ಜ್ಞಾನವಪಿಯನ್ನು ಮಸೀದಿ ಎಂದು ಕರೆಯುವುದನ್ನು ನಿಲ್ಲಿಸಿ, ಅದು ಶಿವ ಮಂದಿರ !

ಪಂಡಿತ್ ಧೀರೇಂದ್ರ ಶಾಸ್ತ್ರಿ ಅವರ ನೇರಮಾತು !

ನವದೆಹಲಿ – ಸುಪ್ರೀಂ ಕೋರ್ಟ್ ಹಸಿರು ಬಣ್ಣ ತೋರಿಸಿದ ನಂತರ, ಜ್ಞಾನವಾಪಿ ಪ್ರದೇಶವನ್ನು ಭಾರತೀಯ ಪುರಾತತ್ವ ಇಲಾಖೆಯು ಕಳೆದ 4 ದಿನಗಳಿಂದ ಸಮೀಕ್ಷೆ ನಡೆಸುತ್ತಿದೆ. ಈ ಕುರಿತು ಪತ್ರಕರ್ತರೊಬ್ಬರು ಬಾಬಾ ಬಾಗೇಶ್ವರ ಧಾಮದ ಮುಖ್ಯಸ್ಥ ಪಂಡಿತ್ ಧೀರೇಂದ್ರ ಶಾಸ್ತ್ರಿ ಅವರನ್ನು ಪ್ರಶ್ನಿಸಿದಾಗ, ಜ್ಞಾನವಾಪಿಯನ್ನು ಮಸೀದಿ ಎಂದು ಕರೆಯುವುದನ್ನು ನಿಲ್ಲಿಸಿ, ಅದೊಂದು ಶಿವ ಮಂದಿರ ಎಂದು ಹೇಳಿದರು.

(ಸೌಜನ್ಯ – News State)

ಈ ಹಿಂದೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಕೂಡ ಜ್ಞಾನವಾಪಿಯೂ ಮಸೀದಿಯಲ್ಲ ಎಂದು ಸ್ಪಷ್ಟಪಡಿಸಿದ್ದರು. ಮಸೀದಿಯೊಳಗೆ ತ್ರಿಶೂಲ ಹೇಗೆ ಇರಲು ಸಾಧ್ಯ ? ಅದನ್ನು ನಾವು ಇಟ್ಟಿರಲಿಲ್ಲ. ಜ್ಞಾನವಾಪಿಯಲ್ಲಿರುವ ದೇವರ ವಿಗ್ರಹಗಳು ಮತ್ತು ಹಿಂದೂ ಧರ್ಮದ ಸಂಕೇತಗಳಿರುವ ಗೋಡೆಗಳು ಏನನ್ನು ಸೂಚಿಸುತ್ತವೆ ? ಎಂದು ಹೇಳಿದರು.

ಮತ್ತೊಂದೆಡೆ ಆಗಸ್ಟ್ 7 ರಂದು, ಭಾರತೀಯ ಪುರಾತತ್ವ ಇಲಾಖೆಯಿಂದ ಜ್ಞಾನವಾಪಿಯ ನಾಲ್ಕನೇ ದಿನದ ಸಮೀಕ್ಷೆ ಪೂರ್ಣಗೊಂಡಿದೆ. ಈ ಸಂದರ್ಭದಲ್ಲಿ ಪ್ರಸಾರ ಮಾಧ್ಯಮದವರೊಂದಿಗೆ ಮಾತನಾಡುತ್ತಾ ಹಿಂದೂ ಪಕ್ಷದ ನ್ಯಾಯವಾದಿ ಸುಭಾಷ್ ನಂದನ ಚತುರ್ವೇದಿ ಅವರು ಮಾತನಾಡುತ್ತಾ, ಇಂದು ಸಮೀಕ್ಷೆಯಲ್ಲಿ ಆಧುನಿಕ ಯಂತ್ರಗಳನ್ನು ಬಳಸಲಾಗಿದೆ. ಸಮೀಕ್ಷೆ ಉತ್ತಮವಾಗಿ ನಡೆಯುತ್ತಿದೆ ಎಂದು ಹೇಳಿದರು. ಸಮೀಕ್ಷೆಯಿಂದ ನಮಗೆ ತೃಪ್ತಿ ಇದೆ ಎಂದು ಹಿಂದೂ ಪಕ್ಷದ ಮಹಿಳೆಯರು ಹೇಳಿದ್ದಾರೆ. ನ್ಯಾಯಾಲಯದ ಮೇಲೆ ನಮಗೆ ಪೂರ್ಣ ನಂಬಿಕೆ ಇದೆ. ಈವರೆಗಿನ ಸಮೀಕ್ಷೆಯಿಂದ ನಮಗೆ ಸಂತಸವಾಗಿದೆ ಎಮದು ಹೇಳಿದರು.