮಾಜವಾದಿ, ಬಹುಜನ ಸಮಾಜವಾದಿ ಪಕ್ಷ ಮುಂತಾದ ಸರಕಾರಗಳು ಉತ್ತರಪ್ರದೇಶದಲ್ಲಿ ಅಧಿಕಾರಕ್ಕೆ ಬಂದರೂ ಗಲಭೆಯ ಹಿಂದಿನ ಸತ್ಯವನ್ನು ಜನರೆದುರಿಗೆ ಬರಲು ಬಿಡಲಿಲ್ಲ. ಇಂತಹ ನಾಟಕೀಯ ಜಾತ್ಯತೀತವಾದಿಗಳಿಂದಲೇ ಈ ಪಕ್ಷಗಳು ಇತಿಹಾಸದ ಪುಟ ಸೇರುವ ಮಾರ್ಗದಲ್ಲಿದೆ.