ಥೈಲ್ಯಾಂಡ್ ನಲ್ಲಿ ನಡೆಯಲಿರುವ ಏಷ್ಯನ್ ಅಥ್ಲೆಟಿಕ್ಸ ಸ್ಪರ್ಧೆಗೆ ಶ್ರೀ ಹನುಮಾನ್ ಅಧಿಕೃತ ಮ್ಯಾಸ್ಕಾಟ್ !

ಬ್ಯಾಂಕಾಕ್ (ಥೈಲ್ಯಾಂಡ) – ಇಲ್ಲಿ ನಡೆಯಲಿರುವ ಏಷ್ಯನ್ ಅಥ್ಲೆಟಿಕ್ಸ ಸ್ಪರ್ಧೆಗೆ ಶ್ರೀ ಹನುಮಂತನನ್ನು ಅಧಿಕೃತ ಮ್ಯಾಸ್ಕಾಟ್ ಎಂದು ಘೋಷಿಸಿದೆ. ಏಷ್ಯನ್ ಅಥ್ಲೆಟಿಕ್ಸ ಅಸೋಸಿಯೇಶನ ಜಾಲತಾಣದಲ್ಲಿ ಈ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ. ಇದರಲ್ಲಿ ಭಗವಾನ ಹನುಮಂತನು ಶ್ರೀರಾಮನ ಸೇವೆಯಲ್ಲಿ ವೇಗ, ಶಕ್ತಿ, ಸಾಹಸ ಮತ್ತು ಬುದ್ಧಿಶಕ್ತಿಯ ಮೂಲಕ ಅಸಾಮಾನ್ಯ ಸಾಮರ್ಥ್ಯಗಳನ್ನು ಪ್ರದರ್ಶಿಸಿದ್ದನು. ಶ್ರೀ ಹನುಮಂತನ ಬಹುದೊಡ್ಡ ಕ್ಷಮತೆಯೆಂದರೆ ಅವನ ದೃಢ ನಿಷ್ಠೆ ಮತ್ತು ಭಕ್ತಿಯಾಗಿದೆ. ಆದ್ದರಿಂದಲೇ ನಾವು ಶ್ರೀ ಹನುಮಂತನನ್ನು ಮ್ಯಾಸ್ಕಾಟ್ ಮಾಡಲು ನಿರ್ಧರಿಸಿದ್ದೇವೆ. ಏಷ್ಯನ್ ಅಥ್ಲೆಟಿಕ್ಸ ಸ್ಪರ್ಧೆಯ ಲೊಗೊದ ಅಡಿಯಲ್ಲಿ ನಡೆಯಲಿರುವ ಸ್ಪರ್ಧೆಯಲ್ಲಿ ಭಾಗವಹಿಸುವ ಕ್ರೀಡಾಪಟುಗಳ ಕಲೆ, ಸಾಂಘಿಕ ಮನೋಭಾವ, ಪರಿಶ್ರಮ ಮತ್ತು ಕ್ರೀಡೆಯ ಬಗ್ಗೆ ಸಮರ್ಪಣಾ ಭಾವವನ್ನು ಪ್ರತಿನಿಧಿಸುತ್ತದೆ.