ಭಾಜಪದ ಸಂಸದ ನರೇಶ ಬಂಸಲ ಅವರ ಬೇಡಿಕೆ !
ನವ ದೆಹಲಿ – ಭಾಜಪದ ರಾಜ್ಯಸಭಾ ಸಂಸದ ನರೇಶ ಬಂಸಲ ಅವರು ದೇಶದ ಹೆಸರನ್ನು ‘ಇಂಡಿಯಾ’ ಎಂಬುದನ್ನು ತೆಗೆದು ‘ಭಾರತ’ ಎಂದು ಇಡಬೇಕೆಂದು ಒತ್ತಾಯಿಸಿದ್ದಾರೆ.
ಸಾಂಸದ ಬಂಸಲ್ ಇವರು ಮಾತನಾಡಿ, ಈ ವರ್ಷ ಸ್ವಾತಂತ್ರ್ಯದ ಅಮೃತ ವರ್ಷ ಅಂದರೆ ದೇಶದ ಅಮೃತ ಕಾಲ ನಡೆಯುತ್ತಿದೆ. ಆದ್ದರಿಂದ ಸಂವಿಧಾನದ ೧ನೇ ಪರಿಚ್ಛೇದವನ್ನು ಸಂಶೋಧನೆ ಮಾಡಿ ದೇಶದ ಹೆಸರನ್ನು ‘ಭಾರತ’ ಎಂದು ಮಾತ್ರ ಇಡಬೇಕು. ಹಿಂದಿನ ಸ್ವಾತಂತ್ರ್ಯ ದಿನದಂದು ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪು ಕೋಟೆಯಲ್ಲಿ ಭಾಷಣ ಮಾಡುತ್ತಾ ಗುಲಾಮಗಿರಿಯ ಮನಸ್ಥಿತಿಯಿಂದ ಮುಕ್ತಗೊಳಿಸುವ ಬಗ್ಗೆ ಹೇಳಿದ್ದರು. ವಸಾಹತುಶಾಹಿಯ ಮನಸ್ಥಿತಿಯನ್ನು ಹೋಗಲಾಡಿಸುವುದು ಅವಶ್ಯಕವಾಗಿದೆ. ಅದಕ್ಕಾಗಿ ಭಾರತೀಯ ಮೌಲ್ಯಗಳು ಮತ್ತು ವಿಚಾರಗಳನ್ನು ಅಲ್ಲಿ ಅನ್ವಯಿಸುವುದು ಅವಶ್ಯಕವಾಗಿದೆ ಎಂದು ಹೇಳಿದರು.
(ಸೌಜನ್ಯ – Live Hindustan)
ಸಂಪಾದಕೀಯ ನಿಲುವುವಾಸ್ತವದಲ್ಲಿ ಅಂತಹ ಬೇಡಿಕೆಯನ್ನು ಮಾಡುವ ಪ್ರಮೇಯ ಬರಬಾರದು. ಭಾರತ ಸರಕಾರ ಕೂಡಲೇ ಇದನ್ನು ಬದಲಿಸಿ ಭಾರತೀಯ ಗುರುತನ್ನು ಕಾಪಾಡಬೇಕು ! |