ಮಣಿಪುರದಲ್ಲಿ ಮಹಿಳೆಗೆ ಕಿರುಕುಳ ನೀಡಿದ ಸೈನಿಕ ಅಮಾನತು

ಇಂಫಾಳ (ಮಣಿಪುರ) – ಇಲ್ಲಿನ ಕಿರಾಣಿ ಅಂಗಡಿಯೊಂದರಲ್ಲಿ ಮಹಿಳೆಗೆ ಕಿರುಕುಳ ನೀಡಿದ ಗಡಿ ಭದ್ರತಾ ಪಡೆಯ ಸೈನಿಕನನ್ನು ವಜಾಗೊಳಿಸಲಾಗಿದೆ. ಜುಲೈ ೨೦ ರಂದು ನಡೆದ ಈ ಘಟನೆಯ ಸಿಸಿಟಿವಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿತ್ತು. ಬಳಿಕ ಈ ಸೈನಿಕನ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಸತೀಶ ಪ್ರಸಾದ ಈತನ ಹೆಸರಾಗಿದ್ದು ಆತ ಗಡಿ ಭದ್ರತಾ ಪಡೆಯಲ್ಲಿ ಕಾನ್ ಸ್ಟೇಬಲ್ ಆಗಿ ಕೆಲಸ ಮಾಡುತ್ತಿದ್ದ. ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

(ಸೌಜನ್ಯ : Oneindia News)

ಸಂಪಾದಕರ ನಿಲುವು

* ಇಂತಹ ಕಾಮುಕರಿಗೆ ಕಠಿಣ ಶಿಕ್ಷೆಯಾಗಬೇಕು !