ಬಂಗಾಳದ ಒಂದು ಮನೆಯಿಂದ ೧೨ ಸಾವಿರ ಜಿಲೇಟಿನ್ ಕಡ್ಡಿಗಳು ವಶ !

ಪೊಲೀಸರಿಂದ ಮನೆಯ ಮಾಲೀಕನ ಹೆಸರು ಬಹಿರಂಗಪಡಿಸಲು ನಿರಾಕರಣೆ !

ಕೋಲಕಾತಾ (ಬಂಗಾಳ) – ಬೀರಭೂಮ ಜಿಲ್ಲೆಯಲ್ಲಿನ ರಾಮಪುರಹಾಟ ಉಪವಿಭಾಗದಲ್ಲಿನ ರಾಧೀಪುರ ಈ ಗ್ರಾಮದಲ್ಲಿರುವ ಒಂದು ಮನೆಯಿಂದ ೧೨ ಸಾವಿರ ಜಿಲೆಟಿನ್ ಕಡ್ಡಿಗಳು ವಶಪಡಿಸಿಕೊಳ್ಳಲಾಗಿದೆ. ಈ ಕಡ್ಡಿಗಳು ೬೦ ಬಾಕ್ಸಗಳಲ್ಲಿ ಇಡಿಯಲಾಗಿತ್ತು. ಈ ಮನೆಯಲ್ಲಿ ಜಿಲೆಟಿನ್ ಕಡ್ಡಿಗಳು ಇಟ್ಟಿರುವ ರಹಸ್ಯ ಮಾಹಿತಿ ಪೊಲೀಸರಿಗೆ ದೊರೆತ ನಂತರ ಪೊಲೀಸರು ಮನೆಯ ಮೇಲೆ ದಾಳಿ ನಡೆಸಿದರು. ಪೊಲೀಸರು ಈ ಮನೆಯನ್ನು ಸೀಲ್ ಮಾಡಿದ್ದು, ಮನೆಯ ಮಾಲೀಕನ ಹೆಸರು ಇಲ್ಲಿಯವರೆಗೆ ಬಹಿರಂಗಪಡಿಸಿಲ್ಲ. ಈ ಪ್ರಕರಣದಲ್ಲಿ ಪೊಲೀಸರು ಸ್ವತಃ ದೂರು ದಾಖಲಿಸಿದ್ದಾರೆ.

ಜೂನ್ ೨೦೨೩ ರಂದು ಕೂಡ ಪೊಲೀಸರು ಬಂಗಾಳದ ೨೪-ಪರಗಣ ಜಿಲ್ಲೆಯಲ್ಲಿನ ಭಾನಗರದಿಂದ ಇದೇ ರೀತಿಯ ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದರು.

ಸಂಪಾದಕೀಯ ನಿಲುವು

ಸತತವಾಗಿ ಬಾಂಬ್ ಸಿಗುತ್ತಿರುವುದರಿಂದ ‘ಬಂಗಾಳ’ ಮತ್ತು ‘ಬಾಂಬ್’ ಈಗ ಸಮಾನಾರ್ಥ ಪದಗಳಾಗಿವೆ. ಬಂಗಾಳದಲ್ಲಿನ ಮಮತಾ ಬ್ಯಾನರ್ಜಿ ಸರಕಾರಕ್ಕೆ ಇದು ನಾಚಿಕೆಡು ! ಅಂದರೆ ಮಮತಾ ಬ್ಯಾನರ್ಜಿ ಇವರ ನಿಷ್ಕ್ರಿಯತೆಯೇ ಇದಕ್ಕೆ ಕಾರಣವಾಗಿದೆ. ಆದ್ದರಿಂದ ಕೇಂದ್ರ ಸರಕಾರವು ಬಂಗಾಳ ಸರಕಾರವನ್ನು ರದ್ದುಪಡಿಸಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಬೇಕು !