ಮಂಗಳೂರು – ಹಿಂದೂ ರಾಷ್ಟ್ರಸೇನೆಯ ವತಿಯಿಂದ ರಾಣೆಬೆನ್ನೂರು ತಾಲೂಕಿನ ಕೋಡಿಯಾಲ ಹೊಸಪೇಟೆ ಗ್ರಾಮದಲ್ಲಿರುವ ತಪೋಕ್ಷೇತ್ರ ಪುಣ್ಯಕೋಟಿ ಮಠದಲ್ಲಿ ‘ಧರ್ಮ ಶಿಕ್ಷಣ ಹಾಗೂ ಆಧ್ಯಾತ್ಮಿಕ ಸಾಧನೆ ಕಾರ್ಯಕ್ರಮ’ವನ್ನು ಆಯೋಜಿಸಲಾಗಿದೆ. ಇದರ ಉದ್ದೇಶದ ಬಗ್ಗೆ ತಿಳಿಸಿದ ಹಿಂದೂ ರಾಷ್ಟ್ರ ಸೇನೆಯ ರಾಜ್ಯ ವಕ್ತಾರ ಶ್ರೀ. ಸಂದೀಪ ಕೆ.ಎನ್. ಇವರು ‘ನಮ್ಮ ರಾಷ್ಟ್ರದ ಇತಿಹಾಸವನ್ನು ನೋಡಿದರೆ ನಮ್ಮ ನಾವು ನಮ್ಮ ಹಿತಶತ್ರುಗಳಿಂದಲೇ ಯುದ್ಧದಲ್ಲಿ ಸೋತಿದ್ದೇವೆ. ಇತ್ತೀಚೆಗೆ ಸಹ ನಮ್ಮಲ್ಲೇ ಇರುವಂತಹ ಹಿಂದೂ ವಿರೋಧಿಗಳಿಂದ ಹಾಗೂ ಹಿಂದೂಗಳಿಗೆ ಆಧ್ಯಾತ್ಮಿಕ ಧರ್ಮಶಿಕ್ಷಣ ಇಲ್ಲದ್ದರಿಂದ ನಮ್ಮ ಧರ್ಮ ಹಾಳಾಗುತ್ತಿದೆ. ಯಥೋ ಧರ್ಮಃ ತತೋ ಜಯಃ. ಅಂದರೆ ಧರ್ಮ ಇರುವಲ್ಲಿ ಜಯ ಸಿಗುತ್ತದೆ. ಹಾಗಾಗಿ ಹಿಂದೂಗಳಿಗೆ ಧರ್ಮ ಶಿಕ್ಷಣ ಕೊಡಬೇಕೆಂದೆ ೧೫.೭.೨೦೨೩ ರಂದು ‘ಧರ್ಮ ಶಿಕ್ಷಣ ಹಾಗೂ ಆಧ್ಯಾತ್ಮಿಕ ಸಾಧನೆ ಕಾರ್ಯಕ್ರಮ’ವನ್ನು ರಾಣೆಬೆನ್ನೂರು ತಾಲೂಕಿನ ಕೋಡಿಯಾಲ ಹೊಸಪೇಟೆ ಗ್ರಾಮದಲ್ಲಿರುವ ತಪೋಕ್ಷೇತ್ರ ಪುಣ್ಯಕೋಟಿ ಮಠದಲ್ಲಿ ಆಯೋಜಿಸಲಾಗಿದೆ. ಇದರಲ್ಲಿ ಎಲ್ಲ ಅಕ್ಕತಂಗಿಯರು, ತಾಯಂದಿರು, ಎಲ್ಲ ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಹಿಂದೂ ಬಾಂಧವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ಪ್ರಾರ್ಥಿಸುತ್ತೇನೆ’, ಎಂದು ಹೇಳಿದ್ದಾರೆ.