ಅಂಜುಗೆ ಹುಚ್ಚು ಹಿಡಿದಿದೆ : ತಂದೆಯ ದಾವೆ !

ಜೈಪುರ (ರಾಜಸ್ಥಾನ) – ರಾಜಸ್ಥಾನದಲ್ಲಿನ ಭಿವಾಡಿಯ ನಿವಾಸಿ ಅಂಜು ಎಂಬ ವಿವಾಹಿತ ಕ್ರೈಸ್ತ ಮಹಿಳೆ ಪಾಕಿಸ್ತಾನದಲ್ಲಿರುವ ತನ್ನ ಪ್ರಿಯಕರನ ಬಳಿ ಹೋಗಿರುವುದು ಬೆಳಕಿಗೆ ಬಂದ ನಂತರ ಈಗ ಆಕೆ ಅಲ್ಲಿಯ ಪ್ರಿಯಕರ ನಸುರುದ್ದೀನ್ ನ ಜೊತೆಗೆ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡಿದ್ದಾಳೆ. ಈ ಮೊದಲು ಆಕೆ ಇಸ್ಲಾಂ ಧರ್ಮ ಕೂಡ ಸ್ವೀಕರಿಸಿದ್ದಾಳೆ. ಇದರ ಬಗ್ಗೆ ಆಕೆ ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿ ನೀಡಿದ್ದಾಳೆ. ಅಂಜು ‘ಜೈಪುರಕ್ಕೆ ಹೋಗುತ್ತೇನೆ’ ಎಂದು ಪತಿಗೆ ಹೇಳಿ ಪಾಕಿಸ್ತಾನದ ಖೈಬರ್ ಪಖ್ಟನಖ್ವಾಗೆ ಹೋಗಿದ್ದಳು. ಇದರ ಬಗ್ಗೆ ಅಂಜು ತಂದೆ ಗಯಾ ಪ್ರಸಾದ್ ಥಾಮಸ್ ಇವರು, ನನ್ನ ಮಗಳು ಅಂಜು ಮಾನಸಿಕವಾಗಿ ಸ್ಥಿರವಾಗಿಲ್ಲ. ಆಕೆ ಹುಚ್ಚಿಯಾಗಿದ್ದಾಳೆ ಎಂದು ಹೇಳಿದರು.
೧. ಥಾಮಸ್ ಮಾತು ಮುಂದುವರೆಸುತ್ತಾ, ಆಕೆಯ ವಿವಾಹವಾದ ನಂತರ ಅಂದರೆ ಕಳೆದ ೨೦ ವರ್ಷಗಳಿಂದ ನಮ್ಮ ಜೊತೆ ಹೆಚ್ಚಿಗೆ ಸಂಪರ್ಕದಲ್ಲಿ ಇಲ್ಲ. ವಿವಾಹದ ನಂತರ ಆಕೆ ಭಿವಾಡಿಯಲ್ಲಿ ಆಕೆಯ ಪತಿಯ ಜೊತೆ ವಾಸಿಸುತ್ತಿದ್ದಳು. ಹಾಗೂ ನಾನು ಮಧ್ಯಪ್ರದೇಶದಲ್ಲಿನ ಒಂದು ಗ್ರಾಮದಲ್ಲಿ ವಾಸಿಸುತ್ತೇನೆ. ನನ್ನ ಅಳಿಯ ಅರವಿಂದ ಇವನು ಒಬ್ಬ ಸಾಮಾನ್ಯ ಮನುಷ್ಯನಾಗಿದ್ದಾನೆ. ಅಂಜು ಮಾತ್ರ ಹುಚ್ಚಿಯಾಗಿದ್ದಾಳೆ. ಆಕೆಗೆ ಪಾಕಿಸ್ತಾನದಲ್ಲಿನ ಸ್ನೇಹಿತನ ಜೊತೆಗೆ ಸಂಬಂಧ ಇರಬಹುದು ಎಂದು ನನಗೆ ಅನಿಸುತ್ತಿಲ್ಲ. ಆಕೆ ಕೇವಲ ಹುಚ್ಚುತನದಿಂದ ಅಥವಾ ಮನಸ್ಸಿಗೆ ಬಂದಿದೆ ಎಂದು ಅವನ ಭೇಟಿಗಾಗಿ ಹೋಗಿರಬಹುದು, ಇಷ್ಟು ನಾನು ದೃಢವಾಗಿ ಹೇಳಬಹುದು.
೨. ಇದರ ಬಗ್ಗೆ ಸಹಾಯಕ ಪೊಲೀಸ್ ಅಧಿಕಾರಿ ಸುಜಿತ ಶಂಕರ ಇವರು, ಅಂಜು ಎಂಬ ಮಹಿಳೆ ಪಾಕಿಸ್ತಾನಕ್ಕೆ ಹೋಗಿರುವುದು ನಮಗೆ ವಾರ್ತೆಯಿಂದ ತಿಳಿದಿದೆ. ಪಾಕಿಸ್ತಾನದಲ್ಲಿ ಆಕೆ ಅವಳ ಪ್ರಿಯಕರನ ಬಳಿ ಹೋಗಿದ್ದಾಳೆ. ಅವನು ಫೇಸ್ಬುಕ, ವಾಟ್ಸಾಪ್ ಕಾಲಿಂಗ್’ ಮೂಲಕ ಆಕೆಯ ಸಂಪರ್ಕದಲ್ಲಿ ಇದ್ದನು. ೨೦೨೦ ರಲ್ಲಿ ಅಂಜು ವೀಸಾಗಾಗಿ ಅರ್ಜಿ ಸಲ್ಲಿಸಿದ್ದಳು. ಆಕೆ ಪಾಕಿಸ್ತಾನಕ್ಕೆ ಹೇಗೆ ಹೋದಳು ? ಇದು ನಮಗೆ ಇನ್ನು ಅರ್ಥವಾಗಿಲ್ಲ. ಇಲ್ಲಿಯವರೆಗೆ ಇದರ ಬಗ್ಗೆ ನಮಗೆ ಯಾವುದೇ ದೂರು ಬಂದಿಲ್ಲ. ನಾವು ನಮ್ಮ ರೀತಿಯಲ್ಲಿ ವಿಚಾರಣೆ ನಡೆಸುತ್ತಿದ್ದೇವೆ ಎಂದು ಹೇಳಿದರು.
A woman from #Rajasthan, Anju, who crossed the border to meet his Facebook friend in #Pakistan legally, married him on 25 July after converting to Islamhttps://t.co/orszAXCjAX
— News18.com (@news18dotcom) July 25, 2023
ನೈಸರ್ಗಿಕ ವಿಕೋಪದಿಂದ ೧ ಸಾವಿರ ಕೋಟಿ ರೂಪಾಯಿ ಹಾನಿ : Himachal Pradesh Natural Disasters
ಮೊಬೈಲ್ ಫೋನ್ ಪೋಷಕರ ಜಾಗವನ್ನು ಆಕ್ರಮಿಸಿಕೊಳ್ಳುತ್ತಿರುವುದು ಕಳವಳಕಾರಿ ! : Supreme Court on Mobile phone
ಸೋನಮ್ ವಾಂಗ್ಚುಕ್ ಅವರು ಉಪವಾಸ ಮುಕ್ತಾಯ !
ಶಿಕ್ಷಣ ಸಚಿವರ ಸ್ಥಳಾಂತರ: ಹೊಸ ಕಾನೂನು ಸಹ ರೂಪಿಸಲಾಗುವುದು! – ಪ್ರಧಾನಿ ನರೇಂದ್ರ ಮೋದಿ
ಖೋಪೋಲಿಯ ಶ್ರೀ ಭಗವಾನ ವೀರೇಶ್ವರ ದೇವಸ್ಥಾನದಲ್ಲಿ ಕಳ್ಳತನ ಮಾಡಿದ ನಾಲ್ವರ ಬಂಧನ!
ಅಸ್ಸಾಂ: ನೆರೆಗೆ ೪೧ ಜನರ ಸಾವು !