ಸರಕಾರ ಚರ್ಚೆಗಾಗಿ ಸಿದ್ಧರಿದ್ದರೂ ವಿರೋಧ ಪಕ್ಷಗಳಿಂದ ದಾಂಧಲೆ !
ನವದೆಹಲಿ – ಸಂಸತ್ತಿನ ಮಳೆಗಾಲ ಅಧಿವೇಶನದಲ್ಲಿ ಜುಲೈ ೨೧ ರಂದು ಮಣಿಪುರ ಘಟನೆಗೆ ಸಂಬಂಧಿಸಿದಂತೆ ವಿರೋಧ ಪಕ್ಷಗಳು ದಾಂದಲೆ ಮಾಡಿದ್ದರಿಂದ ಲೋಕಸಭೆಯ ಕೆಲಸವನ್ನು ಮಧ್ಯಾಹ್ನ ೧೨.೩೦ ರ ತನಕ ಮತ್ತು ರಾಜ್ಯಸಭೆಯನ್ನು ೨.೩೦ ರ ತನಕ ಸ್ಥಗಿತಗೊಳಿಸಲಾಯಿತು. ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಲೋಕಸಭೆಯಲ್ಲಿ ‘ಮಣಿಪುರದ ಮಹಿಳೆಯರನ್ನು ಬೆತ್ತಲೆಗೊಳಿಸಿದ ಘಟನೆಯ ಬಗ್ಗೆ ಚರ್ಚಿಸಲಾಗುವುದು’ ಎಂದು ಹೇಳಿದರು; ಆದರೆ ವಿರೋಧ ಪಕ್ಷಗಳು ಗದ್ದಲ ಮಾಡುತ್ತಲೇ ಇದ್ದವು. ಮಣಿಪುರದಲ್ಲಿನ ಹಿಂಸಾಚಾರದ ವಿಷಯದ ಬಗ್ಗೆ ಚರ್ಚೆಗಾಗಿ ಕಾಂಗ್ರೆಸ್ ‘ಸ್ಥಗಿತಗೊಳಿಸುವ ಪ್ರಸ್ತಾವನೆ’ಯ ಸೂಚನೆ ನೀಡಿ ಅದರ ಬಗ್ಗೆ ಚರ್ಚೆ ಮಾಡಲು ಒತ್ತಾಯಿಸಿದೆ.
#Manipur issue rocks #LokSabha Adjourned till #Monday pic.twitter.com/y9dlCp30rh
— 4tv News Channel (@4tvhyd) July 21, 2023
ಸಂಪಾದಕೀಯ ನಿಲುವುಇದರಿಂದ ಮಣಿಪುರದ ಘಟನೆಯ ಬಗ್ಗೆ ವಿರೋಧ ಪಕ್ಷಗಳಿಗೆ ಸುಖ-ದುಃಖ ಇಲ್ಲ, ಬದಲಾಗಿ ಅವರು ಉದ್ದೇಶಪೂರ್ವಕವಾಗಿ ರಾಜಕೀಯ ನಡೆಸಿ ಸರಕಾರದ ಮೇಲೆ ಒತ್ತಡ ಹೇರಲು ಬಯಸುತ್ತಾರೆಂದೆನಿಸುತ್ತದೆ ! |