೨೦೨೩ ರ ಕೊನೆಗೆ ದೇಶದಲ್ಲಿನ ಮುಸಲ್ಮಾನರ ಜನಸಂಖ್ಯೆ ಸುಮಾರು ೨೦ ಕೋಟಿಯಷ್ಟು ಆಗಲಿದೆ ! – ಸಚಿವೆ ಸ್ಮೃತಿ ಇರಾನಿ

ನವದೆಹಲಿ – ೨೦೨೩ ರ ಕೊನೆಯಲ್ಲಿ ದೇಶದಲ್ಲಿನ ಮುಸಲ್ಮಾನರ ಜನಸಂಖ್ಯೆಯು ಸುಮಾರು ೨೦ ಕೋಟಿಯಷ್ಟಾಗಲಿದೆ, ಎಂದು ಕೇಂದ್ರೀಯ ಅಲ್ಪಸಂಖ್ಯಾತ ಸಚಿವೆಯಾದ ಸ್ಮೃತಿ ಇರಾನಿಯವರು ಹೇಳಿದರು. ಅವರು ತೃಣಮೂಲ ಕಾಂಗ್ರೆಸ್ಸಿನ ಸಂಸದೆ ಮಾಲಾ ರಾಯರವರು ಲೋಕಸಭೆಯಲ್ಲಿ ಕೇಳಿದ್ದ ಪ್ರಶ್ನೆಗೆ ಲಿಖಿತ ರೂಪದಲ್ಲಿ ಉತ್ತರಿಸುತ್ತ ಈ ಮಾಹಿತಿಯನ್ನು ನೀಡಿದ್ದಾರೆ. ಮಾರ್ಚ್ ೨೦೧೪ ರಿಂದ ಇಲ್ಲಿಯವರೆಗೆ ಶೇಕಡ ೫೦.೨ರಷ್ಟು ಮುಸಲ್ಮಾನ ಕುಟುಂಬಗಳು ಮೊಟ್ಟಮೊದಲ ಬಾರಿ ಹೊಸ ಮನೆ ಅಥವಾ ಫ್ಲಾಟ್ ಗಳನ್ನು ಖರೀದಿಸಿದ್ದಾರೆ, ಎಂಬ ಮಾಹಿತಿಯನ್ನೂ ಸ್ಮೃತಿ ಇರಾನಿಯವರು ನೀಡಿದ್ದಾರೆ. ಪ್ರಸಾರ ಮಾಧ್ಯಮದಿಂದ ನೀಡಿರುವ ವಾರ್ತೆಯ ಅನುಸಾರ, ೨೦೧೧ರ ಜನಗಣತಿಯ ಪ್ರಕಾರ ಭಾರತದಲ್ಲಿನ ಮುಸಲ್ಮಾನರ ಸಂಖ್ಯೆಯು ೧೭ ಕೋಟಿ ೨೦ ಲಕ್ಷದಷ್ಟಿತ್ತು. ಈ ಸಂಖ್ಯೆಯು ದೇಶದ ಒಟ್ಟು ಜನಸಂಖ್ಯೆಯ ಶೇಕಡ ೧೪.೨ ರಷ್ಟಿತ್ತು.