‘ಗಜಮುಖನಾದ ಭಗವಾನ್ ಶ್ರೀ ಗಣೇಶ ಕೇವಲ ದಂತಕಥೆ !’ (ಅಂತೆ) – ಕೇರಳ ವಿಧಾನಸಭೆಯ ಸಭಾಪತಿ ಎ.ಎನ್. ಶಮಸೀರ್

ಕೇರಳ ವಿಧಾನಸಭೆಯ ಮತಾಂಧ ಸಭಾಪತಿ ಎ.ಎನ್. ಶಮಸೀರ್ ಇವರ ವಿಷಕಾರಿ ಹೇಳಿಕೆ

ತಿರುವನಂತಪುರಂ – ಕೇರಳ ವಿಧಾನಸಭೆಯ ಸಭಾಪತಿ ಎ.ಎನ್.ಶಮಸೀರ ಇವರು ಒಂದು ಕಾರ್ಯಕ್ರಮದಲ್ಲಿ ‘ಗಜಮುಖನಾದ ಭಗವಾನ್ ಶ್ರೀ ಗಣೇಶ ಕೇವಲ ಒಂದು ದಂತಕಥೆಯಾಗಿದೆ’ ಎಂದು ಹೇಳಿಕೆ ನೀಡಿದ್ದರು. ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಕ್ಕಾಗಿ ಭಾಜಪ ಮತ್ತು ವಿಶ್ವ ಹಿಂದೂ ಪರಿಷತ್‌ ಇವರು ಅವರ ವಿರುದ್ಧ ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ. ಶಮಸೀರ್ ಅವರನ್ನು ವಿಧಾನಸಭೆ ಸ್ಥಾನದಿಂದ ವಜಾಗೊಳಿಸುವಂತೆ ಆಗ್ರಹಿಸಿ ರಾಜ್ಯಪಾಲರು ಹಾಗೂ ರಾಷ್ಟ್ರಪತಿಗಳಿಗೆ ಅರ್ಜಿಯನ್ನು ಸಲ್ಲಿಸಲಾಗುವುದು ಎಂದು ವಿಶ್ವ ಹಿಂದೂ ಪರಿಷತ್ ಹೇಳಿದೆ. ‘ವೈಚಾರಿಕ ಚಿಂತನೆಯನ್ನು ಉತ್ತೇಜಿಸುವ ಹೆಸರಿನಲ್ಲಿ ಸಭಾಪತಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಅವಮಾನ ಮಾಡಿದ್ದಾರೆ’, ಎಂದು ಭಾರತೀಯ ಜನತಾ ಪಕ್ಷದ ತಿರುವನಂತಪುರಂ ಜಿಲ್ಲಾ ಉಪಾಧ್ಯಕ್ಷ ಆರ್.ಎಸ್‌. ರಾಜೀವ್ ಇವರು ಹೇಳಿದರು.

‘ಎರ್ನಾಕುಲಮ್‌ ಜಿಲ್ಲೆಯ ಸರಕಾರಿ ಹಿರಿಯ ಮಾಧ್ಯಮಿಕ ಶಾಲೆಯೊಂದು ಆಯೋಜಿಸಿದ್ದ ‘ವಿದ್ಯಾ ಜ್ಯೋತಿ’ ಕಾರ್ಯಕ್ರಮದಲ್ಲಿ ಶಮಸೀರ್ ಅವರು ಹಿಂದೂ ವಿರೋಧಿ ಹೇಳಿಕೆ ನೀಡಿದ್ದಾರೆ. ಶಮಸೀರ್ ಇವರು ಇಸ್ಲಾಂ ಬೆಂಬಲಿಸುವ ವ್ಯಕ್ತಿಯಾಗಿದ್ದು ಅವರು ಉದ್ದೇಶಪೂರ್ವಕವಾಗಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಅವಮಾನ ಮಾಡಿದ್ದಾರೆ. ಅವರು ಧರ್ಮದ್ವೇಷಿ ಹೇಳಿಕೆ ನೀಡುವ ಮೂಲಕ ವಿವಿಧ ಧರ್ಮಗಳ ನಡುವೆ ವೈಷಮ್ಯ ಮೂಡಿಸಲು ಯತ್ನಿಸಿದ್ದಾರೆ’, ಎಂದು ದೂರಿನಲ್ಲಿ ತಿಳಿಸಲಾಗಿದೆ.

ಸಂಪಾದಕೀಯ ನಿಲುವು

ಉನ್ನತ ಹುದ್ದೆಯಲ್ಲಿದ್ದುಕೊಂಡು ಹಿಂದೂಗಳ ದೇವತೆಗಳನ್ನು ಅವಮಾನಿಸಿದ ಶಮಸೀರ್ ಅವರನ್ನು ಜೈಲಿಗೆ ಹಾಕಿ !

ಇಸ್ಲಾಮಿಕ್ ಶ್ರದ್ಧಾಸ್ಥಾನಗಳ ಬಗ್ಗೆ ಹಿಂದೂಗಳು ಹೀಗೆ ಹೇಳಿದ್ದರೆ, ಮತಾಂಧರು ಅವನ ಶಿರಚ್ಛೇದಕ್ಕೆ ಆಗ್ರಹಿಸುತ್ತಿದ್ದರು !

ಭಾರತದ ಸಂವಿಧಾನವು ಜಾತ್ಯತೀತವಾಗಿದೆ. ಹೀಗಿರುವಾಗ ಸಂವಿಧಾನ ನೀಡಿರುವ ಮಹತ್ವದ ಹುದ್ದೆಯಲ್ಲಿದ್ದು ಹಿಂದೂ ಸಮಾಜದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಹಕ್ಕನ್ನು ಶಮಸೀರ್ ಅವರಿಗೆ ಯಾರು ಕೊಟ್ಟರು ? ಜಾತ್ಯತೀತವಾದಿಗಳು ಇದರ ಬಗ್ಗೆ ಏನನ್ನೂ ಹೇಳುವುದಿಲ್ಲ ಎಂಬುದನ್ನು ಗಮನಿಸಿ !