ಹರಿಯಾಣದ 14 ಹಳ್ಳಿಗಳಲ್ಲಿ ಮುಸಲ್ಮಾನರ ಮೇಲೆ ಬಹಿಷ್ಕಾರ !

  • ನೂಹ್ ನ ಹಿಂಸಾಚಾರ ಪ್ರಕರಣ

  • ಮುಸ್ಲಿಮರಿಗೆ ಬಾಡಿಗೆ ಮನೆ ನೀಡದಂತೆ ಮತ್ತು ಉದ್ಯೋಗ ನೀಡದಂತೆ ಮನವಿ

ಚಂಡೀಗಡ – ಹರಿಯಾಣದ ನೂಹ್‌ನಲ್ಲಿ ನಡೆದ ಹಿಂಸಾಚಾರದ ನಂತರ, ಸುತ್ತಮುತ್ತಲಿನ ಹಳ್ಳಿಗಳಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಹಿಂದೂಗಳಲ್ಲಿ ಆಕ್ರೋಶದ ಭಾವನೆ ಮೂಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಮಹೇಂದ್ರಗಢ, ಜಜ್ಜರ್ ಮತ್ತು ರೇವಾಡಿ ಈ 3 ಜಿಲ್ಲೆಗಳ 14 ಗ್ರಾಮಗಳು ಮುಸ್ಲಿಮರನ್ನು ಬಹಿಷ್ಕರಿಸಲು ನಿರ್ಧರಿಸಿವೆ. ಈ ಗ್ರಾಮಗಳಲ್ಲಿ ಗ್ರಾಮಸಭೆ ಆಯೋಜಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ. ನೂಹ್ ಹಿಂಸಾಚಾರದಿಂದ ಈ 3 ಜಿಲ್ಲೆಗಳ ಹಿಂದೂಗಳು ಹೆಚ್ಚು ತೊಂದರೆಗೀಡಾಗಿದ್ದಾರೆ. ಈ 14 ಗ್ರಾಮಗಳಲ್ಲಿನ ಹಿಂದೂಗಳು ಮುಸ್ಲಿಮರಿಗೆ ಬಾಡಿಗೆ ಮನೆ ನೀಡದಿರಲು ಮತ್ತು ಮುಸ್ಲಿಮರಿಗೆ ನೌಕರಿ ನೀಡದಿರಲು ನಿರ್ಧರಿಸಿದ್ದಾರೆ.

ಗುರುಗ್ರಾಮದ ತಿಘರಾ ಗ್ರಾಮದಲ್ಲಿ ಮಹಾಪಂಚಾಯತ್

ನೂಹ್ ಹಿಂಸಾಚಾರದ ಹಿನ್ನೆಲೆಯಲ್ಲಿ ಗುರುಗ್ರಾಮದ ತಿಘರಾ ಗ್ರಾಮದಲ್ಲಿ ಹಿಂದೂ ಸಮಾಜದಿಂದ ಮಹಾ ಪಂಚಾಯತಅನ್ನು ಕರೆಯಲಾಗಿತ್ತು. ಈ ಮಹಾಪಂಚಾಯತಿಯಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗ ದಳ ಹಾಗೂ ಹಿಂದೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಆ ಸಮಯದಲ್ಲಿ ಹಿಂದೂಗಳು ಮುಸ್ಲಿಮರ ಮೇಲೆ ಆರ್ಥಿಕ ಮತ್ತು ಸಾಮಾಜಿಕ ಬಹಿಷ್ಕಾರಕ್ಕೆ ಕರೆ ನೀಡಿದರು. ಈ ಸಮಯದಲ್ಲಿ ಗ್ರಾಮದ ಸೆಕ್ಟರ್-57 ರಲ್ಲಿರುವ ಅಂಜುಮನ್ ಮಸೀದಿಯನ್ನು ಕೆಡವುವಂತೆ ಮಹಾಪಂಚಾಯಿತಿಯಲ್ಲಿ ಕೇಳಿಬಂದಿತ್ತು. ಮಹಾಪಂಚಾಯತಿಯಲ್ಲಿದ್ದ ಜನರು ‘ಈ ಪ್ರದೇಶ ಹಿಂದೂಬಹುಸಂಖ್ಯಾತವಿರುವ ಪ್ರದೇಶವಾಗಿರುವುದರಿಂದ ಇಲ್ಲಿ ಮಸೀದಿ ಇರಬಾರದು’ ಎಂದು ಆಗ್ರಹಿಸುತ್ತಿದ್ದರು.

ಕಾಂಗ್ರೆಸ್ ಶಾಸಕ ಮಮ್ಮನ್ ಖಾನ್ ನನ್ನು ಏಕೆ ಬಂಧಿಸಿಲ್ಲ ?

ನೂಹ್‌ನಲ್ಲಿ ನಡೆದ ಹಿಂಸಾಚಾರದ ನಂತರ, ಅದರ ಬಿಸಿ ಸುತ್ತಮುತ್ತಲಿನ ಗ್ರಾಮಗಳಿಗೆ ತಟ್ಟಿತು. ಗುರುಗ್ರಾಮದಲ್ಲೂ ಹಿಂಸಾಚಾರ ನಡೆಯಿತು. ಇದಕ್ಕೆ ಪೊಲೀಸರೇ ಹೊಣೆ; ಆದರೆ ಅದನ್ನು ಹಿಂದೂಗಳ ಮೇಲೆ ಹೊರಿಸಲಾಯಿತು ಎಂದು ಮಹಾಪಂಚಾಯತಿಯಲ್ಲಿ ಪಾಲ್ಗೊಂಡಿದ್ದ ಹಿಂದೂಗಳು ಹೇಳಿದ್ದಾರೆ. ಮುಸ್ಲಿಮರು ಹಿಂಸಾಚಾರವನ್ನು ಪೂರ್ವಯೋಜಿಸಿದ್ದರು; ಆದರೆ ಗುರುಗ್ರಾಮದಲ್ಲಿ ಪೊಲೀಸರು 4 ಹಿಂದೂ ಹುಡುಗರನ್ನು ಬಂಧಿಸಿದ್ದಾರೆ. ಆದರೆ, ಇದೇ ಪೊಲೀಸರು ನೂಹ್ ನಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಕಾಂಗ್ರೆಸ್ ಶಾಸಕ ಮಮ್ಮನ್ ಖಾನ್ ಅವನನ್ನು ಮಾತ್ರ ಬಂಧಿಸಲಿಲ್ಲ. ಪೊಲೀಸರು ಈ ಗಲಭೆ ಪ್ರಕರಣದಲ್ಲಿ ಬಂಧಿಸಿರುವ ಅಮಾಯಕ ಹಿಂದೂಗಳನ್ನು ಬಿಡುಗಡೆ ಮಾಡಲು ಪೊಲೀಸರು 7 ದಿನಗಳ ಕಾಲಾವಕಾಶ ಕೇಳಿದ್ದಾರೆ. 7 ದಿನದೊಳಗೆ ಬಿಡುಗಡೆ ಮಾಡದಿದ್ದಲ್ಲಿ ಮಹಾಪಂಚಾಯತ್ ಕಠಿಣ ನಿರ್ಧಾರ ಕೈಗೊಳ್ಳಲಿದೆ ಎಂದು ಮಹಾಪಂಚಾಯತ್ ಪೊಲೀಸರಿಗೆ ಎಚ್ಚರಿಕೆ ನೀಡಿದೆ. ಗಲಭೆ ಪ್ರಕರಣಗಳಲ್ಲಿ ಅಮಾಯಕ ಹಿಂದೂಗಳನ್ನು ಪೊಲೀಸರು ಬಂಧಿಸುತ್ತಿರುವ ಬಗ್ಗೆ ಹಿಂದೂಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಪಾದಕೀಯ ನಿಲುವು

ಮುಸ್ಲಿಮರನ್ನು ಬಹಿಷ್ಕರಿಸುವುದರಿಂದ ಸರ್ವಧರ್ಮಸಮಭಾವಿಗಳು ಸೆಟೆದು ಎದ್ದು ಹಿಂದೂಗಳನ್ನು ‘ಮತಾಂಧರು’ ಎಂದು ದೂಷಿಸುತ್ತಾರೆ; ಆದರೆ ಹಿಂದೂಗಳಿಗೆ ಈ ಸಮಯ ಏಕೆ ಬಂದಿದೆ ?’ ಎಂಬುದನ್ನು ಜಾತ್ಯತೀತವಾದಿಗಳು, ಸಮಾಜವಾದಿಗಳು ವಿಚಾರ ಮಾಡುತ್ತಾರೆಯೇ ?