ಪದೇ ಪದೇ ಹೇಳಿಯೂ ಕೂಡ ಆಹಾರ-ನೀರು ನೀಡಲಿಲ್ಲ !
ಪ್ರಯಾಗರಾಜ (ಉತ್ತರ ಪ್ರದೇಶ) – ಅಲಹಾಬಾದ್ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಗೌತಮ್ ಚೌದರಿ ಇವರು ರೈಲಿನಲ್ಲಿ ಪ್ರಯಾಣ ಮಾಡುತ್ತಿರುವಾಗ ರೇಲ್ವೆ ಇಲಾಖೆಯ ಹದಗೆಟ್ಟ ಆಡಳಿತದಿಂದಾಗಿ ಅವರಿಗೆ ಅನಾನುಕೂಲವಾಯಿತು. ಆದ್ದರಿಂದ ಇದಕ್ಕೆ ಹೊಣೆಗಾರರಾಗಿರುವ ಅಧಿಕಾರಿಗಳಿಂದ ಉಚ್ಚ ನ್ಯಾಯಾಲಯದ ಪ್ರಬಂಧಕರು ಸ್ಪಷ್ಟೀಕರಣ ಕೇಳಿದ್ದಾರೆ. ನ್ಯಾಯಮೂರ್ತಿಗಳು ಜುಲೈ ೮, ೨೦೨೩ ರಂದು ಪುರುಷೋತ್ತಮ ಎಕ್ಸ್ಪ್ರೆಸ್ ನಿಂದ ನವದೆಹಲಿ ಇಂದ ಪ್ರಯಾಗರಾಜ ಹೀಗೆ ಪ್ರಯಾಣಿಸುತ್ತಿದ್ದರು.
इलाहाबाद हाई कोर्ट के एक जज को ट्रेन में जलपान नहीं मिला तो उन्होंने रेलवे को नोटिस भिजवा दिया
◆ रेलवे ने कहा, “ट्रेन लेट होने से जज को जलपान नहीं मिला और उन्हें परेशानी हुई”
Allahabad High Court | #AllahabadHighCourt | pic.twitter.com/s0QqUYyqan
— News24 (@news24tvchannel) July 19, 2023
ಉಚ್ಚ ನ್ಯಾಯಾಲಯದ ಪ್ರಬಂಧಕರು ಬರೆದಿರುವ ಪತ್ರದ ಪ್ರಕಾರ ಆ ದಿನ ರೈಲು ೩ ಗಂಟೆ ತಡವಾಗಿ ಬಂದಿತ್ತು. ನ್ಯಾಯಾಧೀಶರು ಮೇಲಿಂದ ಮೇಲೆ ವಿಚಾರಿಸಿದ ನಂತರ ಕೂಡ ಒಬ್ಬ ರೈಲು ಸಿಬ್ಬಂದಿಯು ಸಮಾಧಾನ ಕಾರಕ ಉತ್ತರ ಸಿಗಲಿಲ್ಲ. ರೈಲಿನ ಭೋಗಿಯಲ್ಲಿ ಒಬ್ಬೆ ಒಬ್ಬ ಪೊಲೀಸರು ಉಪಸ್ಥಿತ ಇರಲಿಲ್ಲ. ಹಾಗೂ ರೈಲಿನ ಪ್ಯಾಂಟ್ರಿ ಕಾರ್ (ಖಾನಾವಳಿ) ಜನರನ್ನು ಬಹಳಷ್ಟು ಬಾರಿ ಸಂಪರ್ಕಿಸಿದರು ನ್ಯಾಯಮೂರ್ತಿ ಗೌತಮ್ ಚೌದರಿ ಇವರಿಗೆ ಆಹಾರ-ನೀರು ಕೊಡಲು ಯಾರು ಬರಲಿಲ್ಲ, ಎಂದು ಆರೋಪಿಸಲಾಗಿದೆ.
ಉಚ್ಚ ನ್ಯಾಯಾಲಯದ ಪ್ರಬಂಧಕರು ರೈಲಿನ ಹಿರಿಯ ಅಧಿಕಾರಿಗಳಿಗೆ ರೈಲು ಇಲಾಖೆಯ ಪೋಲಿಸ್ ಮತ್ತು ಪ್ಯಾಂಟ್ರಿ ಕಾರಿನ ಸಿಬ್ಬಂದಿಗಳು ನೀಡಿರುವ ಉತ್ತರದ ಪ್ರತಿ ನ್ಯಾಯಾಲಯದಲ್ಲಿ ಪ್ರಸ್ತುತಪಡಿಸಲು ಆದೇಶ ನೀಡಿದೆ.
ಸಂಪಾದಕೀಯ ನಿಲುವುನ್ಯಾಯಮೂರ್ತಿಗಳಂತಹ ಉನ್ನತ ಸ್ಥಾನದಲ್ಲಿರುವ ವ್ಯಕ್ತಿಗೆ ಇಷ್ಟೊಂದು ಅನಾನುಕೂಲ ಆಗುತ್ತಿದ್ದರೆ ಸಾಮಾನ್ಯ ಜನರ ಪರಿಸ್ಥಿತಿ ಹೇಗಿರಬಹುದು ? ಇದನ್ನು ಯೋಚಿಸದೇ ಇರುವುದೇ ಒಳಿತು ! |