ದೇಶದ ಗಡಿಗಳನ್ನು ಭದ್ರ ಪಡಿಸಲಾಗುತ್ತಿದೆ ! – ವಿದೇಶಾಂಗ ಸಚಿವ ಎಸ್. ಜೈಶಂಕರ್

ಹೊಸ ದೆಹಲಿ – ವಿದೇಶಾಂಗ ಸಚಿವ ಎಸ್. ಜಯ ಶಂಕರ ಇವರು, ಭೂತಾನ್ ಮತ್ತು ಅಸ್ಸಾಂನ್ನು ಸಂಪರ್ಕಿಸುವ ‘ರೈಲ್ವೆ ಲಿಂಕ್’ ಗಾಗಿ ಚರ್ಚೆ ನಡೆಯುತ್ತಿದೆ. ಹಾಗೆಯೇ ಮ್ಯಾನ್ಮಾರ್ ಗಡಿ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ದೇಶದ ಗಡಿಗಳನ್ನು ಬಲ ಪಡಿಸಲಾಗುತ್ತಿದೆ ಎಂದು ಹೇಳಿದರು. ಭೂತಾನ್ ಮತ್ತು ಚೀನಾದಲ್ಲಿ ಚರ್ಚೆ ನಡೆಯುತ್ತಿದೆ ಮತ್ತು 24 ಸುತ್ತುಗಳ ಮಾತುಕತೆ ಪೂರ್ಣಗೊಂಡಿವೆ. ‘ಈ ಚರ್ಚೆಯು ಭಾರತದ ಮೇಲೆ ಏನು ಪರಿಣಾಮ ಬೀರಬಹುದು’ ಈ ವಿಷಯದ ಬಗ್ಗೆ ನಾವು ನಿಗಾವಹಿಸುತ್ತಿದ್ದೇವೆ ಎಂದು ಅವರು ಹೇಳಿದರು.

ಎಸ್. ಜೈಶಂಕರ್ ಇವರು, ಚೀನಾ ಜೊತೆಗಿನ ಸಂಬಂಧ ಹದಗೆಡುತ್ತಿರುವ ಬಗ್ಗೆಯೂ ಪ್ರತಿಕ್ರಿಯಿಸಿದ್ದಾರೆ. ಅವರು, ಭಾರತ-ಚೀನಾ ಗಡಿ ವಿವಾದ ಚರ್ಚೆ ನಿಂತಿಲ್ಲ. ಈ ವಿಷಯದ ಬಗ್ಗೆ ಶೀಘ್ರದಲ್ಲಿಯೇ ಸಭೆ ನಡೆಸಲಾಗುವುದು. ಕಳೆದ 3 ವರ್ಷಗಳಲ್ಲಿ ಗಡಿಯಲ್ಲಿ ಉದ್ವಿಗ್ನತೆ ಕಡಿಮೆಯಾಗಿದೆ. 2014 ರ ನಂತರ ಭಾರತವು ಈ ಪ್ರದೇಶದಲ್ಲಿ ಮೂಲಸೌಕರ್ಯಗಳನ್ನು ನಿರ್ಮಿಸಲು ಪ್ರಾರಂಭಿಸಿದಾಗ, ಚೀನಾ ಕೂಡ ಈ ಪ್ರದೇಶದಲ್ಲಿ ಅವರ ಸೈನಿಕರಿಗಾಗಿ ಮೂಲಸೌಕರ್ಯಗಳನ್ನು ನಿರ್ಮಿಸುವ ಬಗ್ಗೆ ಗಮನ ಹರಿಸುವ ಮೂಲಕ ಭಾರತದೊಂದಿಗೆ ಸ್ಪರ್ಧಿಸಿದೆ, ಹೀಗೆಂದು ಎಸ್. ಜೈಶಂಕರ್ ರವರು ಹೇಳಿದರು.