ಯಮುನಾ ನದಿಯ ಪ್ರವಾಹದಿಂದ ದೆಹಲಿಯಲ್ಲಿ ಹಾಹಾಕಾರ !

ನವ ದೆಹಲಿ – ಉತ್ತರ ಭಾರತದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ದೇಶದ ರಾಜಧಾನಿ ದೆಹಲಿಯಲ್ಲೂ ಹಾಹಾಕಾರವಾಗಿದೆ. ಹರಿಯಾಣದ ಹಥನೀಕುಂಡ ಡ್ಯಾಮ್‌ನಿಂದ ಬೃಹತ್ಪ್ರಮಾಣದಲ್ಲಿ ನೀರು ಬಿಟ್ಟಿರುವುದರಿಂದ ಯಮುನಾ ನದಿಯ ಮಟ್ಟವು ೪೫ ವರ್ಷದ ದಾಖಲೆಯನ್ನು ಮುರಿಯುತ್ತಾ ೨೦೮.೬೬ ಮೀಟರ್‌ಗಿಂತಲೂ ಮೇಲೇರಿದೆ.

1. ದೆಹಲಿಯ ತಗ್ಗು ಪ್ರದೇಶ ನೀರಿನಲ್ಲಿ ಮುಳುಗಿ ಕಂಪುಕೋಟೆಯ ಭಾಗದಲ್ಲೂ ನೀರು ನುಗ್ಗಿದೆ. ಜೊತೆಗೆ ಅನೇಕ ಭಾಗಗಳಲ್ಲಿ ರಸ್ತೆ ಮೇಲಿನ ಟ್ರಾಕ್ ಮತ್ತು ಬಸ್ಸುಗಳು ಸಂಪೂರ್ಣ ಮುಳುಗಿವೆ.

2. ಪ್ರವಾಹದ ನೀರು ಅನೇಕ ಕಟ್ಟಡಗಳಲ್ಲಿ ಮತ್ತು ಮನೆಗಳಲ್ಲಿ ನುಗ್ಗಿದೆ.

3. ಇಲ್ಲಿನ ‘ಸಿವಿಲ್ ಲಾಯಿನ್ಸ’ ಭಾಗವೂ ನೀರಿನೊಳಗೆ ಮುಳುಗಿ ಮುಖ್ಯಮಂತ್ರಿ ಅರವಿಂದ ಕೇಜರೀವಾಲ ಇವರ ಸರಕಾರಿ ನಿವಾಸದಿಂದ ಕೇವಲ ೩೫೦ ಮೀಟರ ದೂರ ಇದೆ.

4. ನಗರದ ಚಾಂದಗಿರಾಮ ಆಖಾಡಾ, ನಿಗಮ ಬೋಧ ಘಾಟ, ಪಾಂಡವನಗರ, ಗಾಂಧೀನಗರ ಮತ್ತು ಭಜನಪುರಾ ಈ ಭಾಗಗಳಲ್ಲೂ ನೀರು ನುಗ್ಗಿದೆ.

೫. ರಾಷ್ಟ್ರೀಯ ವಿಪತ್ತು ನಿವಾರಣೆ ಪಡೆಯ ಹಲವಾರು ಗುಂಪುಗಳು ಪ್ರವಾಹದಲ್ಲಿ ಸಿಕ್ಕಿರುವ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಲಾಂತರ ಮಾಡುವ ಕಾರ್ಯವನ್ನು ಮಾಡುತ್ತಿವೆ.