ಶ್ರೀಲಂಕಾದಿಂದ ತಮಿಳರ ಪ್ರಶ್ನೆಯ ಕುರಿತು ಸರ್ವಪಕ್ಷದ ಸಭೆ !

ಕೊಲಂಬೋ (ಶ್ರೀಲಂಕಾ) – ಶ್ರೀಲಂಕಾದ ರಾಷ್ಟ್ರಪತಿ ರಾನಿಲ ವಿಕ್ರಮಸಿಂಘೆ ಇವರು ದೇಶದಲ್ಲಿನ ಅಲ್ಪಸಂಖ್ಯಾತ ತಮಿಳರ ಸಮಸ್ಯೆಗಳ ಕುರಿತು ಚರ್ಚೆ ನಡೆಸುವುದಕ್ಕಾಗಿ ಸರ್ವಪಕ್ಷ ಸಭೆ ಆಯೋಜಿಸಿದರು. ಅವರು ಎಲ್ಲಾ ಪಕ್ಷಗಳಿಗೆ ಇದರ ಸಂದರ್ಭದಲ್ಲಿನ ಚರ್ಚೆಯಲ್ಲಿ ಸಹಭಾಗಿಯಾಗಲು ಮತ್ತು ಇದರ ಬಗ್ಗೆ ಒಮ್ಮತ ನಿರ್ಮಾಣ ಮಾಡುವುದಕ್ಕೆ ಕರೆ ನೀಡಿದರು. ಕೆಲವು ದಿನಗಳ ಹಿಂದೆ ಭಾರತದ ಪ್ರವಾಸಕ್ಕೆ ಬಂದು ಹೋಗಿರುವ ರಾಷ್ಟ್ರಪತಿ ವಿಕ್ರಮಸಿಂಘೆ ಇವರು ಪ್ರಧಾನಮಂತ್ರಿ ನರೇಂದ್ರ ಮೋದಿ ಇವರ ಜೊತೆ ಶ್ರೀಲಂಕಾದಲ್ಲಿ ವಾಸಿಸುವ ತಮಿಳರ ಜೊತೆಗಿನ ಸಂಬಂಧ ಸುಧಾರಣೆಯ ಬಗ್ಗೆ ಚರ್ಚೆ ನಡೆಸಿದ್ದರು.

ಇದರ ಬಗ್ಗೆ ಮಾತನಾಡುವಾಗ ಶ್ರೀಲಂಕಾದ ವಿರೋಧಿ ಪಕ್ಷದ ನಾಯಕ ಸಾಜಿಥ ಪ್ರೇಮದಾಸ ಇವರು, ನಮಗೆ ಈ ಸಭೆಯಲ್ಲಿ ಕಾರ್ಯ ಸೂಚಿಯ ಬಗ್ಗೆ ಮಾಹಿತಿ ನೀಡಲಾಗಿಲ್ಲ; ಆದರೆ ನಾವು ಜನರಿಗಾಗಿ ಇದರಲ್ಲಿ ಸಹಭಾಗಿ ಆಗುವೆವು. ಈ ಸಭೆ ಏನಾದರೂ ಪ್ರತ್ಯಕ್ಷ ಪ್ರಯತ್ನ ಮಾಡುವ ಬದಲು ಕೇವಲ ರಾಜಕೀಯ ನಾಟಕವಾದರೆ, ನಾವು ಇದರಿಂದ ಹೊರಬರುವೆವು. ಕೆಲವು ರಾಜಕೀಯ ಪಕ್ಷಗಳು ಮಾತ್ರ ಸಭೆಯಲ್ಲಿ ಸಹಭಾಗಿ ಆಗಲು ನಿರಾಕರಿಸಿದೆ ಎಂದು ಹೇಳಿದರು.