ಬಂಗಾಳದಲ್ಲಿ ಭಾಜಪ ಕಾರ್ಯಕರ್ತನ ಹತ್ಯೆ !

ತೃಣಮೂಲ ಕಾಂಗ್ರೆಸ್ ಗೂಂಡಾನಿಗೆ ಹಪ್ತಾ ಕೊಡದಿದ್ದರಿಂದ ಹತ್ಯೆ, ಭಾಜಪ ಆರೋಪ

ಅಸೀಂ ಸಾಹಾ

ಇಸ್ಲಾಂಪುರ (ಬಂಗಾಳ) – ಇಲ್ಲಿನ ಬಟ್ಟೆ ವ್ಯಾಪಾರಿ ಅಸೀಂ ಸಾಹಾ ಹೆಸರಿನ ಭಾಜಪ ಕಾರ್ಯಕರ್ತನ ಹತ್ಯೆ ಮಾಡಲಾಗಿದೆ. ದಾಳಿಕೋರರು ಅಂಗಡಿಗೆ ನುಗ್ಗಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ. ಈ ಕೊಲೆಯನ್ನು ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಮಾಡಿದ್ದಾನೆಂದು ಭಾಜಪ ಆರೋಪಿಸಿದೆ. ಈ ಘಟನೆಯಿಂದ ಭಾರತೀಯ ಜನತಾ ಯುವಾ ಮೋರ್ಚಾ ಇಲ್ಲಿ 12 ಗಂಟೆಗಳ ಬಂದ್ ಗೆ ಕರೆ ನೀಡಿತ್ತು.

ಉತ್ತರ ದಿನಾಪುರದ ಭಾಜಪದ ಜಿಲ್ಲಾಧ್ಯಕ್ಷ ಸುರ್ಜಿತ್ ಸೇನ್ ಇವರು, ಅಸೀಂ ಸಾಹಾನ ಬಳಿ ತೃಣಮೂಲ ಕಾಂಗ್ರೆಸ್ ಗೂಂಡಾ ಹಪ್ತಾ ಕೇಳುತ್ತಿದ್ದರು. ಸಾಹಾ ಹಪ್ತಾ ನೀಡಲು ನಿರಾಕರಿಸಿದ್ದರಿಂದ ಕೊಲೆ ಮಾಡಿದ್ದಾರೆಂದು ಆರೋಪಿಸಿದ್ದಾರೆ. ಇಲ್ಲಿ ತೃಣಮೂಲ ಗೂಂಡಾಗಳಿಗೆ ಹಪ್ತಾ ಕೊಡದೇ ಯಾರೂ ವ್ಯಾಪಾರ ಮಾಡುವಂತಿಲ್ಲ. ಸರಕಾರ ಇದನ್ನು ನಿರ್ಲಕ್ಷಿಸುತ್ತಿದೆ. ಇಂದು ಸಾಹಾನ ಸಂದರ್ಭದಲ್ಲಿ ನಡೆದ ಘಟನೆ ನಾಳೆ ಬೇರೆ ಯಾರೊಂದಿಗೂ ಸಂಭವಿಸಬಹುದಾಗಿದೆ ಎಂದು ಹೇಳಿದರು.

ಸಂಪಾದಕರ ನಿಲುವು

* ಬಂಗಾಳದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಪ್ರತಿದಿನ ಹದಗೆಡುತ್ತಿರುವಾಗ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಾತ್ರ ನಿಷ್ಕ್ರಿಯರಾಗಿದ್ದಾರೆ. ಕೇಂದ್ರ ಸರಕಾರ ಮಮತಾ ಬ್ಯಾನರ್ಜಿಯ ಸರಕಾರವನ್ನು ವಿಸರ್ಜಿಸಿ ಅಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವುದು ಅಪೇಕ್ಷಿತವಿದೆ ಎಂದು ಜನರಿಗೆ ಅನಿಸುತ್ತಿದೆ !