ನಕ್ಸಲೀಯರಿಗೆ ಗಡಚಿರೋಲಿ ಪೊಲೀಸರ ತಕ್ಕ ಪ್ರತ್ಯುತ್ತರ!
ಗಡಚಿರೋಲಿ – ನಕ್ಸಲ್ ಸಪ್ತಾಹದ ಹಿನ್ನಲೆಯಲ್ಲಿ ಗಡಚಿರೋಲಿ ಪೋಲೀಸರ ಒಂದು ತುಕಡಿಯು ಕುಖ್ಯಾತ ನಕ್ಸಲ ‘ಬಿಟ್ಲು’ ಸ್ಮಾರಕವನ್ನು ಧ್ವಂಸಗೊಳಿಸಿ ನಕ್ಸಲವಾದಿಗಳಿಗೆ ಪ್ರತ್ಯುತ್ತರ ನೀಡಿದೆ. ಈ ಸ್ಮಾರಕವನ್ನು ನಕ್ಸಲೀಯರು ನಿರ್ಮಿಸಿದ್ದರು. ಕೆಲ ತಿಂಗಳ ಹಿಂದೆ ಪೊಲೀಸರೊಂದಿಗೆ ನಡೆದ ಚಕಮಕಿಯಲ್ಲಿ ಬಿಟ್ಲು ಹತ್ಯೆಯಾಗಿದ್ದನು. ದಕ್ಷಿಣ ಗಡಚಿರೋಲಿಯಲ್ಲಿ ಅವನು ಆತಂಕ ಹೆಚ್ಚಿತ್ತು.
ಪ್ರತಿ ವರ್ಷ ಜುಲೈ 28 ರಿಂದ ಆಗಸ್ಟ್ 3 ರವರೆಗೆ ವಿವಿಧ ಕಾರಣಗಳಿಂದ ಪ್ರಾಣ ಕಳೆದುಕೊಂಡ ನಕ್ಸಲೀಯರ ಸ್ಮರಣೆಗಾಗಿ ನಕ್ಸಲೀಯರು ಎಲ್ಲೆಡೆ ‘ಶಹೀದ ಸಪ್ತಾಹ’ವನ್ನು ಆಚರಿಸುತ್ತಾರೆ. ಈ ಅವಧಿಯಲ್ಲಿ ಹಿಂಸಾತ್ಮಕ ಚಟುವಟಿಕೆಗಳನ್ನು ನಡೆಸುವುದು, ಸತ್ತ ನಕ್ಸಲೀಯರ ಸ್ಮರಣೆಗಾಗಿ ಶಹೀದ ಸ್ಮಾರಕಗಳ ನಿರ್ಮಾಣ, ಕರಪತ್ರಗಳ ಮೂಲಕ ಎಲ್ಲಾ ವ್ಯವಹಾರಗಳನ್ನು ಬಂದ್ ಮಾಡುವಂತೆ ನಾಗರಿಕರಲ್ಲಿ ಮನವಿ ಮಾಡಲಾಗುತ್ತದೆ. ನಕ್ಸಲೀಯರ ಕರೆಗೆ ಪೊಲೀಸರು ಸ್ಪಂದಿಸದೆ ಎಲ್ಲವನ್ನೂ ಸುಗಮವಾಗಿಡಲು ಪ್ರಯತ್ನಿಸುತ್ತಿದ್ದಾರೆ.
ಸಂಪಾದಕೀಯ ನಿಲುವುಪ್ರತಿ ಬಾರಿಯೂ ಇಂತಹ ಕಠಿಣ ಕ್ರಮ ಕೈಗೊಂಡರೆ ನಕ್ಸಲವಾದ ಅಂತ್ಯವಾಗುತ್ತದೆ ! |