ಬೆಂಗಳೂರು – ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಾ ರಕ್ತಪಾತಕ್ಕೆ ಸಂಚು ರೂಪಿಸಿದ್ದ 5 ಶಂಕಿತ ಭಯೋತ್ಪಾದಕರನ್ನು ಬಂಧಿಸಿದ್ದಾರೆ. ಸಿಕ್ಕಿಬಿದ್ದವರನ್ನು ಸೈಯ್ಯದ್, ಸುಹೇಲ್ ಉಮೇರ್, ಜುನೇದ್, ಮುದಾಸಿನ್ ಹಾಗೂ ಜಾಹೀದ್ ಎಂದು ಗುರುತಿಸಲಾಗಿದೆ. 2017 ರಲ್ಲಿ ಅಪಹರಣ ಮತ್ತು ಕೊಲೆಗೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಜೈಲುವಾಸವಾಗಿದ್ದರು, ಜೈಲಿನಲ್ಲಿದ್ದುಕೊಂಡೇ ಉಗ್ರರ ಜೊತೆ ಸಂಪರ್ಕದಲ್ಲಿದ್ದರು.
Breaking: ವಿಧ್ವಂಸಕ ಕೃತ್ಯಕ್ಕೆ ತಯಾರಿ ನಡೆಸಿದ್ದ ಆರೋಪ; ಬೆಂಗಳೂರಲ್ಲಿ 5 ಶಂಕಿತ ಉಗ್ರರ ಬಂಧನ #Newsfirstlive #Newsfirstkannada #terrorist #arrest https://t.co/CDfqzjNfRR
— NewsFirst Kannada (@NewsFirstKan) July 19, 2023
ಜೈಲಿನಿಂದ ಹೊರಬಂದನಂತರ ಅವರು ರಕ್ತಪಾತಕ್ಕೆ ಸಂಚನ್ನು ರೂಪಿಸಿದ್ದರು. ಸ್ಪೋಟಕ್ಕಾಗಿ ಬೇಕಾಗಿರುವ ಎಲ್ಲ ವಸ್ತುಗಳನ್ನು ಸಿದ್ಧಪಡಿಸಿದ್ದರು. ಈ ಬಗ್ಗೆ ಗುಪ್ತಚರ ಇಲಾಖೆಗೆ ನಿಖರವಾಗಿ ಮಾಹಿತಿ ಸಿಗುತ್ತಲೇ ಅವರು ಬೆಂಗಳುರು ಸಿಸಿಬಿಯವರಿಗೆ ಮಾಹಿತಿ ನೀಡಿದ್ದಾರೆ. ತದನಂತರ ತಕ್ಷಣ ಕಾರ್ಯಪ್ರವೃತರಾದ ಸಿಸಿಬಿ ಪೊಲೀಸರು ಶಂಕಿತರ ಲೊಕೆಶನ್ ಕಂಡು ಹಿಡಿದು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇದರಲ್ಲಿ ಗುಪ್ತಚರ ಇಲಾಖೆ, ಎನ್ಐಎ ಹಾಗೂ ಸಿಸಿಬಿ ತಂಡಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದಾರೆ.
4 walkie-talkies, 7 country-made pistols, 42 live bullets, 2 daggers, 2 satellite phones and 4 grenades recovered from the 5 suspected terrorists arrested by Central Crime Branch (CCB), Karnataka. https://t.co/qqDJb06lOw pic.twitter.com/HTOMHXmkof
— ANI (@ANI) July 19, 2023
(ಸೌಜನ್ಯ – Republic World)