‘ಯೋಗಿ ಆದಿತ್ಯನಾಥರಿಗೆ ಅನಿಸಿದರೆ, ಅವರು ಜ್ಞಾನವಾಪಿಯ ಮೇಲೆ ಬುಲ್ಡೋಜರ್ ನಡೆಸಬಹುದಂತೆ !

ವಿಷ ಕಕ್ಕಿದ ಅಸತ್ತುದ್ದೀನ್ ಓವೈಸಿ !

ಭಾಗ್ಯನಗರ (ತೆಲಂಗಾಣ) – ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರಿಗೆ ಅನಿಸಿದರೆ, ಅವರು ಜ್ಞಾನವಾಪಿಯ ಮೇಲೆ ಬುಲ್ಡೋಜರ್ ನಡೆಸುವರು, ಎಂದು ಎಂ.ಐ.ಎಂ. ನ ಸಂಸದ ಅಸುದ್ದುದ್ದೀನ್ ಓವೈಸಿ ಇವರು ಯೋಗಿ ಆದಿತ್ಯನಾಥ ಇವರ ಜ್ಞಾನವಾಪಿಯ ಬಗ್ಗೆ ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದರು.

ಅಸದುದ್ದೀನ್ ಓವೈಸಿ ಇವರು ಮಾತು ಮುಂದುವರಿಸಿ, ಧಾರ್ಮಿಕ ಪ್ರಕರಣ ಯಾವಾಗ ನ್ಯಾಯಾಲಯದಲ್ಲಿ ನಡೆಯುತ್ತಿರುತ್ತದೆ, ಅದರ ಬಗ್ಗೆ ಯಾವುದೇ ಹೇಳಿಕೆ ನೀಡುವುದು, ಇದು ಸಂವಿಧಾನ ವಿರೋಧಿಯಾಗಿದೆ. ಮುಖ್ಯಮಂತ್ರಿಗಳು ಕಾನೂನನ್ನು ಪಾಲಿಸಬೇಕು; ಆದರೆ ಅವರು ಮುಸಲ್ಮಾನರ ಮೇಲೆ ಒತ್ತಡ ಹೇರುವ ಕಾರ್ಯ ಮಾಡುತ್ತಿದ್ದಾರೆ. ಮುಸಲ್ಮಾನ ಪಕ್ಷದಿಂದ ಈ ಪ್ರಕರಣ ಉಚ್ಚ ನ್ಯಾಯಾಲಯದಲ್ಲಿ ಕೊಂಡೊಯ್ಯಲಾಗಿದೆ. ಅದರ ಮೇಲೆ ಒಂದೆರಡು ದಿನದಲ್ಲಿ ನಿರ್ಣಯ ಬರುವುದು. ಇಂತಹ ಸಮಯದಲ್ಲಿ ಈ ರೀತಿಯ ಹೇಳಿಕೆ ನೀಡುವುದು ಅಂದರೆ ದ್ವೇಷ ಪಸರಿಸುವುದಾಗಿದೆ. ಇದು ಹಿಂದೂ ಮತ್ತು ಮುಸಲ್ಮಾನ್ ಇವರ ಪ್ರಶ್ನೆಯಾಗಿರದೇ ‘ಮುಖ್ಯಮಂತ್ರಿಗಳು ಕಾನೂನು ಒಪ್ಪುವರೇ ಅಥವಾ ಇಲ್ಲವೋ ?’. ಎಂದಾಗಿದೆ ಎಂದು ಹೇಳಿದರು. ಪ್ರಧಾನಮಂತ್ರಿಯ ಹುದ್ದೆಯ ಕನಸು ಕಾಣುವ ಯೋಗಿ ಆದಿತ್ಯನಾಥ ಇವರು, ದೇಶವನ್ನು ೧೦೦ ವರ್ಷ ಮುಂದೆ ತೆಗೆದುಕೊಂಡು ಹೋಗಲು ಇಚ್ಚಿಸುತ್ತಿದ್ದಾರೆ ಅಥವಾ ೪೦೦ ವರ್ಷ ಹಿಂದೆ ತೆಗೆದುಕೊಂಡು ಹೋಗಲು ಇಚ್ಚಿಸುತ್ತಿದ್ದಾರೆ ಎಂಬುದರ ಬಗ್ಗೆ ನಿರ್ಧಾರ ಕೈಗೊಳ್ಳಬೇಕು. (ಜ್ಞಾನವಾಪಿಯ ಪ್ರಶ್ನೆ ಪರಿಹರಿಸುವುದು, ಇದು ದೇಶವನ್ನು ಮುಂದೆ ಕೊಂಡೊಯ್ಯುವ ಒಂದು ಭಾಗವಾಗಿದೆ ಹಾಗೂ ಜ್ಞಾನವಾಪಿ ಹಿಂದುಗಳಿಗೆ ನೀಡಲು ನಿರಾಕರಿಸುವುದು ಎಂದರೆ ದೇಶವನ್ನು ೪೦೦ ವರ್ಷ ಹಿಂದೆ ತೆಗೆದುಕೊಂಡು ಹೋಗುವುದು, ಇದನ್ನು ಓವೈಸಿ ತಿಳಿದುಕೊಳ್ಳುವುದಿಲ್ಲ ! – ಸಂಪಾದಕರು)

ಸಂಪಾದಕೀಯ ನಿಲುವು

ಔರಂಗಜೇಬ್ ಮತ್ತು ಇತರ ಮುಸಲ್ಮಾನ ಆಕ್ರಮಣಕಾರರು ಕೆಲವು ಶತಕಗಳ ಹಿಂದೆ ಹಿಂದೂಗಳ ದೇವಸ್ಥಾನಗಳ ಮೇಲೆ ದಾಳಿ ನಡೆಸಿ ನೆಲೆಸಮ ಮಾಡಿ ಮಸೀದಿ ಕಟ್ಟಿದರು, ಈ ಇತಿಹಾಸ ಓವೈಸಿ ಏಕೆ ಹೇಳುವುದಿಲ್ಲ ಮತ್ತು ಅದನ್ನು ಏಕೆ ಒಪ್ಪಿಕೊಳ್ಳುವುದಿಲ್ಲ ?