ಬಹಳಷ್ಟು ವಸ್ತುಗಳು ಚೀನಾದಿಂದ ಬರುತ್ತವೆ !
(ಟ್ಯಾಬಲೆಟ್ ಎಂದರೆ ಚಿಕ್ಕ ಆಧುನಿಕ ಮೊಬೈಲ್)
ನವ ದೆಹಲಿ – ಭಾರತದ ವಿದೇಶಿ ವ್ಯಾಪಾರ ಮಹಾನಿರ್ದೆಶನಾಲಯವು, ಲ್ಯಾಪ್ ಟಾಪ್, ಕಂಪ್ಯೂಟರ್ ಮತ್ತು ಟ್ಯಾಬಲೆಟ್ ಇವುಗಳ ಆಮದಿನ ಮೇಲೆ ನಿಷೇಧ ಹೇರಿದ್ದಾರೆ. ಕೇವಲ ಯೋಗ್ಯ ಅನುಮತಿ ಇರುವ ಸೀಮಿತ ವಸ್ತುಗಳನ್ನು ಆಮದು ಮಾಡಿಕೊಳ್ಳಲು ಅನುಮತಿ ನೀಡಲಾಗುವುದು. ಇಂತಹ ವಸ್ತುಗಳನ್ನು ಮಾರುವ ಅನುಮತಿ ಇರುವುದಿಲ್ಲ ಹಾಗೂ ಉಪಯೋಗಿಸಿದ ನಂತರ ಆ ವಸ್ತು ನಾಶ ಮಾಡಬೇಕಾಗುತ್ತದೆ ಅಥವಾ ಅದನ್ನು ರಫ್ತು ಮಾಡಲು ಬರುತ್ತದೆ, ಎಂದು ಸರಕಾರದಿಂದ ಹೇಳಲಾಗಿದೆ.
लैपटॉप, टैबलेट और कंप्यूटर के आयात पर भारत ने लगाई रोक, सिर्फ इस आधार पर मिलेगी अनुमति #लैपटॉप #टैबलेट #कंप्यूटर #laptops #computers #buisness https://t.co/346gc7QZgo
— Oneindia Hindi (@oneindiaHindi) August 3, 2023
೧. ಭಾರತವು ಈ ನಿರ್ಣಯ ‘ಮೇಕ ಇನ್ ಇಂಡಿಯಾ’ (ಭಾರತದ ಯೋಜನೆಗಳಿಗೆ ಪ್ರೋತ್ಸಾಹ ನೀಡುವುದಕ್ಕಾಗಿರುವ ಯೋಜನೆ) ತೆಗೆದುಕೊಂಡುದ್ದಾರೆ ಎಂದು ಹೇಳಲಾಗುತ್ತಿದೆ. ಭಾರತ ಬಹುತೇಕ ಲ್ಯಾಪ್ ಟಾಪ್, ಕಂಪ್ಯೂಟರ್ ಮತ್ತು ಟ್ಯಾಬಲೆಟ್ ಚೀನಾದಿಂದ ಆಮದು ಮಾಡುತ್ತದೆ. ಸರಕಾರದ ಈ ನಿರ್ಣಯದಿಂದ ಈ ವಸ್ತುಗಳ ಮೌಲ್ಯ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
೨. ‘ಮ್ಯಾನುಫ್ಯಾಕ್ಚರ್ಸ್ ಅಸೋಸಿಯೇಷನ್ ಆಫ್ ಇನ್ಫಾರ್ಮಶನ್ ಟೆಕ್ನಾಲಜಿ’ಯ ಮಾಜಿ ಸಂಚಾಲಕರು ಅಲಿ ಆಕ್ತರ್ ಜಾಫರಿ ಇವರು, ಸರಕಾರದ ಈ ನಿರ್ಣಯದಿಂದ ಭಾರತದಲ್ಲಿ ನಿರ್ಮಾಣವಾಗುವ ಯೋಜನೆಗಳಿಗೆ ಪ್ರೋತ್ಸಾಹ ದೊರೆಯುತ್ತದೆ. ಇದು ಒಂದು ಸಕಾರಾತ್ಮಕ ನಿರ್ಣಯವಾಗಿದೆ. ನಾವು ಇದನ್ನು ಸ್ವಾಗತಿಸುತ್ತೇವೆ ಎಂದು ಹೇಳಿದರು.