ಹಿಂದೂಗಳ ತೀವ್ರ ವಿರೋಧದಿಂದ ಮಹಾನಗರಪಾಲಿಕೆಯಿಂದ ದೇವಸ್ಥಾನದ ಗೋಡೆಯ ಪುನರ್ನಿರ್ಮಾಣ !
ಬೆಂಗಳೂರು – ಮಹಾನಗರ ಪಾಲಿಕೆಯು ಸರಕಾರಿ ಭೂಮಿಯಲ್ಲಿ ಅತಿಕ್ರಮಣವನ್ನು ಕೆಡವುತ್ತಿರುವಾಗ ಎಸ್.ಪಿ. ಮಾರ್ಗದಲ್ಲಿದ್ದ 600 ವರ್ಷಗಳಷ್ಟು ಪುರಾತನ ಜಲಕಂಠೇಶ್ವರ ದೇವಸ್ಥಾನದ ಗೋಡೆಯನ್ನೂ ಹಾನಿಯನ್ನುಂಟು ಮಾಡಿದ್ದಾರೆ. ಭಕ್ತರು ತೀವ್ರವಾಗಿ ವಿರೋಧಿಸಿದ ಬಳಿಕ ದೇವಸ್ಥಾನದ ಗೋಡೆಯನ್ನು ಪುನರ್ ನಿರ್ಮಾಣ ಆರಂಭಿಸಿದೆ. ಸ್ಥಳೀಯರು, ಕಾರ್ಯಾಚರಣೆ ವೇಳೆ ಮಹಾನಗರಪಾಲಿಕೆಯು ಯಾವುದೇ ಕಾರಣವನ್ನು ನೀಡದೆ ಅಥವಾ ನೋಟಿಸ್ ನೀಡದೆ ಏಕಾಏಕಿ ಜಲಕಂಠೇಶ್ವರ ದೇವಸ್ಥಾನದ ಗೋಡೆಯನ್ನು ಕೆಡವಿದರು, ಎಂದು ಆರೋಪಿಸಿದ್ದಾರೆ. ಇದರಿಂದ ಮೂಲ ವಿಗ್ರಹಕ್ಕೆ ಹಾನಿಯಾಗಿದೆ. ಕಾರ್ಯಾಚರಣೆ ವೇಳೆ ಅರ್ಚಕರು ವಿರೋಧಿಸಿದರೂ ಪಾಲಿಕೆ ಅಧಿಕಾರಿಗಳು ಕ್ರಮ ಕೈಗೊಂಡರು.
ಇತಿಹಾಸ ಪ್ರಸಿದ್ಧ ಜಲಕಂಠೇಶ್ವರ ದೇವಸ್ಥಾನ ನೆಲಸಮ https://t.co/rCgNbU0SmM
— Vijayavani (@VVani4U) August 1, 2023
(ಸೌಜನ್ಯ – News18 Kannada)
ಸಂಪಾದಕೀಯ ನಿಲುವುದೇವಸ್ಥಾನದ ಗೋಡೆಯನ್ನು ಪುನರ್ ನಿರ್ಮಾಣದ ಜೊತೆಗೆ ಇದಕ್ಕೆ ಕಾರಣರಾದವರ ವಿರುದ್ಧವೂ ಕ್ರಮ ಕೈಗೊಳ್ಳುವುದು ಆವಶ್ಯಕವಾಗಿದೆ ! |