ಉಜ್ಜಯಿನಿಯಲ್ಲಿ `ಭಗವಾನ್ ಮಹಾಕಾಲ’ನ ಪಲ್ಲಕ್ಕಿ ಯಾತ್ರೆಯಲ್ಲಿ ಪಾಲ್ಗೊಂಡಿದ್ದವರ ಮೇಲೆ ಉಗುಳಿದ 3 ಮಕ್ಕಳ ಬಂಧನ !

ಉಜ್ಜಯಿನಿ (ಮಧ್ಯಪ್ರದೇಶ) – ಹಿಂದೂಗಳ ಧಾರ್ಮಿಕ ಯಾತ್ರೆಯ ಸಮಯದಲ್ಲಿ ಛಾವಣಿಯಿಂದ ಉಗುಳಿದ ಘಟನೆ ನಡೆದಿದೆ. ಈ ಪ್ರಕರಣದಲ್ಲಿ ಮೂವರನ್ನು ಬಂಧಿಸಲಾಗಿದೆ. ಮೂವರೂ ಅಪ್ರಾಪ್ತರಾಗಿರುವುದರಿಂದ ಗುರುತನ್ನು ಬಹಿರಂಗಪಡಿಸಲಾಗಿಲ್ಲ. ಈ ಪ್ರಕರಣದಲ್ಲಿ ಹಿಂದೂತ್ವನಿಷ್ಠ ಸಂಘಟನೆಗಳು ಪೊಲೀಸರಿಗೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಅವರು ವಾಸಿಸುತ್ತಿರುವ ಮನೆಯ ದಾಖಲೆಗಳನ್ನು ಪರಿಶೀಲಿಸಬೇಕು ಎಂದು ಒತ್ತಾಯಿಸಿದ್ದಾರೆ.

ಜುಲೈ 17 ರಂದು, ಮಹಾಕಾಲ’ನ ಪಲ್ಲಕ್ಕಿಯು ಇಲ್ಲಿನ ಖಾರ್ ಕುವಾ ಈ ಪ್ರದೇಶಕ್ಕೆ ತೆರಳಿತ್ತು. ಇದರಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು. ಸಂಜೆ ಟಾಕಿ ಚೌಕದ ಬಳಿ, ಜನರು ತಮ್ಮ ಮನೆಯ ಛಾವಣಿಯ ಮೇಲೆ ನಿಂತು ಪಲ್ಲಕ್ಕಿಯನ್ನು ನೋಡುತ್ತಿರುವಾಗ ಒಬ್ಬ ಹುಡುಗ ಪಲ್ಲಕ್ಕಿಯಲ್ಲಿ ಭಾಗವಹಿಸಿದವರ ಮೇಲೆ ಉಗುಳುವುದು ಕಂಡುಬಂತು. ಜನರು ಈ ಘಟನೆಯನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಿದ ಬಳಿಕ ಹಿಂದೂತ್ವನಿಷ್ಠ ಸಂಘಟನೆಗಳು ಪೊಲೀಸ ಠಾಣೆಗೆ ತೆರಳಿ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು.

ಮುಸಲ್ಮಾನರಿಂದ ಪೊಲೀಸರ ಮುಂದೆ ಅಪ್ರಾಪ್ತ ಹುಡುಗರ ಪರ ಮಾತನಾಡುವ ಪ್ರಯತ್ನ !

ಪಲ್ಲಕ್ಕಿಯಲ್ಲಿ ಭಾಗವಹಿಸಿದ್ದವರ ಮೇಲೆ ಉಗುಳುತ್ತರುವ 3 ಅಪ್ರಾಪ್ತರ ಹುಡುಗರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಳಿಕ ಪೊಲೀಸ ಠಾಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸಲ್ಮಾನರು ಒಗ್ಗೂಡಿ ಅಪ್ರಾಪ್ತ ಹುಡುಗರ ಪರವಹಿಸಲು ಪ್ರಯತ್ನಿಸಿದರು.

ಸಂಪಾದಕರ ನಿಲುವು

* ಹಿಂದೂಗಳ ಧಾರ್ಮಿಕ ಯಾತ್ರೆಯ ಸಂದರ್ಭದಲ್ಲಿ ಇಂತಹ ಕೃತ್ಯಗಳನ್ನು ಮಾಡಲು ಧೈರ್ಯ ತೋರುವುದು ಬಹುಸಂಖ್ಯಾತ ಹಿಂದೂಗಳಿಗೆ ನಾಚಿಕೆಗೇಡಿನ ಸಂಗತಿ !