ಭಾರತಕ್ಕೆ ಬ್ರಿಟಿಷರು ‘ಇಂಡಿಯಾ’ ಹೆಸರನ್ನು ಕೊಟ್ಟಿದ್ದರಿಂದ ನಾವು ವಸಾಹತುಶಾಹಿಯನ್ನು ತೊಡೆದು ಹಾಕಬೇಕು ! – ಹೀಮಂತ ಬಿಸ್ವಾ ಸರಮಾ

ಹಿಮಂತ ಬಿಸ್ವಾಸ್ ಸರ್ಮ

ಹೊಸ ದೆಹಲಿ – ನಮ್ಮ ದೇಶದ ಸಂಸ್ಕೃತಿಯಲ್ಲಿ ಇಲ್ಲಿಯವರೆಗಿನ ಹೋರಾಟವು ‘ಭಾರತ’ ಮತ್ತು ‘ಇಂಡಿಯಾ’ದಲ್ಲೇ ಸುತ್ತಿತ್ತುದೆ. ಬ್ರಿಟಿಷರು ನಮ್ಮ ದೇಶಕ್ಕೆ ‘ಇಂಡಿಯಾ’ ಹೆಸರನ್ನು ಕೊಟ್ಟರು. ಇಂತಹ ವಸಾಹತುಶಾಹಿಯಿಂದ ಮುಕ್ತಿ ಹೊಂದಲು ನಾವು ನಿರಂತರವಾಗಿ ಶ್ರಮಿಸಬೇಕು. ನಮ್ಮ ಪೂರ್ವಜರು ‘ಭಾರತ’ಕ್ಕಾಗಿ ಹೋರಾಡಿದರು ಮತ್ತು ನಾವು ಭಾರತಕ್ಕಾಗಿಯೇ ಕೆಲಸ ಮಾಡುತ್ತೇವೆ, ಎಂದು ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವಾ ಸರಮ ಟ್ವೀಟ್ ಮಾಡಿದ್ದಾರೆ. ಭಾಜಪ ವಿರೋಧಿ ಪಕ್ಷಗಳು ‘ಇಂಡಿಯಾ’ ಹೆಸರಿನಲ್ಲಿ ಮೈತ್ರಿಕೂಟ ಮಾಡಿಕೊಂಡ ನಂತರ ಸರಮ ಈ ಟ್ವೀಟ್ ಮಾಡಿದ್ದಾರೆ.

ಸಂಪಾದಕೀಯ ನಿಲುವು

ಭಾರತ ಸರಕಾರವು ಅಧೀಕೃತವಾಗಿ ದೇಶದ ಹೆಸರನ್ನು ‘ಭಾರತ’ ಎಂದು ಘೋಷಿಸಬೇಕು ಮತ್ತು ‘ಇಂಡಿಯಾ’ ಹೆಸರನ್ನು ತೆಗೆದುಹಾಕಬೇಕು ಹೀಗೆ ಭಾರತೀಯರಿಗೆ ಅನಿಸುತ್ತಿದೆ !