ರಾಜಸ್ಥಾನದಲ್ಲಿ ಆನ್‌ಲೈನ್ ಆಟದಿಂದಾಗಿ ಮಾನಸಿಕ ಸಮತೋಲನ ಕಳೆದುಕೊಂಡ ಬಾಲಕ !

ಜೈಪುರ (ರಾಜಸ್ಥಾನ) – ರಾಜಸ್ಥಾನದಲ್ಲಿ ಬಾಲಕನೊಬ್ಬ ಆನ್‌ಲೈನ್ ಆಟಗಳಿಗೆ ವ್ಯಸನಿಯಾಗಿ ಮಾನಸಿಕ ಸಮತೋಲನ ಕಳೆದುಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಆತ ನಡುಗುತ್ತಿರುವ ಒಂದು ವಿಡಿಯೋ ವೈರಲ್ ಆಗಿದೆ. ಆತನು ‘ಫ್ರೀ ಫೈರ್’ನಂತಹ ಆಟಗಳಿಗೆ ವ್ಯಸನಿಯಾಗಿರುವುದರಿಂದ ಈ ಸ್ಥಿತಿಗೆ ಬಂದಿದ್ದಾನೆ. ಆನ್‌ಲೈನ್ ಆಟಗಳಲ್ಲಿ ಸೋಲುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲದೆ ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಅಥವಾ ಅವರ ಮಾನಸಿಕ ಸಮತೋಲನವನ್ನು ಕಳೆದುಕೊಳ್ಳುತ್ತಾರೆ. ಒಂದು ಅಧ್ಯಯನದ ಪ್ರಕಾರ ಆನ್‌ಲೈನ್ ಆಟಗಳನ್ನು ಆಡುವ ಈ ಮಕ್ಕಳು ವಾರದಲ್ಲಿ ಸರಾಸರಿ ೪ ರಾತ್ರಿಗಳು ಆಟವಾಡುತ್ತಾರೆ. ಅವರಲ್ಲಿ ಶೇ. ೩೬ ರಷ್ಟು ಮಕ್ಕಳು ಬೇಕಂತಲೇ ತಡವಾಗಿ ಮಲಗುತ್ತಾರೆ.

ಸಂಪಾದಕರ ನಿಲುವು

ವಿಜ್ಞಾನದಲ್ಲಿ ಆಗಿರುವ ಪ್ರಗತಿಯ ಲಾಭವನ್ನು ಅತಿಯಾಗಿ ಪಡೆದರೆ ಏನಾಗುತ್ತದೆ, ಎಂಬುದು ಈ ಘಟನೆಯಿಂದ ತಿಳಿದುಬರುತ್ತದೆ ! ಇದಕ್ಕಾಗಿ ಇಂತಹ ವಸ್ತುಗಳನ್ನು ಯಾರು ಬಳಸಬೇಕು ಮತ್ತು ಯಾರು ಬಳಸಬಾರದು, ಎಂದು ನಿಯಮಗಳು ಇಡುವುದು ಅವಶ್ಯಕವಾಗಿದೆ !