|
ಇಂಫಾಲ್ (ಮಣಿಪುರ) – ಕ್ರೈಸ್ತ ಕುಕಿ ಭಯೋತ್ಪಾದಕ ಮತ್ತು ಹಿಂದೂ ಮೈತೆಯಿ ಇವರಲ್ಲಿ ೩ ತಿಂಗಳಿಂದ ನಡೆಯುತ್ತಿರುವ ಸಂಘರ್ಷ ಕಡಿಮೆಯಾಗುವ ಲಕ್ಷಣ ಕಾಣುತ್ತಿಲ್ಲ. ಗ್ರಾಮದಲ್ಲಿನ ತಥಾ ಕಥಿತ ರಕ್ಷಕ ಇರುವ ಕುಕಿ ಭಯೋತ್ಪಾದಕರು ಮೈತೆಯಿ ಗ್ರಾಮಸ್ಥರ ಮೇಲೆ ಗುಂಡಿನ ದಾಳಿ ನಡೆಸುತ್ತಿದ್ದಾರೆ. ಇದು ಮುಖ್ಯವಾಗಿ ರಾಜಧಾನಿ ಇಂಪಾಲಾದ ಅಕ್ಕಪಕ್ಕದ ಪ್ರದೇಶದಲ್ಲಿ ಮತ್ತು ಗುಡ್ಡಗಾಡು ಪ್ರದೇಶದಲ್ಲಿ ನಡೆಯುತ್ತಿದೆ ಎಂದು ‘ಮೈತೆಯಿ ಹೆರಿಟೇಜ್ ಸೊಸೈಟಿ’ ಈ ಸಂಘಟನೆ ಟ್ವೀಟ್ ಮೂಲಕ ಮಾಹಿತಿ ನೀಡಿದೆ. ಈ ರೀತಿ ಮೇ ೩, ೨೦೨೩ ರಿಂದ ನಿರಂತರವಾಗಿ ನಡೆಯುತ್ತಿದೆ ಎಂದು ಹೇಳಲಾಗಿದೆ.
೧. ಇಂತಹ ಒಂದು ಘಟನೆಯ ವಿಡಿಯೋ ಹೆಚ್ಚಿನ ಪ್ರಮಾಣದಲ್ಲಿ ಪ್ರಸಾರವಾಗುತ್ತಿತ್ತು ಅದರಲ್ಲಿ ಒಬ್ಬ ಪತ್ರಕರ್ತ ಒಬ್ಬ ಮೈತೆಯಿ ಮಹಿಳೆಯ ಸಂದರ್ಶನ ತೆಗೆದುಕೊಳ್ಳುತ್ತಿರುವಾಗ ಅವರ ಮೇಲೆ ಗುಂಡಿನ ದಾಳಿ ಮಾಡಲಾಗಿದೆ. ಅದೃಷ್ಟವಶಾತ್ ಇಬ್ಬರೂ ಕೂಡ ಅದರಿಂದ ಪಾರಾಗಿದ್ದಾರೆ.
೨. ಇನ್ನೊಂದು ಕಡೆಗೆ ಭಾರತ ಮ್ಯಾನ್ಮಾರ ಗಡಿಯಲ್ಲಿರುವ ಮೋರೆಹ ಗ್ರಾಮದಲ್ಲಿ ಮಣಿಪುರ್ ಪೊಲೀಸರ ೧೦೦ ಕಮಾಂಡೋಗಳು ನೆಮಿಸಿರುವುದರಿಂದ ಅವರು ಪೂರ್ಣ ಶಕ್ತಿಯಿಂದ ಗಡಿಯಲ್ಲಿ ಕಾವಲು ಕಾಯುತ್ತಿದ್ದಾರೆ. ಅವರಿಗೆ ಅವಶ್ಯಕ ಆಹಾರ ಮತ್ತು ನೀರಿನ ಕೊರತೆ ಆಗುತ್ತಿದೆ. ಆದರೂ ಕೂಡ ಮ್ಯಾನಮಾರದಲ್ಲಿ ಭಯೋತ್ಪಾದನೆ ಮತ್ತು ಕಾನೂನು ಬಾಹಿರ ಇರುವ ಯಾತ್ರಿಕರು ಇವರಿಂದ ಮಣಿಪುರವನ್ನು ಕಾಪಾಡುವುದಕ್ಕಾಗಿ ಅವರು ಗೋಡೆಯಂತೆ ಅಡ್ಡವಾಗಿ ನಿಂತಿದ್ದಾರೆ, ಎಂದು ಮಾಹಿತಿ ನೀಡಿದ್ದಾರೆ. ಮಣಿಪುರ ಸರಕಾರ ಈ ಕಮಾಂಡೋಗಳ ಸಹಾಯ ಮಾಡುವುದಕ್ಕಾಗಿ ಪ್ರಯತ್ನ ಮಾಡುತ್ತೊರುವಾಗ ಕುಕೀ ಮಹಿಳೆಯರು ಇದರಲ್ಲಿ ಅಡಚಣೆ ನಿರ್ಮಾಣ ಮಾಡುತ್ತಿದ್ದಾರೆ.
೩. ಕೇಂದ್ರ ಸುರಕ್ಷಾ ದಳದ ಸಂದೇಹಾಸ್ಪದ ನಿಲುವಿನ ಬಗ್ಗೆಯೂ ಪ್ರಶ್ನೆಗಳನ್ನು ಕೇಲಲಾಗುತ್ತಿದೆ ಕೇಂದ್ರ ಗೃಹ ಸಚಿವರ ಆದೇಶ ಇರುವಾಗ ಕೂಡ ಅವರು ಮ್ಯಾನಮಾರದಿಂದ ೭೧೮ ನುಸುಳುಕೋರರಿಗೆ ಮಣಿಪುರದಲ್ಲಿ ಪ್ರವೇಶ ನೀಡಿರುವುದಾಗಿ ಹೇಳಲಾಗುತ್ತಿದೆ.
೪. ಸರಕಾರಿ ಅಂಕಿ ಅಂಶಗಳ ಪ್ರಕಾರ ಕುಕೀ ಜನಾಂಗದ ತುಲನೆಯಲ್ಲಿ ಮೈತೆಯಿ ಜನಾಂಗಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಸ್ಥಳಾಂತರವಾಗಿದ್ದಾರೆ. ಕುಕಿಯ ತುಲನೆಯಲ್ಲಿ ಮೈತೆಯಿಯ ೫ ಪಟ್ಟು ಹೆಚ್ಚಿನ ಕುಟುಂಬಗಳು ಸ್ಥಳಾಂತರಿತವಾಗಿವೆ. ಸರಕಾರಿ ಅಂಕಿ ಅಂಶಗಳಲ್ಲಿ, ಕಳೆದ ೮ ವರ್ಷಗಳಲ್ಲಿ ೨೮೦ ಮೈತೆಯಿ ಕುಟುಂಬಗಳು ಅವರ ಮನೆ ಬಿಟ್ಟು ಹೋಗಿದ್ದಾರೆ. ಇದರ ತುಲನೆಯಲ್ಲಿ ಕೇವಲ ೫೯ ಕುಕೀ ಕುಟುಂಬಗಳು ಸ್ಥಳಾಂತರಗೊಂಡಿದ್ದಾರೆ.
೫. ಕುಕೀ ಭಯೋತ್ಪಾದಕರಿಂದ ನಡೆಯುತ್ತಿರುವ ಹಿಂಸಾಚಾರದಲ್ಲಿ ಕುಕೀ ಜನಾಂಗ ಬೆಂಬಲಿಸುತ್ತಿದೆ. ಅವರ ಪ್ರಕಾರ, ಮಣಿಪುರ ಸರಕಾರ ಅವರನ್ನು ಗುರಿ ಮಾಡುತ್ತಿರುವುದರಿಂದ ಅವರು ಅದರ ವಿರೋಧ ಮಾಡುತ್ತಿದ್ದಾರೆ.
ಸಂಪಾದಕೀಯ ನಿಲುವುಮಣಿಪುರದಲ್ಲಿನ ಹಿಂಸಾಚಾರದ ಹಿಂದೆ ಕುಕಿ ಭಯೋತ್ಪಾದನೆ, ಮಾದಕ ಪದಾರ್ಥಗಳ ಕಳ್ಳ ಸಾಗಾಣಿಕೆ ಮಾಡುವ ಭಯೋತ್ಪಾದಕರು ಮತ್ತು ಮ್ಯಾನಮಾರನಿಂದ ಪ್ರಚೋದನೆ ನೀಡುವ ಶಕ್ತಿಗಳು ಇದೆ. ಇದನ್ನು ತಿಳಿದುಕೊಂಡು ಈಗ ಭಾರತ ಇಂತಹವರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದು ಅತ್ಯಾವಶ್ಯಕವಾಗಿದೆ ! |