22 ವರ್ಷಗಳ ಹಿಂದಿನ ಮಾಜಿ ಸೇನಾಧಿಕಾರಿಗಳ ಅವಮಾನಿಸಿದ ಪ್ರಕರಣ
ನವದೆಹಲಿ – `ತೆಹಲ್ಕಾ’ ದಿನಪತ್ರಿಕೆಯ ಮುಖ್ಯ ಸಂಪಾದಕ ತರುಣ ತೇಜಪಾಲನನ್ನು ಅವಮಾನ ಮಾಡಿದ ಪ್ರಕರಣದಲ್ಲಿ ದೆಹಲಿ ಉಚ್ಚ ನ್ಯಾಯಾಲಯ ದೋಷಿಯೆಂದು ನಿರ್ಧರಿಸಿ 2 ಕೋಟಿ ರೂಪಾಯಿಗಳ ದಂಡವನ್ನು ವಿಧಿಸಿದೆ. ನಿವೃತ್ತ ಮೇಜರ ಜನರಲ್ ಎಂ.ಎಂ. ಅಹ್ಲುವಾಲಿಯಾ ಅವರ ಅರ್ಜಿಯ ಕುರಿತು ತೀರ್ಪನ್ನು ನೀಡಲಾಗಿದೆ. ಈ ಅರ್ಜಿಯನ್ನು 2002 ರಲ್ಲಿ ದಾಖಲಿಸಲಾಗಿತ್ತು. ಮಾರ್ಚ 2001 ರಲ್ಲಿ ದಿನಪತ್ರಿಕೆಯಲ್ಲಿ ಒಂದು ಸುದ್ಧಿಯನ್ನು ಪ್ರಕಟಿಸಲಾಗಿತ್ತು. ಅದರಲ್ಲಿ ಸೇನೆಯ ಒಂದು ಭ್ರಷ್ಟಾಚಾರದಲ್ಲಿ ಮೇಜರ ಜನರಲ್ ಅಹ್ಲುವಾಲಿಯಾ ಮಧ್ಯವರ್ತಿಯೆಂದು ಹೇಳಲಾಗಿತ್ತು. ಅದಕ್ಕೆ ಅಹ್ಲುವಾಲಿಯಾ ಇವರು ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿ, `ತೆಹಲ್ಕಾ’ ಕ್ಷಮೆಯಾಚಿಸಬೇಕೆಂದು ಹೇಳಿದ್ದರು. ಅದಕ್ಕೆ ನ್ಯಾಯಾಲಯ ಈ ಪ್ರಕರಣಕ್ಕೆ 22 ವರ್ಷಗಳಾಗಿವೆ. ಈ ಕಾಲಾವಧಿಯಲ್ಲಿ ಅಹ್ಲುವಾಲಿಯಾ ಬಹಳಷ್ಟು ಸಹಿಸಿಕೊಂಡಿದ್ದಾರೆ. ಆದ್ದರಿಂದ ಕೇವಲ ಕ್ಷಮೆ ಕೇಳುವುದರಿಂದ ಯಾವುದೇ ಪ್ರಯೋಜನವಿಲ್ಲ. ಒಬ್ಬ ಪ್ರಾಮಾಣಿಕ ಸೇನಾಧಿಕಾರಿಯ ಪ್ರತಿಷ್ಠೆಗೆ ಕುಂದು ತರುವುದಕ್ಕಿಂತ ಹೆಚ್ಚಿನ ನಾಚಿಕೆಗೇಡಿನ ಘಟನೆ ಮತ್ತೊಂದಿಲ್ಲವೆಂದು ಹೇಳಿದೆ.
Tehelka, journalist Tarun Tejpal ordered to pay Rs 2 crore as damages for defaming Army officer https://t.co/7GdNFinPni
— The Times Of India (@timesofindia) July 22, 2023
ಸಂಪಾದಕರ ನಿಲುವು* ಅವಮಾನದ ಘಟನೆಗೆ 22 ವರ್ಷಗಳ ಬಳಿಕ ನ್ಯಾಯ ಸಿಗುವುದರ ಅರ್ಥ `ಇಷ್ಟು ವರ್ಷಗಳ ವರೆಗೆ ವ್ಯಕ್ತಿಯ ಅವಮಾನವಾಗುತ್ತಿರುವುದು’, ಎಂದೇ ಆಗುತ್ತದೆಯೆಂದು ಯಾರಿಗಾದರೂ ಅನಿಸಿದರೆ ತಪ್ಪೇನು ? |