ಪರಮಾಣು ಶಕ್ತಿಯಿಂದ ಬಾಹ್ಯಾಕಾಶ ನೌಕೆಯನ್ನು ನಡೆಸುವ ತಂತ್ರಜ್ಞಾನದ ಕುರಿತು ‘ಇಸ್ರೋ’ ಪ್ರಯತ್ನಶೀಲ !

ಬೆಂಗಳೂರು/ವಾಷಿಂಗ್ಟನ್ – ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಅಂದರೆ ಇಸ್ರೋ ‘ಚಂದ್ರಯಾನ 3’ ರ ಯಶಸ್ವಿ ಉಡಾವಣೆಯ ನಂತರ ಈಗ ಪರಮಾಣು ಶಕ್ತಿಯಿಂದ ನಡೆಯುವ ಯಾನದ ನಿರ್ಮಿತಿ ಮಾಡುತ್ತಿದೆ. ಇದಕ್ಕಾಗಿ ಇಸ್ರೋ ಭಾರತದಲ್ಲಿನ ಅಗ್ರಣಿ ಪರಮಾಣು ಸಂಸ್ಥೆ ‘ಭಾಭಾ ಆಟಾಮಿಕ್ ರಿಸರ್ಚ್ ಸೆಂಟರ್’ ಎಂದರೆ ‘ಬಾರ್ಕ’ ಜೊತೆಗೆ ಒಪ್ಪಂದ ಮಾಡಿಕೊಂಡಿದೆ. ವಿಜ್ಞಾನಿಗಳು ನೀಡಿದ ಮಾಹಿತಿಯ ಪ್ರಕಾರ ರಾಸಾಯನಿಕಗಳಿಂದ ಚಲಿಸುವ ಯಾನಕ್ಕೆ ಮಿತಿ ಇರುತ್ತದೆ ಆದರೆ ಪರಮಾಣು ಶಕ್ತಿಯ ಮೂಲಕ ಬಾಹ್ಯಾಕಾಶದಲ್ಲಿ ಒಂದು ಗ್ರಹದಿಂದ ಇನ್ನೊಂದು ಗ್ರಹದವರೆಗೆ ಯಾನ ಕಳಿಸುವುದು ಸಾಧ್ಯವಾಗುತ್ತದೆ. ಇನ್ನೊಂದು ಕಡೆ ಸೌರ ಶಕ್ತಿಯ ಉಪಯೋಗ ಮಾಡುವುದಾದರೇ ಸೂರ್ಯನ ಬೆಳಕು ತಲುಪದೆ ಇರುವ ಸ್ಥಳಗಳಲ್ಲಿ ಇದರ ಉಪಯೋಗ ಸಾಧ್ಯವಿಲ್ಲ. ಆದ್ದರಿಂದ ಇಸ್ರೋದಿಂದ ಪರಮಾಣು ಶಕ್ತಿಯ ಆಧಾರಿತ ಕಾರ್ಯ ಮಾಡಲು ಆರಂಭ ಮಾಡಿದೆ. ಅದಕ್ಕಾಗಿ ;ಇಸ್ರೋ; ಮತ್ತು ‘ಬಾರ್ಕ’ ಈ ಸಂಸ್ಥೆ ‘ರೇಡಿಯೋ ಥರ್ಮೋಎಲೆಕ್ಟ್ರಿಕ್ ಜನರೇಟರ್’ ಅಭಿರ್ವದ್ಧಿ ಪಡಿಸಲು ಪ್ರಯತ್ನ ಮಾಡುತ್ತಿದೆ.

‘ರೇಡಿಯೋ ಥರ್ಮೋಎಲೆಕ್ಟ್ರಿಕ್ ಜನ್ರೇಟರ್’ ಎಂದರೇನು ?

‘ರೇಡಿಯೋ ಥರ್ಮೋಎಲೆಕ್ಟ್ರಿಕ್ ಜನರೇಟರ್’ ಯಂತ್ರದಲ್ಲಿ ಕಿರಣೋತ್ಸರ್ಗ ವಸ್ತುಗಳ (‘ರೇಡಿಯೋ ಆಕ್ಟಿವ್ ಮಟೀರಿಯಲ್’ ನ ) ಉಪಯೋಗ ಮಾಡಲಾಗುತ್ತದೆ. ಈ ವಸ್ತುಗಳು ನಾಶ ಮಾಡುವುದರಿಂದ ನಿರ್ಮಾಣವಾದ ಉಷ್ಣತೆಯಿಂದ ವಿದ್ಯುತ್ ನಿರ್ಮಿಸುತ್ತದೆ. ಈ ಮೂಲಕ ಬ್ಯಾಟರಿ ಚಾರ್ಜ್ ಮಾಡಲಾಗುತ್ತದೆ. ಈ ಬ್ಯಾಟರಿ ಯಾನಕ್ಕೆ ಅವಶ್ಯಕ ಊರ್ಜೆ ಮತ್ತು ಶಕ್ತಿ ನೀಡುತ್ತದೆ. ಈ ತಂತ್ರಜ್ಞಾನ ಹೊಸದೇನಲ್ಲ, ಅಮೇರಿಕ ಬಾಹ್ಯಾಕಾಶ ಸಂಸ್ಥೆ ‘ನಾಸಾ’ ದ ‘ಕೈಸಿನಿ’ (೨೦೦೪ ನೇ ಇಸವಿ ), ‘ಕ್ಯೂರಿಯಾಸಿಟಿ’ (೨೦೧೧ ನೇ ಇಸವಿ) ಮತ್ತು ‘ವೊಯಾಜರ’ (೨೦೧೮ ನೇ ಇಸವಿ ) ಈ ಯಾನಗಳದಲ್ಲಿ ಈ ರೀತಿಯ ತಂತ್ರಜ್ಞಾನವನ್ನು ಉಪಯೋಗಿಸಲಾಗಿತ್ತು.

ಯಾನವನ್ನು ಒಂದು ಗ್ರಹದಿಂದ ಇನ್ನೊಂದು ಗ್ರಹದ ಮೇಲೆ ವೇಗವಾಗಿ ಕೊಂಡೊಯ್ಯುವ ತಂತ್ರಜ್ಞಾನದ ಮೇಲೆ ‘ನಾಸಾ’ ಕಾರ್ಯ ಆರಂಭಿಸಿದೆ !

ನಾಸಾ ಈಗ ‘ನ್ಯೂ ಕ್ಲಿಯರ್ ಥರ್ಮಲ್ ಪ್ರಾಪಲ್ಷನ್’ ಹೆಸರಿನ ಹೊಸ ತಂತ್ರಜ್ಞಾನದ ಕುರಿತು ಕಾರ್ಯ ಆರಂಭಿಸಿದೆ. ಈ ತಂತ್ರಜ್ಞಾನವನ್ನು ೨೦೨೭ ರ ವರೆಗೆ ಕಾರ್ಯಾನ್ವಿತ ಗೊಳಿಸುವ ಯೋಜನೆಯಾಗಿದೆ. ಈ ತಂತ್ರಜ್ಞಾನದ ಮೂಲಕ ಗಗನಯಾತ್ರಿಗಳು ಒಂದು ಗ್ರಹದಿಂದ ದೂರ ಇರುವ ಇನ್ನೊಂದು ಗ್ರಹದ ಮೇಲೆ (ಉದಾ. ಚಂದ್ರ, ಮಂಗಳ ಗ್ರಹ ಮುಂತಾದ) ಬಹಳ ವೇಗದಿಂದ ಹೋಗಲು ಸಾಧ್ಯವಾಗುತ್ತದೆ. ಕೇವಲ ಕಡಿಮೆ ಸಮಯದಲ್ಲಿ ಅಷ್ಟೇ ಅಲ್ಲದೆ ಇದರ ಪ್ರಯಾಣ ಅಪಾಯಕಾರಿ ಕಡಿಮೆ ಆಗಿರುವುದು. ಚೀನಾ ಕೂಡ ಈ ರೀತಿಯ ತಂತ್ರಜ್ಞಾನದ ಕುರಿತು ಕಾರ್ಯ ಮಾಡುತ್ತಿದೆ.