ಸುಪ್ರೀಂ ಕೋರ್ಟ್ ನಿಂದ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಛೀಮಾರಿ !
ನವ ದೆಹಲಿ – ನಾವು ಸರಕಾರಕ್ಕೆ ಕ್ರಮಕೈಗೊಳ್ಳಲು ಸ್ವಲ್ಪ ಸಮಯ ನೀಡುತ್ತೇವೆ, ಇಲ್ಲದಿದ್ದರೆ ನಾವೇ ಕ್ರಮಕೈಗೊಳ್ಳುತ್ತೇವೆ. ನಿನ್ನೆಯ ವಿಡಿಯೋ ನೋಡಿ ನಮಗೆ ಬೇಸರವಾಗಿದೆ. ಈ ವಿಷಯದ ಕುರಿತು ನಾವು ಕಳವಳ ವ್ಯಕ್ತಪಡಿಸುತ್ತೇವೆ. ಸರಕಾರ ಮುಂದೆ ಬಂದು ಕ್ರಮ ಕೈಗೊಳ್ಳಬೇಕು ಎಂದು ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆಗೊಳಿಸಿದ ಪ್ರಕರಣದಲ್ಲಿ ಕ್ರಮಕೈಗೊಳ್ಳುವಂತೆ ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಇದರ ವಿಚಾರಣೆ ನಾಳೆ ಜುಲೈ 21 ರಂದು ನಡೆಯಲಿದೆ.
ನ್ಯಾಯಾಲಯವು, ಇಂತಹ ಹಿಂಸಾಚಾರದ ವಿರುದ್ಧ ತಪ್ಪಿತಸ್ಥರನ್ನು ಬಂಧಿಸಲು ಸರಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ನ್ಯಾಯಾಲಯಕ್ಕೆ ಮಾಹಿತಿ ನೀಡಬೇಕು ಎಂದು ನ್ಯಾಯಾಲಯ ಹೇಳಿದೆ. ಮಹಿಳೆಯರನ್ನು ಹಿಂಸಾಚಾರದ ಸಾಧನವಾಗಿ ಬಳಸಿಕೊಂಡು ಮನುಷ್ಯ ಜೀವನವನ್ನು ಉಲ್ಲಂಘಿಸುವುದು ಸಾಂವಿಧಾನಿಕ ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ ಎಂದು ಹೇಳಿದೆ.