ರಾಜ್ಯದಲ್ಲಿ ‘ವಂದೇಭಾರತ’ ಎಕ್ಸಪ್ರೆಸ ಮೇಲೆ ಪುನಃ ಕಲ್ಲುತೂರಾಟ !

ಬೆಂಗಳೂರು – ರಾಜ್ಯದ ಬೆಂಗಳೂರು-ಧಾರವಾಡ ಮದ್ಯೆ ಸಂಚರಿಸುವ ‘ವಂದೇಭಾರತ’ ಎಕ್ಸಪ್ರೆಸ ಮೇಲೆ ಮತ್ತೆ ಕಲ್ಲುತೂರಾಟ ನಡೆದಿದೆ. ‘ವಂದೇಭಾರತ’ ಎಕ್ಸಪ್ರೆಸ ರಾಜ್ಯದ ಕಡೂರು-ಬೀರೂರು ರೈಲ್ವೆ ನಿಲ್ದಾಣದ ಮಧ್ಯಭಾಗದಲ್ಲಿ ಬಂದಾಗ ಕಲ್ಲು ತೂರಾಟ ನಡೆದಿದೆ. ಈ ಕಲ್ಲು ತೂರಾಟದಲ್ಲಿ ಒಂದು ಬೋಗಿಗೆ ಹಾನಿಯಾಗಿದೆ. ಈ ಪ್ರಕರಣದಲ್ಲಿ ರೈಲ್ವೆ ಇಲಾಖೆ ತನಿಖೆ ಆರಂಭಿಸಿದೆ. ಈ ಮೊದಲು ಬೆಂಗಳೂರು-ಧಾರವಾಡ ನಡುವೆ ಸಂಚರಿಸುತ್ತಿದ್ದ ಇದೇ ರೈಲಿನ ಮೇಲೆ ಕಲ್ಲು ತೂರಾಟ ನಡೆದಿತ್ತು. ಆಗಲೂ ಒಂದು ಬೋಗಿಗೆ ಸಾಕಷ್ಟು ಹಾನಿಯಾಗಿತ್ತು. ಈ ಹಿಂದೆಯೂ ದೇಶದ ಅನೇಕ ಭಾಗಗಳಲ್ಲಿ ‘ವಂದೇ ಭಾರತ’ ಎಕ್ಸಪ್ರೆಸ ಮೇಲೆ ಕಲ್ಲು ತೂರಾಟದ ಘಟನೆಗಳು ನಡೆದಿವೆ.

ಸಂಪಾದಕರ ನಿಲುವು

ರಾಷ್ಟ್ರೀಯ ಆಸ್ತಿಯನ್ನು ಹಾಳು ಮಾಡುವದು ದೇಶದ್ರೋಹವಾಗಿದೆ. ರಾಷ್ಟ್ರೀಯ ಭದ್ರತಾ ಕಾಯ್ದೆ ಅಡಿ ಇಂತಹವರನ್ನು ಜೈಲಿಗೆ ಹಾಕಿ !