ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ಇಮ್ರಾನ್ ಖಾನ್ ಇವರಿಗೆ 3 ವರ್ಷ ಶಿಕ್ಷೆ

ಇಸ್ಲಾಮಬಾದ – ಪ್ರಧಾನಮಂತ್ರಿ ಸ್ಥಾನದಲ್ಲಿರುವಾಗ ಸಿಕ್ಕಿದ್ದ ಉಡುಗೊರೆಯ ಹಗರಣದ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ಇಮ್ರಾನ್ ಖಾನ್ ಇವರಿಗೆ ಜಿಲ್ಲಾ ಸತ್ರ ನ್ಯಾಯಾಲಯವು 3 ವರ್ಷಗಳ ಶಿಕ್ಷೆ ವಿಧಿಸಿದೆ. ಆದ್ದರಿಂದ ಅವರು ಮುಂದಿನ ೫ ವರ್ಷ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ. ನ್ಯಾಯಾಲಯವು ಅವರಿಗೆ ಒಂದು ಲಕ್ಷ ಪಾಕಿಸ್ತಾನಿ ರೂಪಾಯಿಯ ದಂಡ ಕೂಡ ವಿಧಿಸಿದೆ.

ಪಾಕಿಸ್ತಾನದಲ್ಲಿನ ಮುಸ್ಲಿಂ ಲೀಗ್ ನವಾಝ (ಪಿ.ಎಮ್.ಎಲ್.ಏನ್) ಪಕ್ಷದ ನೇತೃತ್ವದಲ್ಲಿ ಮೈತ್ರಿ ಸರಕಾರವು ಖಾನ್ ಇವರ ಮೇಲೆ ಈ ಪ್ರಕರಣದ ದೂರು ದಾಖಲಿಸಿತ್ತು. ಇಮ್ರಾನ್ ಖಾನ್ ಪ್ರಧಾನಮಂತ್ರಿ ಸ್ಥಾನದಲ್ಲಿರುವಾಗ ಅವರಿಗೆ ವಿವಿಧ ದೇಶದಿಂದ ದೊರೆತಿರುವ ಉಡುಗೊರೆಯ ಮಾಹಿತಿ ಅವರು ಸರಕಾರದ ಇಲಾಖೆಯಲ್ಲಿ ಬಹಿರಂಗಪಡಿಸಿರಲಿಲ್ಲ. ಈ ಉಡುಗೊರೆಗಳನ್ನು ಕಾನೂನ ಬಾಹಿರವಾಗಿ ಮಾರಿರುವ ಆರೋಪ ಖಾನ್ ಇವರ ಮೇಲೆ ಮಾಡಿದ್ದರು. ಖಾನ್ ಇವರು ಮಾರಿರುವ ಉಡುಗೊರೆಯಲ್ಲಿ ಒಂದು ಬೆಲೆ ಬಾಳುವ ಪೆನ್ನು, ಒಂದು ಉಂಗುರ, ರೋಲೆಕ್ಸ್ ಕಂಪನಿಯ ೪ ಬೆಲೆ ಬಾಳುವ ಗಡಿಯಾರಗಳ ಸಮಾವೇಶವಿತ್ತು.