ಬಂದ್‌ನಿಂದಾಗಿ ಇಂಫಾಲ ಕಣಿವೆಯಲ್ಲಿ ಜನಜೀವನ ಅಸ್ತವ್ಯಸ್ತ !

ಇಂಫಾಲ್ – ಮಣಿಪುರದ 27 ವಿಧಾನಸಭಾ ಕ್ಷೇತ್ರಗಳ ಸಮನ್ವಯ ಸಮಿತಿಯ ಕರೆಯ ಮೇರೆಗೆ ಆಗಸ್ಟ್ 5 ರಂದು ಇಂಫಾಲ್ ಕಣಿವೆಯಲ್ಲಿ 24 ಗಂಟೆಗಳ ಬಂದ್ ಜನಜೀವನವನ್ನು ಅಸ್ತವ್ಯಸ್ತಗೊಳಿಸಿತು. ಬಹುತೇಕ ವಸತಿ ಪ್ರದೇಶಗಳಲ್ಲಿನ ಮಾರುಕಟ್ಟೆಗಳು ಮುಚ್ಚಿದ್ದವು. ಸಾರ್ವಜನಿಕ ಸಾರಿಗೆ ಸಂಚಾರ ಸ್ಥಗಿತಗೊಂಡಿತ್ತು ಮತ್ತು ಶಾಲೆಗಳನ್ನು ಸಹ ಮುಚ್ಚಲಾಗಿತ್ತು. ಆದರೆ, ಗುಡ್ಡಗಾಡು ಜಿಲ್ಲೆಗಳಲ್ಲಿ ಮಾತ್ರ ಈ ಬಂದ್ ಹೆಚ್ಚು ಪರಿಣಾಮ ಬೀರಲಿಲ್ಲ.

ಈ ಬಂದ್ ಕುರಿತು ಮಾಹಿತಿ ನೀಡಿದ ಸಮನ್ವಯ ಸಮಿತಿಯ ಸಂಯೋಜಕ ಎಲ್. ವಿನೋದ ಇವರು, ‘`ಮಣಿಪುರಕ್ಕೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಚರ್ಚಿಸಲು ವಿಧಾನಸಭೆಯ ಅಧಿವೇಶನ ಕರೆಯಬೇಕೆಂದು ಒತ್ತಾಯಿಸಿ ಬಂದ್‌ಗೆ ಕರೆ ನೀಡಲಾಗಿತ್ತು. ಬಂದ್ ಗೆ ಕರೆ ನೀಡಿರುವುದು ಜನರನ್ನು ಮತ್ತಷ್ಟು ತೊಂದರೆಗೆ ದೂಡಲು ಅಲ್ಲ, ಬದಲಾಗಿ ಸರಕಾರದ ಮೇಲೆ ಒತ್ತಡ ಹೇರಲು ಆಗಿದೆ”ಯೆಂದು ಹೇಳಿದರು. ಮಣಿಪುರ ವಿಧಾನಸಭೆಯ ಅಧಿವೇಶನ ಆಗಸ್ಟ 21 ರಿಂದ ನಡೆಸಬೇಕು ಎಂದು ರಾಜ್ಯ ಸಚಿವ ಸಂಪುಟ ಸಮಿತಿಯು ಆಗಸ್ಟ್ 4 ರಂದು ರಾಜ್ಯಪಾಲ ಅನಸೂಯಾ ಉಯಿಕೆ ಅವರಿಗೆ ಶಿಫಾರಸ್ಸು ಮಾಡಿತು.