ಅಯೋಧ್ಯೆಯಲ್ಲಿನ ಶ್ರೀರಾಮ ಮಂದಿರದ ಕಟ್ಟಡ ಕಾಮಗಾರಿಯು ವೇಗದಿಂದ ನಡೆಯುತ್ತಿದೆ !

ಅಯೋಧ್ಯೆ (ಉತ್ತರಪ್ರದೇಶ) – ಇಲ್ಲಿನ ಶ್ರೀರಾಮಜನ್ಮಭೂಮಿಯಲ್ಲಿ ಶ್ರೀರಾಮಮಂದಿರ ನಿರ್ಮಾಣ ಕಾರ್ಯವು ವೇಗಗೊಂಡಿದ್ದು ಡಿಸೆಂಬರ್ 2023 ರ ವರೆಗೆ ದೇವಸ್ಥಾನದ ಗರ್ಭಗೃಹವು ಸಿದ್ಧವಾಗುವುದು, ಎಂದು ಹೇಳಲಾಗುತ್ತಿದೆ. ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ನ್ಯಾಸವು ಈ ಕಾಮಗಾರಿಯ ಮೇಲ್ವಿಚಾರಣೆಯನ್ನು ನೋಡುತ್ತಿದೆ. ಮುಂದಿನ ವರ್ಷದ ಮಕರಸಂಕ್ರಾಂತಿಯ ಸಮಯದಲ್ಲಿ ದೇವಸ್ಥಾನದ ಉದ್ಘಾಟನೆ ನಡೆಸಲಾಗುವುದು. ದೇವಸ್ಥಾನದ ಪರಿಸರದಲ್ಲಿ ಶ್ರೀಗಣೇಶ, ಸೂರ್ಯದೇವತೆ, ಶಿವ, ದುರ್ಗಾದೇವಿ, ಅನ್ನಪೂರ್ಣಾ ಹಾಗೂ ಮಾರುತಿಯ ದೇವಸ್ಥಾನಗಳನ್ನೂ ನಿರ್ಮಿಸಲಾಗುತ್ತಿದೆ.