ನವದೆಹಲಿ – ಅಗಸ್ಟ 5 ರಂದು ನಿಷೇಧಿತ ಜಿಹಾದಿ ಭಯೋತ್ಪಾದಕ ಸಂಘಟನೆ ‘ಪಾಪ್ಯೂಲರ ಫ್ರಂಟ ಆಫ್ ಇಂಡಿಯಾ’ ದ ಕೋಟ್ಯಾಂತರ ರೂಪಾಯಿಗಳ ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿದೆ. ಜಾರಿ ನಿರ್ದೇಶನಾಲಯ (ಇಡಿ) ಕೈಗೊಂಡಿರುವ ಕ್ರಮದಲ್ಲಿ ಕೇರಳದಲ್ಲಿ 2.53 ಕೋಟಿ ಮೌಲ್ಯದ ಸ್ಥಿರಾಸ್ತಿ ಸೇರಿದೆ. ಜಾರಿ ನಿರ್ದೇಶನಾಲಯಕ್ಕನುಸಾರ ವಶಪಡಿಸಿಕೊಳ್ಳಲಾಗಿದ್ದ ಆಸ್ತಿಯಲ್ಲಿ 4 ‘ವಿಲಾ’ಗಳು (ಆಧುನಿಕ ಪದ್ಧತಿಯಿಂದ ಕಟ್ಟಿದ ಮನೆಗಳ) ಸೇರಿದಂತೆ ‘ಮುನ್ನಾರ ವಿಲಾ ವಿಸ್ಟಾ ಯೋಜನೆ’ಯ ಅಡಿಯಲ್ಲಿ ಬರುವ 6.75 ಎಕರೆ ಭೂಮಿಯನ್ನೂ ವಶಪಡಿಕೊಳ್ಳಲಾಗಿದೆ. ಈ ಯೋಜನೆಯನ್ನು ಪಿ.ಎಫ್.ಐ. ನ ಕೇರಳ ಪ್ರದೇಶ ಉಪಾಧ್ಯಕ್ಷ ಎಮ್.ಕೆ. ಅಶರಫ್ ನಡೆಸುತ್ತಿದ್ದನು. ಅಶರಫ್ ಇವನು ದೆಹಲಿಯ ತಿಹಾರ ಜೈಲಿನಲ್ಲಿದ್ದಾನೆ.
ED attaches properties worth Rs 2.53 cr in PFI case #Attaches #Delhi #Democratic #Directorate #Kannur https://t.co/MljQYpeOxv
— TeluguStop.com (@telugustop) August 5, 2023