ವಂದೇ ಭಾರತ್ ಎಕ್ಸ್‌ಪ್ರೆಸ್ ಗಾಡಿಗೆ ನೀಲಿ ಬಣ್ಣದ ಬದಲಾಗಿ ಕೇಸರಿ ಬಣ್ಣ ನೀಡಲಾಗುವುದು !

ರೈಲ್ವೆ ಸಚಿವ ಶ್ರೀ. ಅಶ್ವಿನಿ ವೈಷ್ಣವ ಅವರ ಘೋಷಣೆ

ಚೆನ್ನೈ (ತಮಿಳುನಾಡು) – ರೇಲ್ವೆಯು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲ್ವೇಯ ಬಣ್ಣವನ್ನು ಬದಲಾಯಿಸಿದೆ ಮತ್ತು ಅದನ್ನು ನೀಲಿ ಬಣ್ಣದ ಬದಲಾಗಿ ಕೇಸರಿ ಬಣ್ಣವನ್ನಾಗಿ ಮಾಡಲಾಗಿದೆ ಎಂದು ರೈಲ್ವೆ ಸಚಿವ ಶ್ರೀ. ಅಶ್ವಿನಿ ವೈಷ್ಣವ ಅವರು ಘೋಷಿಸಿದರು. ಅವರು, ಭಾರತದ ಧ್ವಜದಿಂದ ಸ್ಫೂರ್ತಿ ಪಡೆದು ಈ ಬಣ್ಣವನ್ನು ನೀಡಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು. ಇದಲ್ಲದೆ, ಅನುಕೂಲಕ್ಕಾಗಿ ವಂದೇ ಭಾರತ ಗಾಡಿಯಲ್ಲಿ ೨೫ ಸಣ್ಣ ಬದಲಾವಣೆಗಳನ್ನು ಮಾಡಲಾಗಿದೆ ಎಂದು ಹೇಳಿದರು.

ಪ್ರಸ್ತುತ, ದೇಶಾದ್ಯಂತ ೨೫ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಓಡುತ್ತಿದ್ದು. ೨ ರೈಲುಗಳನ್ನು ಕಾಯ್ದಿರಿಸಲಾಗಿದ್ದು, ೨೮ ನೇ ರೈಲಿಗೆ ಪ್ರಾಯೋಗಿಕ ಆಧಾರದ ಮೇಲೆ ಕೇಸರಿ ಬಣ್ಣವನ್ನು ನೀಡಲಾಗಿದೆ. ಈ ರೈಲನ್ನು ಪ್ರಸ್ತುತ ಚೆನ್ನೈನ ‘ಇಂಟೆಗ್ರಲ್ ಕೋಚ್ ಫ್ಯಾಕ್ಟರಿ’ಯಲ್ಲಿ ಇರಿಸಲಾಗಿದೆ. ರೈಲ್ವೆ ಸಚಿವ ವೈಷ್ಣವ್ ಅವರು ಜುಲೈ ೮ ರಂದು ಕಾರ್ಖಾನೆಯನ್ನು ಪರಿಶೀಲಿಸಿದ್ದರು. ಈ ಕಾರ್ಖಾನೆಯಲ್ಲಿಯೇ ‘ಮೇಕ್ ಇನ್ ಇಂಡಿಯಾ’ ವಂದೇ ಭಾರತ್ ರೈಲುಗಳನ್ನು ಉತ್ಪಾದಿಸಲಾಗುತ್ತದೆ.

ಸಂಪಾದಕೀಯ ನಿಲುವು

ಎಲ್ಲ ವಿಷಯದಲ್ಲಿ ರಾಜಕೀಯ ಮಾಡುವ ಹಿಂದೂ ವಿರೋಧಿ ರಾಜಕೀಯ ಪಕ್ಷಗಳು ಇದನ್ನು ರೈಲ್ವೇಯ ‘ಕೇಸರಿಕರಣ’ ಮಾಡಿರುವುದಾಗಿ ಕೂಗಿದರೂ ಆಶ್ಚರ್ಯ ಪಡಬೇಕಿಲ್ಲ !