‘ಉಡುಪಿಯ ಕಾಲೇಜಿನ ಘಟನೆ ಬಹಳ ಚಿಕ್ಕ ವಿಷಯ ! – ಗೃಹ ಸಚಿವ ಡಾ. ಜಿ ಪರಮೇಶ್ವರ

ಅಶ್ಲೀಲ ವಿಡಿಯೋದ ಪ್ರಕರಣದಲ್ಲಿ ೩ ಮುಸಲ್ಮಾನ ವಿದ್ಯಾರ್ಥಿನಿಯರ ವಿರುದ್ಧ ದೂರು ದಾಖಲು !

ಉಡುಪಿ – ಇಲ್ಲಿಯ ‘ನೇತ್ರ ಜ್ಯೋತಿ’ ಈ ಖಾಸಗಿ ಕಾಲೇಜಿನ ಶೌಚಾಲಯದಲ್ಲಿ ಹಿಡನ್ ಕ್ಯಾಮೆರಾ ಅಳವಡಿಸಿ ವಿದ್ಯಾರ್ಥಿನಿಯರ ಅಶ್ಲೀಲ ವಿಡಿಯೋ ತಯಾರಿಸಿದ ಪ್ರಕರಣದಲ್ಲಿ ಪೊಲೀಸರು ಅಲೀಮತುಲ್ ಶೈಫಾ, ಶಬಾನಾಜ್ ಮತ್ತು ಆಲೀಯ ಈ ಮೂರು ವಿದ್ಯಾರ್ಥಿನಿಸಹಿತ ಕಾಲೇಜಿನ ಆಡಳಿತದ ವಿರುದ್ಧ ದೂರು ದಾಖಲಿಸಿದೆ. ಈ ವಿದ್ಯಾರ್ಥಿನಿಯರು ಹಿಂದೂ ವಿದ್ಯಾರ್ಥಿನಿಯರ ವಿಡಿಯೋ ತಯಾರಿಸಿ ಅದನ್ನು ಅವರ ಮುಸಲ್ಮಾನ ಸ್ನೇಹಿತರಿಗೆ ಕಳುಹಿಸುತ್ತಿದ್ದರು.

ಈ ಪ್ರಕರಣದ ಹೆಚ್ಚಿನ ಮಾಹಿತಿ ಪಡೆಯುವುದಕ್ಕಾಗಿ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯ ಖುಷಬು ಸುಂದರ ಇವರು ಅಲ್ಲಿ ತಲುಪಿದ್ದರು. ಇನ್ನೊಂದು ಕಡೆ ರಾಜ್ಯದ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು, ಇದು ಒಂದು ಸಣ್ಣ ಘಟನೆಯಾಗಿದೆ ಮತ್ತು ಅದಕ್ಕೆ ರಾಜಕೀಯ ಬಣ್ಣ ಬಳಿಯುವ ಅವಶ್ಯಕತೆ ಇಲ್ಲ. ಕಾಲೇಜಿನಲ್ಲಿ ಇಂತಹ ಘಟನೆಗಳು ಆಗುತ್ತಿರುತ್ತವೆ. ಭಾಜಪ ಇಂತಹ ಸಣ್ಣ ಸಣ್ಣ ಘಟನೆಗಳಿಂದ ರಾಜಕಾರಣ ಮಾಡುವುದು ಬಿಡಬೇಕು’, ಎಂದು ಹೇಳಿಕೆ ನೀಡಿದ್ದಾರೆ.

(ಸೌಜನ್ಯ – News18 Kannada)

ಉಡುಪಿ ಎರಡನೆಯ ‘ಅಜ್ಮೆರ್ ‘ಆಗಬಹುದು ! – ಸಾಮಾಜಿಕ ಕಾರ್ಯಕರ್ತೆ ರಶ್ಮಿ ಸಾವಂತ ಇವರ ಆತಂಕ

ಈ ಘಟನೆಯ ಬಗ್ಗೆ ಸಾಮಾಜಿಕ ಕಾರ್ಯಕರ್ತೆ ರಶ್ಮಿ ಸಮಂತ ಇವರು ಟ್ವೀಟ್ ಮಾಡಿ, ‘ಈ ಪ್ರಕರಣ ಮುಚ್ಚಿಹಾಕುವ ಪ್ರಯತ್ನ ನಡೆಯುತ್ತಿದೆ,’ ಎಂದು ಆರೋಪಿಸಿದ್ದಾರೆ. ಇದರ ಜೊತೆಗೆ ಸಾಮಂತ ಇವರು, ಈ ವಿಡಿಯೋದಲ್ಲಿ ಕಾಣಿಸಿರುವ ಸಂತ್ರಸ್ತೆ ವಿದ್ಯಾರ್ಥಿನಿ ಖಿನ್ನತೆ ಮತ್ತು ನಿರಾಶಗಿರುವುದು ಗಮನಕ್ಕೆ ಬರುತ್ತದೆ. ಅವರು ಆತ್ಮಹತ್ಯೆಯ ಯೋಚನೆ ಕೂಡ ಮಾಡಬಹುದು. ಹೀಗಿರುವಾಗ ಈ ಪ್ರಕರಣದ ಕಡೆಗೆ ಗಾಂಭೀರ್ಯತೆಯಿಂದ ನೋಡಲಾಗುತ್ತಿಲ್ಲ ಮತ್ತು ಅದನ್ನು ಯಾರೂ ಖಂಡಿಸುತ್ತಿಲ್ಲ ಎಂದು ಹೇಳಿದರು. ಸಾಮಂತ ಇವರು ಈ ಘಟನೆ ೧೯೯೨ ಅಜ್ಮೆರಿನಲ್ಲಿ ನಡೆದಿರುವ ಪ್ರಕರಣದ ಜೊತೆಗೆ ಹೋಲಿಸಿದ್ದಾರೆ. ಅಲ್ಲಿ ಕೂಡ ಕಾಲೇಜಿನ ನೂರಾರು ಹಿಂದೂ ವಿದ್ಯಾರ್ಥಿನಿಯರ ಅಶ್ಲೀಲ ವಿಡಿಯೋ ತೆಗೆದು ಅದರ ಮೂಲಕ ಅವರನ್ನು ಬ್ಲಾಕ್ ಮೇಲ್ ಮಾಡುತ್ತಾ ಮುಸಲ್ಮಾನರು ಅವರ ಲೈಂಗಿಕ ಶೋಷಣೆ ಮಾಡಿದ್ದರು. ಇದರಿಂದ ಅನೇಕ ಯುವತಿಯರು ಆತ್ಮಹತ್ಯೆ ಮಾಡಿಕೊಂಡರು. ‘ನನಗೆ ಈ ವಿಚಾರ ಮಾಡಿದರೆ ಆತಂಕವಾಗುತ್ತಿದೆ, ಉಡುಪಿ ಎರಡನೆಯ ಅಜಮೆರ ಆಗಬಹುದು, ಎಂದು ಸಾಮಂತ ಇವರು ಹೇಳಿದರು. ಟ್ವಿಟ್ ನಿಂದ ಕರ್ನಾಟಕ ಪೊಲೀಸರು ರಶ್ಮಿ ಸಮಂತ ಇವರ ಮನೆಗೆ ಹೋಗಿ ಅವರ ವಿಚಾರಣೆ ನಡೆಸಿದರು. ಈ ಸಮಯದಲ್ಲಿ ಅವರು ಮನೆಯಲ್ಲಿ ಇರಲಿಲ್ಲ. ಆದ್ದರಿಂದ ಪೊಲೀಸರು ಅವರ ಪೋಷಕರ ವಿಚಾರಣೆ ನಡೆಸಿದರು, ಎಂದು ಸಾಮಂತ ಇವರ ನ್ಯಾಯವಾದಿ ಆದಿತ್ಯ ಶ್ರೀನಿವಾಸನ್ ಇವರು ಮಾಹಿತಿ ನೀಡಿದರು.