ಕೊಲಂಬೋ – ಶ್ರೀಲಂಕಾದ ನೌಕಾದಳವು ಅವರ ಸಮುದ್ರ ಕ್ಷೇತ್ರದಲ್ಲಿ ಕಾನೂನ ಬಾಹಿರವಾಗಿ ಪ್ರವೇಶಿಸಿ ಮೀನುಗಾರಿಕೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ೯ ಭಾರತೀಯ ಮೀನುಗಾರರನ್ನು ಬಂಧಿಸಿದೆ. ಈ ಸಮಯದಲ್ಲಿ ಶ್ರೀಲಂಕಾದ ನೌಕಾದಳವು ಈ ಮೀನುಗಾರರ ಎರಡು ನೌಕೆಗಳನ್ನು ವಶಕ್ಕೆ ಪಡೆದಿದೆ. ಈ ಎಲ್ಲಾ ಭಾರತೀಯ ಮೀನುಗಾರರು ತಮಿಳುನಾಡಿನವರಾಗಿದ್ದಾರೆ. ಶ್ರೀಲಂಕಾದ ನೌಕಾದಳವು ನಡೆಸಿದ ಒಂದು ವಿಶೇಷ ಅಭಿಯಾನದ ಅಡಿಯಲ್ಲಿ ಭಾರತೀಯ ಮೀನುಗಾರರನ್ನು ಬಂಧಿಸಿದೆ, ಎಂದು ಹೇಳಲಾಗುತ್ತಿದೆ. ಈ ತಿಂಗಳಲ್ಲಿ ಶ್ರೀಲಂಕಾದ ನೌಕಾದಳದಿಂದ ಭಾರತೀಯ ಮೀನುಗಾರರನ್ನು ಬಂಧಿಸಿರುವುದು ಇದು ಎರಡನೆಯ ಘಟನೆಯಾಗಿದೆ. ಜುಲೈ ೯ ರಂದು ಕಾನೂನ ಬಾಹಿರವಾಗಿ ಶ್ರೀಲಂಕಾದ ಸಮುದ್ರ ಕ್ಷೆತ್ರ ಪ್ರವೇಶ ಮಾಡಿರುವ ಪ್ರಕರಣದಲ್ಲಿ ಶ್ರೀಲಂಕಾದ ನೌಕಾದಳವು ೧೫ ಮೀನುಗಾರರನ್ನು ಬಂಧಿಸಿತ್ತು. ‘ಭಾರತೀಯ ಮೀನುಗಾರರಿಂದ ಅಂತರಾಷ್ಟ್ರೀಯ ಸಮುದ್ರ ಗಡಿಯ ಉಲ್ಲಂಘನೆ ನಡೆಯುತ್ತದೆ’, ಎಂದು ಶ್ರೀಲಂಕಾದ ನೌಕಾದಳದಿಂದ ಆಗಾಗ ಹೇಳಲಾಗುತ್ತದೆ. ಇದರ ಬಗ್ಗೆ ಭಾರತ ಮತ್ತು ಶ್ರೀಲಂಕಾದ ನಡುವೆ ಉನ್ನತಮಟ್ಟದ ಸಭೆ ಆಯೋಜಿಸಲಾಗುತ್ತಿದೆ; ಆದರೆ ಈ ಸಮಸ್ಯೆ ಇಲ್ಲಿಯವರೆಗೆ ಪರಿಹರಿಸಲಾಗಿಲ್ಲ. (ಈ ಸಮಸ್ಯೆ ಪರಿಹಾರವಾಗದೆ ಇರುವ ಕಾರಣ ಏನು? ಹಾಗೂ ಭಾರತೀಯ ಮೀನುಗಾರರು ಅಂತರಾಷ್ಟ್ರೀಯ ಸಮುದ್ರ ಗಡಿಯನ್ನು ನಿಶ್ಚಿತಗೊಳಿಸುವ ಹಿಂದೆ ಏನು ಅಡಚಣೆ ಇದೆ ? ಇದು ಭಾರತೀಯ ಜನರಿಗೆ ತಿಳಿಯಬೇಕು ! – ಸಂಪಾದಕರು)