ಮುಂದಿನ 3 ದಿನ ದೇಶದ ೨೨ ರಾಜ್ಯಗಳಲ್ಲಿ ಧಾರಾಕಾರ ಮಳೆಯ ಸಾಧ್ಯತೆ !

ನವ ದೆಹಲಿ – ದೇಶದ ಕೆಲವು ರಾಜ್ಯಗಳಲ್ಲಿ ಕಳೆದ ಕೆಲವು ವಾರದಿಂದಲೇ ಸುರಿಯುತ್ತಿರುವ ಮಳೆ ಇನ್ನೂ ಮುಂದುವರೆದಿದೆ. ದೆಹಲಿಯಲ್ಲಿ ಧಾರಾಕಾರ ಮಳೆಯಿಂದ ಮಂಡಿ ಹೌಸ್ ನಿಂದ ರಿಂಗ್ ರೋಡ ವರೆಗೆ ಮತ್ತು ಉತ್ತರಪ್ರದೇಶದಲ್ಲಿನ ನೋಯ್ಡಾದ ಅನೇಕ ಭಾಗದಲ್ಲಿನ ರಸ್ತೆಗಳು ಜಲವೃತವಾಗಿವೆ. ತೆಲಂಗಾಣ, ಕರ್ನಾಟಕ ಮತ್ತು ಆಂಧ್ರಪ್ರದೇಶ ಈ ರಾಜ್ಯಗಳಲ್ಲಿ ಮಳೆಯಿಂದ ಅನಿರೀಕ್ಷಿತವಾಗಿ ನೆರೆಯ ಸ್ಥಿತಿ ನಿರ್ಮಾಣವಾಗಿದೆ. ತೆಲಂಗಾಣದ ಮಹಬೂಬ್ ನಗರದಲ್ಲಿ ೨ ಅಪ್ರಾಪ್ತ ಹುಡುಗಿಯರು ಕಾಲುವೆಯಲ್ಲಿ ಕೊಚ್ಚಿ ಹೋಗಿದ್ದಾರೆ. ಮೇಲಿನ ಎಲ್ಲ ರಾಜ್ಯಗಳಲ್ಲಿ ಅಪಾಯದ ಕ್ಷೇತ್ರಗಳಲ್ಲಿನ ಎಲ್ಲಾ ಶಾಲೆಗಳು ಮತ್ತು ಮಹಾವಿದ್ಯಾಲಯಗಳಿಗೆ ಜುಲೈ ೨೬ ಮತ್ತು ೨೭ ರಂದು ರಜೆ ನೀಡಲಾಗಿದೆ. ಮುಂದಿನ ೩ ದಿನ ಉತ್ತರಾಖಂಡ, ಹಿಮಾಚಲ ಪ್ರದೇಶ, ಗುಜರಾತ, ಮಹಾರಾಷ್ಟ್ರ, ತೆಲಂಗಾಣ, ಗೋವಾ, ಕರ್ನಾಟಕ, ಆಂಧ್ರ ಪ್ರದೇಶ ಸಹಿತ ೨೨ ಕ್ಕಿಂತಲೂ ಹೆಚ್ಚಿನ ರಾಜ್ಯಗಳಲ್ಲಿ ಧಾರಾಕಾರ ಮಳೆ ಸುರಿಯುವ ಸಾಧ್ಯತೆ ಇದೆ.

ದಕ್ಷಿಣ ಮತ್ತು ಓಡಿಸಾದ ಕರಾವಳಿಯ ಅನೇಕ ಭಾಗಗಳಲ್ಲಿ ಧಾರಾಕಾರದಿಂದ ಅತಿಧಾರಕಾರ ಮಳೆಯಾಗುವ ಸಾಧ್ಯತೆ ಇದೆ. ಮೀನುಗಾರರಿಗೆ ಜುಲೈ ೨೭ರ ವರೆಗೆ ಸಮುದ್ರದಲ್ಲಿ ಹೋಗದಿರಲು ಸೂಚನೆ ನೀಡಲಾಗಿದೆ.