ಅಣುಬಾಂಬ್ ಅನ್ನು ಕಂಡು ಹಿಡಿದ ವಿಜ್ಞಾನಿ ಜೆ. ರಾಬರ್ಟ ಓಪನಹ್ಯಾಮ್ನರ್ ಇವರ ಜೀವನಾಧಾರಿತ ಕುರಿತು ಚಲನಚಿತ್ರ ನಿರ್ಮಾಣ

ಸಿನೆಮಾದಲ್ಲಿ ಓಪನಹ್ಯಾಮ್ನರ್ ಪಾತ್ರವನ್ನು ನಿರ್ವಹಿಸುತ್ತಿರುವ ನಟನಿಂದ ಶ್ರೀಮದ್ಭಗವದ್ಗೀತೆಯ ಅಧ್ಯಯನ !

ಜೆ. ರಾಬರ್ಟ್ ಓಪನಹ್ಯಾಮ್ನರ್

ನವದೆಹಲಿ – ಅಣುಬಾಂಬ್ ಕಂಡು ಹಿಡಿದ ವಿಜ್ಞಾನಿ ಜೆ. ರಾಬರ್ಟ್ ಓಪನಹ್ಯಾಮ್ನರ್ ಇವರ ಜೀವನಾಧಾರಿತ `ಓಪನಹ್ಯಾಮ್ನರ್‘ ಶೀರ್ಷಿಕೆಯ ಆಂಗ್ಲ ಚಲನಚಿತ್ರವನ್ನು ನಿರ್ಮಿಸಲಾಗಿದೆ. ಕ್ರಿಸ್ಟೊಫರ ನೊಲನ್ ಇವರು ಈ ಚಲನಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಚಿತ್ರ ಜುಲೈ 21 ರಂದು ಬಿಡುಗಡೆಯಾಗಲಿದೆ. ಓಪನಹ್ಯಾಮ್ನರ್ ಇವರು ಅಣುಬಾಂಬ್ ಅನ್ನು ಸಿದ್ಧಪಡಿಸಿದ ಬಳಿಕ ಅಮೇರಿಕಾ ಎರಡನೇ ಮಹಾಯುದ್ಧದ ಸಮಯದಲ್ಲಿ ಅದನ್ನು ಜಪಾನ್ ನ ನಾಗಾಸಾಕಿ ಮತ್ತು ಹಿರೋಶಿಮಾ ಈ ಅವಳಿ ನಗರಗಳ ಮೇಲೆ ಹಾಕಿತ್ತು. ಇದರಲ್ಲಿ ಲಕ್ಷಾಂತರ ಜನರು ಸಾವನ್ನಪ್ಪಿದ್ದರಿಂದ ಓಪನಹ್ಯಾಮ್ನರ್ ಇವರಿಗೆ ನಂತರ ಬಹಳ ಪಶ್ಚಾತ್ತಾಪವಾಗಿತ್ತು. ಮತ್ತು ಆ ಕಾಲದಲ್ಲಿ ಶ್ರೀಮದ್ಭಗವದ್ಗೀತೆಯಿಂದ ಅವರಿಗೆ ಶಾಂತಿ ಸಿಕ್ಕಿತ್ತು ಎಂದು ಅವರು ಹೇಳಿದ್ದರು. ಶ್ರೀಮದ್ಬವದ್ಗೀತೆಯನ್ನು ಓದಲು ಓಪನಹ್ಯಾಮ್ನರ್ ಸಂಸ್ಕೃತವನ್ನು ಕಲಿತರು. ಚಿತ್ರದಲ್ಲಿ ಅವರ ಪಾತ್ರವನ್ನು ನಿರ್ವಹಿಸಿರುವ ನಟ ಕೂಡ ಶ್ರೀಮದ್ಬಗವದ್ಗೀತೆಯನ್ನು ಅಧ್ಯಯನ ಮಾಡಿರುವುದಾಗಿ ಹೇಳಿದ್ದಾರೆ.

1. ಸಿಲಿಯನ್ ಮರ್ಫಿ ಇವರು ಈ ಸಿನೆಮಾದಲ್ಲಿ ಜೆ ರಾಬರ್ಟ ಓಪನಹ್ಯಾಮರ್ ಇವರ ಪಾತ್ರವನ್ನು ನಿರ್ವಹಿಸಿದ್ದಾರೆ. ನಟ ಸಿಲಿಯನ್ ಮರ್ಫಿಯವರು ಓಪನಹ್ಯಾಮರ್ ಇವರ ಪಾತ್ರದ ಬಗ್ಗೆ ಹೇಳುತ್ತಾ, `ಈ ಪಾತ್ರವನ್ನು ನಿರ್ವಹಿಸಲು ನಾನು ಶ್ರೀಮದ್ಭಗವದ್ಗೀತೆಯನ್ನು ಓದಿದ್ದೇ. ಓಪನಹ್ಯಾಮರ್ ಇವರ ಮಾನಸಿಕತೆ ಮತ್ತು ವಿಚಾರಸರಣಿಯನ್ನು ಅಧ್ಯಯನ ಮಾಡಲು ಗೀತೆಯ ಅಧ್ಯಯನ ಮಾಡಿದ್ದೇನೆ. ಗೀತೆ ಒಂದು ಸುಂದರ ಪುಸ್ತಕವಾಗಿದೆ. ಅದು ಅತ್ಯಂತ ಸ್ಫೂರ್ತಿದಾಯಕವಾಗಿದೆ. ಓಪನಹ್ಯಾಮರ್ ಇವರಿಗೂ ಆ ಸಮಯದಲ್ಲಿ ಈ ಪುಸ್ತಕದ ಆವಶ್ಯಕತೆಯಿತ್ತು. ನಂತರವೂ ಅವರಿಗೆ ಗೀತೆಯಿಂದ ಲಾಭವಾಗುತ್ತಿತ್ತು ಎಂದು ಹೇಳಿದ್ದಾರೆ.

2. ಜೆ ರಾಬರ್ಟ ಓಪನಹ್ಯಾಮರ್ ಇವರು ವಿಶ್ವದ ಮೊದಲ ಅಣುಬಾಂಬ್ ಸ್ಫೋಟ ಯಶಸ್ವಿಯಾದಾಗ, ನನ್ನ ಮನಸ್ಸಿನಲ್ಲಿ ಶ್ರೀಮದ್ಭವದ್ಗೀತೆಯಿಂದ ಭಗವಾನ ಶ್ರೀಕೃಷ್ಣನೇ ಮಾತನಾಡುತ್ತಿರುವಂತೆ ನನಗೆ ಕೇಳಿಸಿತ್ತು ಎಂದು ಅವರು ಈ ಹಿಂದೆ ಹೇಳಿದ್ದರು, ನಾನೀಗ ಜಗತ್ತನ್ನು ವಿನಾಶಗೊಳಿಸುವ ಮೃತ್ಯವಾಗಿದ್ದೇನೆ ಎಂದು ಅವರು ಹೇಳುತ್ತಿದ್ದರು.

ಸಂಪಾದಕರ ನಿಲುವು

* ಅಣುಬಾಂಬ್ ನಿಂದಾಗಿ ಆಗಿದ್ದ ಹಾನಿಯ ಬಗ್ಗೆ ಪಶ್ಚಾತ್ತಾಪ ಪಡುವ ಓಪನಹ್ಯಾಮ್ನರ್ ಗೆ ಶ್ರೀಮದ್ಭಗವದ್ಗೀತೆಯಿಂದಲೇ ಶಾಂತಿ ಸಿಕ್ಕಿತು !

* ಗೀತೆಯ ಮಹತ್ವ ಪಾಶ್ಚಿಮಾತ್ಯರಿಗೆ ತಿಳಿಯುತ್ತದೆ; ಆದರೆ ಭಾರತದಲ್ಲಿ ಶಾಲೆಯಲ್ಲಿ ಗೀತೆಯನ್ನು ಕಲಿಸುವ ವಿಷಯ ಬಂದಾಗ ಜಾತ್ಯತೀತವಾದಿ ಆಡಳಿತಗಾರರು ಅದನ್ನು ವಿರೋಧಿಸುತ್ತಾರೆ. ಇದು ವಿಷಾದನೀಯ !