ವಾರಾಣಸಿ (ಉತ್ತರಪ್ರದೇಶ) – ಭವಿಷ್ಯದಲ್ಲಿ ಭಾರತ ಮತ್ತು ಸನಾತನ ಧರ್ಮದ್ದಾಗಿದೆ. ವೇದ ಎಂದರೆ ಜ್ಞಾನದ ಭಂಡಾರವಾಗಿದೆ. ವೇದಗಳಲ್ಲಿ ಎಲ್ಲವೂ ಇದೆ. ಸತತವಾಗಿ ನಡೆಯುವ ದಾಳಿಯಿಂದ ಎಲ್ಲಾ ಕಡೆ ವಿಶೇಷವಾಗಿ ಉತ್ತರ ಭಾರತದಲ್ಲಿ ವೈದಿಕ ಜ್ಞಾನಕ್ಕೆ ಬೃಹತ್ ಪ್ರಮಾಣದಲ್ಲಿ ಹಾನಿಯಾಗಿದೆ. ಅಗ್ನಿಹೋತ್ರದ ಅನುಯಾಯಿಗಳು ಯುಗಾನುಯುಗದಿಂದ ಈ ಜ್ಞಾನದ ರಕ್ಷಣೆ ಮಾಡಿದ್ದಾರೆ. ಈ ಪರಂಪರೆಯ ವಿಸ್ತಾರವಾಗುವುದು ಅವಶ್ಯಕವಾಗಿದೆ, ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ.ಪೂ. ಸರಸಂಘಚಾಲಕ ಡಾ. ಮೋಹನಜಿ ಭಾಗವತ ಇವರು ಇಲ್ಲಿಯ ಒಂದು ಕಾರ್ಯಕ್ರಮದಲ್ಲಿ ಹೇಳಿದರು.
काशी दौरे पर संघ प्रमुख मोहन भागवत, कहा- ‘धर्म गुरु भारत, दुनिया को देगा ज्ञान’#RSS #Indian #sanghparivar #Bharat24Digital https://t.co/B6Lix7enXJ
— Bharat 24 – Vision Of New India (@Bharat24Liv) August 7, 2023
ಇದು ಸನಾತನ ಧರ್ಮದ ಉತ್ಥಾನದ ಸಮಯ !
ಸರಸಂಘಚಾಲಕರು ಮಾತು ಮುಂದುವರೆಸುತ್ತಾ, ”ಇದು ಸನಾತನ ಧರ್ಮದ ಉತ್ಥಾನದ ಸಮಯವಾಗಿದೆ. ಭಾರತ ಸಂಪೂರ್ಣ ಜಗತ್ತಿಗೆ ಧರ್ಮದ ಜ್ಞಾನ ನೀಡುತ್ತದೆ. ಧರ್ಮದ ಮೂಲ ಸತ್ಯವಾಗಿದೆ. ಇಂದು ಸಂಪೂರ್ಣ ವಿಶ್ವ ವೇದದ ಕುರಿತು ಯೋಚನೆ ಮಾಡುತ್ತಿದೆ. ನಮಗೆ ವೇದದ ಬಗ್ಗೆ ತಿಳಿದಿದೆ ಆದರೆ ಸಂಪೂರ್ಣ ಮಾಹಿತಿ ಇಲ್ಲ ಎಂದು ಹೇಳಿದರು.
ಸರಸಂಘಚಾಲಕರಿಂದ ಕಂಚಿ ಕಾಮಕೋಟಿ ಪೀಠದ ಶಂಕರಾಚಾರ್ಯರ ಭೇಟಿ !ಆ ಸಮಯದಲ್ಲಿ ಸರಸಂಘಚಾಲಕರು ಇಲ್ಲಿಯ ಗಂಗಾ ತೀರದಲ್ಲಿ ಇರುವ ಸಿಂಹ ಕಿಲಾದಲ್ಲಿ ಚಾತುರ್ಮಾಸದ ವ್ರತಾಚರಣೆ ಮಾಡುವ ಕಾಮಕೋಟಿ ಪೀಠದ ಶಂಕರಾಚಾರ್ಯ ವಿಜಯೇಂದ್ರ ಸರಸ್ವತಿ ಇವರನ್ನು ಭೇಟಿಯಾಗಿ ಅವರ ಆಶೀರ್ವಾದ ಪಡೆದರು. |