ನುಸುಳುಕೋರ ರೋಹಿಂಗ್ಯಾಗಳಿಂದ ದೇಶಕ್ಕೆ ಅಪಾಯ ! – ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ

ನವ ದೆಹಲಿ – ರೋಹಿಂಗ್ಯಾ ಮುಸಲ್ಮಾನ್ ಅಸ್ಸಾಂನ ಗಡಿಯಿಂದ ಭಾರತದಲ್ಲಿ ನುಸುಳುತ್ತಿದ್ದರೆ ಅವರು ಅಲ್ಲಿ ವಾಸಿಸುವುದಿಲ್ಲ. ಆದ್ದರಿಂದ ಅಸ್ಸಾಂಗೆ ಅವರ ಅಪಾಯ ಇಲ್ಲದಿದ್ದರೂ ದೇಶಕ್ಕೆ ಅವರು ಅಪಾಯಕಾರಿ ಆಗಿದ್ದಾರೆ, ಎಂದು ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಇವರು ಹೇಳಿದರು.

ಮುಖ್ಯಮಂತ್ರಿ ಸರಮಾ ಮಾತು ಮುಂದುವರೆಸುತ್ತಾ, ರೋಹಿಂಗ್ಯಾ ನುಸುಳುಕೋರರು ಅಸ್ಸಾಂ ಮಾರ್ಗವಾಗಿ ದೆಹಲಿ ಮತ್ತು ಕಾಶ್ಮೀರಕ್ಕೆ ಹೋಗುತ್ತಾರೆ. ನುಸುಳಲು ಅವರಿಗೆ ತ್ರಿಪುರದಲ್ಲಿನ ದಲ್ಲಾಳಿ ಸಹಾಯ ಮಾಡುತ್ತಾರೆ ಕಳೆದ ಕೆಲವು ವರ್ಷಗಳಿಂದ ಇದು ಮುಂದುವರೆದಿದೆ. ಯಾರೋ ವಿದೇಶಿ ನಾಗರಿಕ ಪಾಸ್ಪೋರ್ಟ್ ಮತ್ತು ವಿಸಾ (ದೇಶದಲ್ಲಿ ಇರಲು ಅನುಮತಿ) ಇಲ್ಲದೆ ಭಾರತಕ್ಕೆ ಬರುತ್ತಿದ್ದರೆ ಅದು ಭಾರತದ ಸಾರ್ವಭೌಮತ್ವಕ್ಕೆ ಅಪಾಯವಾಗಿದೆ. ಭಾರತದಲ್ಲಿ ಕಾನೂನ ಬಾಹಿರವಾಗಿ ಪ್ರವೇಶ ಮಾಡುವವರು, ರೋಹಿಂಗ್ಯ ಮುಸಲ್ಮಾನರಿರಲಿ ಅಥವಾ ಹಿಂದುಗಳಾಗಿರಲಿ ನಾವು ಅವರಿಗೆ ಪ್ರೋತ್ಸಾಹ ನೀಡಲು ಸಾಧ್ಯವಿಲ್ಲ. ಪೊಲೀಸ ಮಹಾಸಂಚಾಲಕರಿಗೆ ನುಸುಳುವಿಕೆಯನ್ನು ತಡೆಯುವುದಕ್ಕಾಗಿ ಈ ಹಿಂದೆಯೇ ಕ್ರಮ ಕೈಗೊಳ್ಳಲು ಹೇಳಲಾಗಿದೆ. ಕರೀಮಗಂಜ ಜಿಲ್ಲೆಯ ಪೊಲೀಸ ಅಧಿಕಾರಿಗಳಿಗೆ ನುಸಳುಕೊರರನ್ನು ತಡೆಯಲು ಕಾವಲು ಹೆಚ್ಚಿಸಲು ಹೇಳಿದೆ ಎಂದು ಹೇಳಿದರು.